ಬೆಳಗಾವಿ: ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು? ಎಂದು ಹೇಳಿದ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ವಿರುದ್ಧ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ಈ ಹೇಳಿಕೆ ಸಂಬಂಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈಗ ಈ ಹೇಳಿಕೆ ಕೊಡಲು ಪ್ರಣಾಳಿಕೆ ಕಾರಣವಾಗಿದೆ.
ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ಕಾಯಿದೆ ಹಿಂಪಡಿತೀವಿ ಎಂದು ಕಾಂಗ್ರೆಸ್ ಹೇಳಿದೆ.
ಮುಸ್ಲಿಂ ಓಲೈಕೆಗಾಗಿ ಈ ರೀತಿ ಮಾಡ್ತಿದ್ದಾರೆ.
ಸಾಧು, ಸಂತರು, ಋಷಿ ಮುನಿಗಳು ಗೋ ಸಂರಕ್ಷಣೆ ಆಗಬೇಕು ಅಂದಿದ್ದಾರೆ. ಕಡಿದರೆ ಕಾಂಗ್ರೆಸ್ ಗೆ ಗೋವಿನ ಶಾಪ ತಟ್ಟುತ್ತದೆ.
ಗೋಹತ್ಯೆ ಹತ್ಯೆ ನಿಷೇಧ ಕಾನೂನು ಹಿಂಪಡೆದರೆ ಉಗ್ರ ಹೋರಾಟ ಮಾಡ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.

