• Home  
  • ಕ್ರಿಕೆಟಿಗ ಕೆ.ಎಲ್​ ರಾಹುಲ್ ಧರ್ಮಸ್ಥಳ ಭೇಟಿ​
- ಕರಾವಳಿ

ಕ್ರಿಕೆಟಿಗ ಕೆ.ಎಲ್​ ರಾಹುಲ್ ಧರ್ಮಸ್ಥಳ ಭೇಟಿ​

Share:  ಟೀಂ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್ ಇಂದು ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಮಂಜುನಾಥನ ಸ್ವಾಮಿಯ ದರ್ಶನ ಪಡೆದ ಕೆ.ಎಲ್​ ರಾಹುಲ್​​ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.  ದೇವರ ದರ್ಶನದ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಜೊತೆ ಕೆ.ಎಲ್ ರಾಹುಲ್​ ಕೆಲ ಕಾಲ ಮಾತುಕತೆ ನಡೆಸಿದರು. ಕೆ ಎಲ್​ ರಾಹುಲ್​ಗೆ ವಿರೇಂದ್ರ ಹೆಗ್ಗಡೆಯವರು ಶಾಲು ಹೊದೆಸಿ ಬೆಳ್ಳಿ ನಾಣ್ಯ ಹಾಗೂ ಗೋವಿನ ಕಂಚಿನ ಪ್ರತಿಮೆ ನೀಡಿ ಗೌರವಿಸಿದ್ದಾರೆ. ಇದೇ ವರ್ಷ […]

 ಟೀಂ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್ ಇಂದು ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಮಂಜುನಾಥನ ಸ್ವಾಮಿಯ ದರ್ಶನ ಪಡೆದ ಕೆ.ಎಲ್​ ರಾಹುಲ್​​ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.

 ದೇವರ ದರ್ಶನದ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಜೊತೆ ಕೆ.ಎಲ್ ರಾಹುಲ್​ ಕೆಲ ಕಾಲ ಮಾತುಕತೆ ನಡೆಸಿದರು.

ಕೆ ಎಲ್​ ರಾಹುಲ್​ಗೆ ವಿರೇಂದ್ರ ಹೆಗ್ಗಡೆಯವರು ಶಾಲು ಹೊದೆಸಿ ಬೆಳ್ಳಿ ನಾಣ್ಯ ಹಾಗೂ ಗೋವಿನ ಕಂಚಿನ ಪ್ರತಿಮೆ ನೀಡಿ ಗೌರವಿಸಿದ್ದಾರೆ.

ಇದೇ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್​ ರಾಹುಲ್​ ಬಾಲಿವುಡ್​ ನಟ ಮಂಗಳೂರು ಮೂಲದ ಸುನೀಲ್​ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.