ಬಂಟಕಲ್ಲು: ಕೊರಗ ಸಮುದಾಯದವರಿಗಾಗಿ ಸ್ವಾಸ್ಥ್ಯ – ಪೋಷಣ್ ಸೇವಾ ಸಂಗಮ್ ಕಾರ್ಯಕ್ರಮ
ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ನಡೆದ ಸ್ವಾಸ್ಥ್ಯ- ಪೋಷಣ್ ಸೇವಾ ಸಂಗಮ
(Bantakal) ಬಂಟಕಲ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇದರ ಉಪನಿರ್ದೇಶಕರ ಕಛೇರಿ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಕಾಪು ತಾಲೂಕು ಪಂಚಾಯತ್ ಸಹಯೋಗದೊಂದಿಗೆ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಕೊರಗ ಸಮುದಾಯದವರಿಗಾಗಿ ಸ್ವಾಸ್ಥ್ಯ- ಪೋಷಣ್ ಸೇವಾ ಸಂಗಮ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಸ್ವಚ್ಛತೆ, ತಾಯಿ ಮಗುವಿನ ಆರೋಗ್ಯ, ಪೌಷ್ಟಿಕಾಂಶ ಲಸಿಕಾಕರಣ ಮುಂತಾದವುಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕೊರಗ ಸಮುದಾಯದವರ, ಹಾಗೂ ಸಾರ್ವಜನಿಕರ ಆರೋಗ್ಯ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಪ್ರಭುರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖಾ ಮಾಹಿತಿನೀಡಿದರು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಂದ್ಯಾ ಭಟ್ ಆರೋಗ್ಯ ಮಾಹಿತಿ ನೀಡಿದರು.
ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಪ್ರೀತಿಕರವರು ಮಹಿಳಾ ಸಬಲೀಕರಣ ದ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇದರ ಅಧ್ಯಕ್ಷೆ ಲ. ಸಿಂಥಿಯಾ ಡಿ ಸೋಜ, ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಕೆ ಆರ್ ಪಾಟ್ಕರ್ ಸ್ಥಳೀಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತ ಪಾಟ್ಕರ್ ಬಾಲ ವಿಕಾಸ ಸಮಿತಿಯ ಅಧ್ಯಕ್ಷ ಸೌಮ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟಕಲ್ಲು ಅಂಗನವಾಡಿ ಕೇಂದ್ರದ ಶಿಕ್ಷಕಿ ವಿನಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಲಯನ್ಸ್ ಕ್ಲಬ್ ನ ಲ. ಅನಿತಾ ಮೆಂಡೋನ್ಸಾ, ಲ. ಶ್ರೀಲತಾ ಶೆಟ್ಟಿ ಸ್ತ್ರಿ ಶಕ್ತಿ ಗುಂಪಿನ ಸದಸ್ಯೆಯರು, ಕೊರಗ ಸಮುದಾಯದ ಫಲಾನುಭವಿಗಳು, ಸ್ಥಳೀಯ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರಾದ ಜಯಂತಿ, ಶರ್ಮಿಳಾ, ಮೀನಾಕ್ಷಿ, ವಿನೋದ, ಪ್ರತಿಭಾ ಉಪಸ್ಥಿತರಿದ್ದರು.

