ಕಾಪು: ಜೂನ್ ೨೪, ವನಸುಮ ವೇದಿಕೆ ಕಟಪಾಡಿ ವತಿಯಿಂದ ಇತ್ತೀಚೆಗೆ ವಾರಂಟ್ ಆಫೀಸರ್ ಆಗಿ ಭಡ್ತಿ ಹೊಂದಿರುವ ರವೀಂದ್ರ ಸುವರ್ಣ ಬೆಳ್ಳೆ ಇವರಿಗೆ ಅವರ ಮನೆಯಲ್ಲೇ ಸಮ್ಮಾನ ಮಾಡಲಾಯಿತು.
ವೇದಿಕೆಯ ಅಧ್ಯಕ್ಷ ಬಾಸುಮ ಕೊಡಗು, ಖಜಾಂಜಿ ಕಾವ್ಯವಾಣಿ ಕೊಡಗು, ಸದಸ್ಯರಾದ ಭಾಸ್ಕರ್ ಉದ್ಯಾವರ, ರಾಕೇಶ್ ಆಚಾರ್ಯ, ಮಧುಸೂದನ್ ಹಾಗೂ ವಕೀಲರಾದ ಸಂತೋಷ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರವೀಂದ್ರ ಸುವರ್ಣ ಕುಟುಂಬಸ್ಥರು ಮತ್ತು ಗೆಳೆಯರು ಭಾಗಿಯಾಗಿದ್ದರು.

