26 ದಿನದ ಹಸುಗೂಸಿನ ಚಿಕಿತ್ಸೆಗಾಗಿ ಸಹಾಯಧನ ಹಸ್ತಾಂತರ

ಮಣಿಪಾಲ: ಕೋಟೇಶ್ವರದ ಗೀತಾ ಶ್ರೀಧರ್ ದಂಪತಿಗಳ 26 ದಿನದ ಮಗು ಆರ್ಯನ್ ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಮಗುವಿನ ಚಿಕಿತ್ಸೆಗಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳಿಂದ ಧನ ಸಹಾಯ ನೀಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ತೆರಳಿ, ತೀವ್ರ ನಿಗಾ ಘಟಕದಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಮಗು ಶೀಘ್ರ ಗುಣಮುಖವಾಗಲು ದೇವರಲ್ಲಿ ಪ್ರಾರ್ಥಿಸಿ, ಹೆತ್ತವರನ್ನು ಸಂತೈಸಿ, ಚಂದಾ ಎತ್ತಿ ಸಂಗ್ರಹಿಸಿದ ಹಣ ಒಟ್ಟು ರೂ. 90959/- ಯನ್ನು ಮಗುವಿನ ತಾಯಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ರಾಘವೇಂದ್ರ ಕೊಡವೂರು, ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಪಾಂಗಾಳ, ಉಪಾಧ್ಯಕ್ಷರಾದ ಕುಶಲ್ ಅಮೀನ್, ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ, ಸಲಹೆಗಾರರಾದ ಲಕ್ಷ್ಮೀಶ್ ಶೆಟ್ಟಿ, ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಯುವ ಘಟಕದ ಉಪಾಧ್ಯಕ್ಷರಾದ ರೋಷನ್ ಬಂಗೇರ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪಾಂಗಾಳ, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ ಕುಲಾಲ್, ಮಹಿಳಾ ಸಂಘಟನಾ ಕಾರ್ಯದರ್ಶಿ ಜ್ಯೋತಿ, ಮಹಿಳಾ ಸಹ-ಸಂಘಟನಾ ಕಾರ್ಯದರ್ಶಿ ಲಕ್ಷ್ಮೀ, ಉಡುಪಿ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ರಾಜ್ ಪೂಜಾರಿ, ಜಿಲ್ಲಾ ಸದಸ್ಯರಾದ ಪ್ರಮೋದ್ ಕುಲಾಲ್, ಸರಿತಾ, ಕವಿತಾ ಮೊದಲಾದವರು ಉಪಸ್ಥಿತರಿದ್ದರು.

