• Home  
  • ಮುಂಡ್ಕೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಶ್ರೀಮತಿ ಯಶೋಧ ಸಂಕಲಕರಿಯ, ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾ ಪಡುದಡ್ಡು ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ರಂಜನಿ ಕಲ್ಲಿಮಾರು ಆಯ್ಕೆ
- ಪ್ರಚಲಿತ

ಮುಂಡ್ಕೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಶ್ರೀಮತಿ ಯಶೋಧ ಸಂಕಲಕರಿಯ, ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾ ಪಡುದಡ್ಡು ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ರಂಜನಿ ಕಲ್ಲಿಮಾರು ಆಯ್ಕೆ

Share: ಮುಂಡ್ಕೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಶ್ರೀಮತಿ ಯಶೋಧ ಸಂಕಲಕರಿಯ, ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾ ಪಡುದಡ್ಡು ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ರಂಜನಿ ಕಲ್ಲಿಮಾರು ಆಯ್ಕೆ ಮುಂಡ್ಕೂರು, ಬೆಳ್ಮಣ್: ಬಿಲ್ಲವ ಯುವ ವೇದಿಕೆ ಹಾಗೂ ಬಿಲ್ಲವ ಮಹಿಳಾ ವೇದಿಕೆ ಮುಂಡ್ಕೂರು ಮುಲ್ಲಡ್ಕ ಇನ್ನಾ ಇದರ ಮಾಸಿಕ ಸಭೆ ಮುಂಡ್ಕೂರು ಸಮುದಾಯ ಭವನದಲ್ಲಿ ನಡೆಯಿತು. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸಚ್ಚೇರಿಪೇಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-2025ನೇ ಸಾಲಿನ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ […]

ಮುಂಡ್ಕೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿ ಶ್ರೀಮತಿ ಯಶೋಧ ಸಂಕಲಕರಿಯ, ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾ ಪಡುದಡ್ಡು ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ರಂಜನಿ ಕಲ್ಲಿಮಾರು ಆಯ್ಕೆ

ಮುಂಡ್ಕೂರು, ಬೆಳ್ಮಣ್: ಬಿಲ್ಲವ ಯುವ ವೇದಿಕೆ ಹಾಗೂ ಬಿಲ್ಲವ ಮಹಿಳಾ ವೇದಿಕೆ ಮುಂಡ್ಕೂರು ಮುಲ್ಲಡ್ಕ ಇನ್ನಾ ಇದರ ಮಾಸಿಕ ಸಭೆ ಮುಂಡ್ಕೂರು ಸಮುದಾಯ ಭವನದಲ್ಲಿ ನಡೆಯಿತು.

ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಸಚ್ಚೇರಿಪೇಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-2025ನೇ ಸಾಲಿನ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷೆಯಾಗಿ ಶ್ರೀಮತಿ ಯಶೋಧ ಸಂಕಲಕರಿಯ, ಕಾರ್ಯದರ್ಶಿಯಾಗಿ ಶ್ರೀಮತಿ ಲೀಲಾ ಪಡುದಡ್ಡು ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ರಂಜನಿ ಕಲ್ಲಿಮಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಶ್ರೀಮತಿ ಮಲ್ಲಿಕಾ, ಗೌರವ ಸಲಹೆಗಾರರಾಗಿ ಶ್ರೀಮತಿ ಶಶಿಕಲಾ ಬಾಲಕೃಷ್ಣ, ಶ್ರೀಮತಿ ಶಶಿಕಲಾ ಕೆ ಸಾಲ್ಯಾನ್, ಶ್ರೀಮತಿ ಹೇಮಾ ಕಲ್ಲಿಮಾರ್,  ಉಪಾಧ್ಯಕ್ಷರಾಗಿ ಶ್ರೀಮತಿ ಸುಮತಿ ಪೂಜಾರ್ತಿ, ಶ್ರೀಮತಿ ಸುಮತಿ ಎಚ್, ಜೊತೆ ಕಾರ್ಯದರ್ಶಿಯಾಗಿ ರೇಖಾ, ಕ್ರೀಡಾ ಕಾರ್ಯದರ್ಶಿಯಾಗಿ ರಾಧಿಕಾ ಕಲ್ಲಿಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಸುನೀತಾ ಪಾದೆಬೆಟ್ಟು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ರೇಖಾ ಉಗ್ಗೆದಬೆಟ್ಟು ತಿಲಕ ಕಲ್ಲಿಮಾರ್, ಜಯಂತಿ ಕಲ್ಲಿಮಾರ್, ಶೋಭಾ ಕಲ್ಲಿಮಾರ್, ವಿಮಲ ಕಲ್ಲಿಮಾರ್, ವಿದ್ಯಾ ಬಂಡ್ರೊಟ್ಟು, ಪ್ರೇಮ ಜಾರಿಗೆಕಟ್ಟೆ, ರತಿ ಕಲ್ಲಿಮಾರ್, ಉಷಾ ಬಂಡ್ರೊಟ್ಟು, ಚಾಂದಿನಿ ಕಲ್ಲಿಮಾರ್, ಕುಮುದಾ ಗೋಕುಲನಗರ, ಉಷಾ ತೋಟಮನೆ, ರೇಣುಕಾ ಇನ್ನಾ, ಸುಮಿತ್ರಾ ಇಂದಿರಾನಗರ, ರೇಖಾ ಪ್ರಕಾಶ್ ಪುಣ್ಕೆದಡಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಬಿಲ್ಲವ ಯುವ ವೇದಿಕೆಯ ಸಂಚಾಲಕ ಉದಯ್ ಕುಮಾರ್, ಗೌರವಾಧ್ಯಕ್ಷ ಸುರೇಶ್ ಪೂಜಾರಿ, ಗೌರವ ಸಲಹೆಗಾರ ಗುರುನಾಥ ಪೂಜಾರಿ, ಸಂಘಟನಾ ಕಾರ್ಯದರ್ಶಿ ನಿಶಾನ್ ತೋಟಮನೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.