ಮೀಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಚಿಕಿತ್ಸಾ ವೆಚ್ಚ ವಿತರಣೆ
ಕಾಪು : ಜಮೀಯತುಲ್ ಫಲಾಹ್ ಸಂಸ್ಥೆಯ ವತಿಯಿಂದ ಕಾಪುವಿನ ಕಛೇರಿಯಲ್ಲಿ ಕಾಪು ತಾಲೂಕಿನ ಪ್ರಥಮ ಪಿ. ಯು. ಸಿ. ಯಲ್ಲಿ ಅಧ್ಯಯನ ಮಾಡುವ, ಝಕಾತ್ ಹಣ ಪಡೆಯಲು ಅರ್ಹರಾಗಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಗಳನ್ನು ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಐವತ್ತು ಸಾವಿರ ರೂಪಾಯಿಗಳ ವೈದ್ಯಕೀಯ ನೆರವು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಲ್ ಹಾಜ್ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ ಭಾಗವಹಿಸಿ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ಪಡೆಯಲು ಕಷ್ಟ ಆಗಬಾರದೆನ್ನುವ ದೃಷ್ಟಿಯಲ್ಲಿ ಜಮೀಯತುಲ್ ಫಲಾಹ್ ನಿರ್ವಹಿಸುವ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಸಂಸ್ಥೆಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿರುವ ಶಬೀಹ್ ಅಹಮದ್ ಖಾಝಿಯವರು ವಹಿಸಿದ್ದರು.
ಕಾರ್ಯಕ್ರಮವು ಕುದ್ದೂಸ್ ಮೌಲಾನರವರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು.
ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ನಸೀರ್ ಅಹಮದ್ ರವರು ವಂದಿಸಿದರು.
ಮಾಧ್ಯಮ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ಸಾಬೀರ್ ಅಲಿ ಎರ್ಮಾಳುರವರು ಪಟ್ಟಿಯನ್ನು ವಾಚಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಅಷ್ಪಾಕ್ ಅಹಮದ್, ಮುಸ್ತಾಕ್ ಇಬ್ರಾಹೀಮ್, ಸಿರಾಜ್ ಅಹಮದ್ ಕಾಝಿ, ಬಷೀರ್ ಅಹಮದ್, ಮುಹಮ್ಮದ್ ಸಾದಿಕ್ ( ದಿನಾರ್ ), ನಜೀರ್ ಅಹಮದ್, ಇಬ್ರಾಹೀಮ್ ಪೈಲ್ವಾನ್, ಶಬ್ಬೀರ್ ಸಾಹೇಬ್ ಪಡುಬಿದ್ರಿ, ಶೇಕ್ ಸನಾವರ್ ಹಾಗೂ ಕಚೇರಿ ಸಿಬಂದಿ ಸೋನಿ ಉಪಸ್ಥಿತರಿದ್ದರು.

