• Home  
  • ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ
- ಕರಾವಳಿ

ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ

Share: ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ ಉಡುಪಿ : ಕಸ್ತೂರ್ಬಾ ಆಸ್ಪತ್ರೆ ಸಮೂಹ  ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಘ ಜಂಟಿ ಆಶ್ರಯದಲ್ಲಿ ಸ್ಥಳೀಯ ಓಷನ್ ಪರ್ಲ್ ಹೋಟೆಲ್‌ನಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ. ಮೋನಿಕಾ ಸೋಲೋಮೋನ್ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶ್ರೀಕಾಂತ್ ಹಾಗೂ ಡಾ. ಆದರ್ಶ್ ಕುಡ್ವ ಭಾಗವಹಿಸಿ ದಂತ ಚಿಕಿತ್ಸ್ಯೆಯಲ್ಲಿ ಎದುರಾಗುವ […]

ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ

ಉಡುಪಿ : ಕಸ್ತೂರ್ಬಾ ಆಸ್ಪತ್ರೆ ಸಮೂಹ  ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಘ ಜಂಟಿ ಆಶ್ರಯದಲ್ಲಿ ಸ್ಥಳೀಯ ಓಷನ್ ಪರ್ಲ್ ಹೋಟೆಲ್‌ನಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ. ಮೋನಿಕಾ ಸೋಲೋಮೋನ್ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶ್ರೀಕಾಂತ್ ಹಾಗೂ ಡಾ. ಆದರ್ಶ್ ಕುಡ್ವ ಭಾಗವಹಿಸಿ ದಂತ ಚಿಕಿತ್ಸ್ಯೆಯಲ್ಲಿ ಎದುರಾಗುವ ಸವಾಲುಗಳು ಮತ್ತು ಆಧುನಿಕ ಚಿಕಿತ್ಸೆ ವಿಧಾನಗಳ ಬಗ್ಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.

 ಕಸ್ತೂರ್ಬಾ ಆಸ್ಪತ್ರೆಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥಾರಾದ ಸಚಿನ್ ಕಾರಂತ್ ಹಾಗೂ ಸಂಘದ ಪೂರ್ವಧ್ಯಕ್ಷಗಳಾದ ಡಾ ವಿಜಯೇಂದ್ರ ರಾವ್, ಡಾ. ಗುರುರಾಜ್ , ಡಾ. ಮನೋಜ್ ಮ್ಯಾಕ್ಸಿಮ್ ಡಿ ’ಲೀಮ್ , ಡಾ. ಗಣೇಶ್ ಕಾಮತ್ ,ಡಾ. ಪ್ರಮೋದ್ ಶೆಟ್ಟಿ, ಕಾರ್ಯಗಾರ ಸಂಯೋಜಕ ಡಾ. ಬೀಸು ನೈಕ ಉಪಸ್ಥಿತರಾಗಿದ್ದರು.

 ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಫದ ಅಧ್ಯಕ್ಷರಾ ಡಾ. ಸತೀಶ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ ll ಜಗದೀಶ್ ಜೋಗಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.