ಸಿಐಟಿಯು ಉಡುಪಿ ವತಿಯಿಂದ ಕಾಪುನಲ್ಲಿ ಬೃಹತ್ ಮೆರವಣಿಗೆ
ಕಾಪು: ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಬೃಹತ್ ಜಾಥ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಾಪು ಕೆ ವನ್ ಹೋಟೆಲ್ ವರೆಗೆ ಸಾಗಿದೆ .
ನೂರಾರು ಕಟ್ಟಡ ಕಾರ್ಮಿಕರು ಜಾಥದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಟ್ಟಡ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು ಸಮರ್ಪಕ ಮಾಹಿತಿ ನೀಡಿದರು.
ಕಾಪು ಕೇವನ್ ಹೋಟೆಲ್ ಬಳಿ ಜಾಥಾ ಸಮಾಪನ ಗೊಂಡಿದೆ. ಈ ಸಂದರ್ಭ ಗೌರವಾಧ್ಯಕ್ಷ ದಯಾನಂದ ಕೋಟಿಯಾನ್, ಅಧ್ಯಕ್ಷ ಶೇಖರ ಬಂಗೇರಾ, ಕೋಶಾಧಿಕಾರಿ ಗಣೇಶ್ ನಾಯಕ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
