ಮೆಗಾ ರೈಲು ಬ್ಲಾಕ್ : ನಾಳೆ ಕೊಂಕಣ ಮಾರ್ಗ ಪ್ರಯಾಣ ತುಸು ವ್ಯತ್ಯಯ
ಮಂಗಳೂರು: ಮಡಗಾಂವ್- ಕುಮಟಾ ನಡುವೆ ರೈಲು ಹಳಿಯಲ್ಲಿ ಇಂಜಿನಿಯರಿಂಗ್, ಸಿಗ್ನಲ್ ಮತ್ತು ಟೆಲಿಕಮ್ಯೂನಿಕೇಶನ್ ಹಾಗೂ ಇಲೆಕ್ಟ್ರಿಕಲ್ ಸಂಬಂಧಿಸಿದ ಕಾಮಗಾರಿಗಳು ಜೊತೆಯಾಗಿ ನಡೆಯಲಿರುವ ಹಿನ್ನೆಲೆಯಲ್ಲಿ ಜೂನ್ 15 ರಂದು ಈ ಮಾರ್ಗದಲ್ಲಿ ನಾಲ್ಕು ಗಂಟೆಗಳ ಮೆಗಾ ಬ್ಲಾಕ್ ಸೃಷ್ಟಿಯಾಗಲಿದೆ.
ಪರಿಣಾಮ ಜೂ.15 ರಂದು ಕೊಂಕಣ ಮಾರ್ಗ ಸಂಚರಿಸುವ ರೈಲುಗಳ ಪ್ರಯಾಣದಲ್ಲಿ ತುಸು ವ್ಯತ್ಯಯವಾಗಲಿದೆ. ರೈಲು ನಂ. 06602 ಮಂಗಳೂರು ಸೆಂಟ್ರಲ್ – ಮಡಗಾಂವ್ ಕುಮಟಾ ನಿಲ್ದಾಣದ ತನಕ ಮಾತ್ರ ಸಂಚರಿಸಲಿದೆ. ಈ ರೈಲು ಪ್ರಯಾಣ ಕುಮಟಾ ಮತ್ತು ಮಡಗಾಂವ್ ನಡುವೆ ರದ್ದುಗೊಳ್ಳಲಿದೆ.
ರೈಲು ನಂ. 06601 ಮಡಗಾಂವ್ ಜಂಕ್ಷನ್ – ಮಂಗಳೂರು ಸೆಂಟ್ರಲ್ ರೈಲು ಪ್ರಯಾಣವು ಮಡಗಾಂವ್ – ಕುಮಟಾ ವಿಭಾಗದ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.

