• Home  
  • ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಎಲ್‌ಐಸಿಯಿಂದ ಬ್ಯಾರಿಕೇಡ್‌ಗಳ ಹಸ್ತಾಂತರ (Handover of barricades by LIC to the Udupi District Police Department)
- ಸಹಾಯ ಹಸ್ತ

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಎಲ್‌ಐಸಿಯಿಂದ ಬ್ಯಾರಿಕೇಡ್‌ಗಳ ಹಸ್ತಾಂತರ (Handover of barricades by LIC to the Udupi District Police Department)

Share: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಎಲ್‌ಐಸಿಯಿಂದ ಬ್ಯಾರಿಕೇಡ್‌ಗಳ ಹಸ್ತಾಂತರ ಸಮಾಜಮುಖಿ ಕಾಳಜಿಗೆ ಸಾಕ್ಷಿಯಾದ ಎಲ್‌ಐಸಿ ಕೈಗೊಂಡಿರುವ ಈ ಉಪಕ್ರಮ.  (Udupi) ಉಡುಪಿ : ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಶಯದೊಂದಿಗೆ ಭಾರತೀಯ ಜೀವ ವಿಮಾ ನಿಗಮದ (LIC) ಉಡುಪಿ ವಿಭಾಗದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.    ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕರಾದ ಗಣಪತಿ ಭಟ್ ರವರು ಬ್ಯಾರಿಕೇಡ್‌ಗಳನ್ನು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ  ಹರಿರಾಮ್ ಶಂಕರ್ […]

 (Udupi) ಉಡುಪಿ : ಸಾರ್ವಜನಿಕ ಸುರಕ್ಷತೆ ಮತ್ತು ಸಾಮಾಜಿಕ ಜವಾಬ್ದಾರಿಯ ಆಶಯದೊಂದಿಗೆ ಭಾರತೀಯ ಜೀವ ವಿಮಾ ನಿಗಮದ (LIC) ಉಡುಪಿ ವಿಭಾಗದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

   ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕರಾದ ಗಣಪತಿ ಭಟ್ ರವರು ಬ್ಯಾರಿಕೇಡ್‌ಗಳನ್ನು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ  ಹರಿರಾಮ್ ಶಂಕರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

  ಈ ಸಂದರ್ಭದಲ್ಲಿ ಎಲ್‌ಐಸಿಯ ಮಾರುಕಟ್ಟೆ ಪ್ರಬಂಧಕರಾದ ಗುರುರಾಜ್ ರಾವ್ ಹಾಗೂ ವಿಕ್ರಯ ಪ್ರಬಂಧಕರಾದ ದುರ್ಗಾರಾಮ್ ಶೆಣೈ ಉಪಸ್ಥಿತರಿದ್ದರು.

  ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದು, ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಪೊಲೀಸ್ ಇಲಾಖೆಯ ಕಾರ್ಯಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಈ ಕೊಡುಗೆಯನ್ನು ನೀಡಲಾಗಿದೆ.

  ಸಮಾಜದ ಹಿತ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಎಲ್‌ಐಸಿ ಕೈಗೊಂಡಿರುವ ಈ ಉಪಕ್ರಮವು ಸಂಸ್ಥೆಯ ಸಾಮಾಜಿಕ ಬದ್ಧತೆ ಮತ್ತು ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.