• Home  
  • ತೆಂಕ ಗ್ರಾ. ಪಂ.: ಕಾಂಗ್ರೆಸ್ ಬೆಂಬಲಿತರಿಗೆ ಒಲಿದ ಗ್ರಾ. ಪಂ. ಅಧಕ್ಷ, ಉಪಾಧ್ಯಕ್ಷಗಿರಿ
- ರಾಜಕೀಯ

ತೆಂಕ ಗ್ರಾ. ಪಂ.: ಕಾಂಗ್ರೆಸ್ ಬೆಂಬಲಿತರಿಗೆ ಒಲಿದ ಗ್ರಾ. ಪಂ. ಅಧಕ್ಷ, ಉಪಾಧ್ಯಕ್ಷಗಿರಿ

Share:  ಪಡುಬಿದ್ರಿ, ಆ. ೨೪: ತೆಂಕ ಗ್ರಾ. ಪಂ. ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುರೇಖಾ ಹಾಗೂ ಉಪಾಧ್ಯಕ್ಷರಾಗಿ ಕಸ್ತೂರಿ ಪ್ರವೀಣ್ ಗುರುವಾರ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಬೆಂಬಲಿತರ ಮತಗಳಿಂದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಕಸ್ತೂರಿ ಪ್ರವೀಣ್, ಈ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಧಿಕ್ಕಾರದ ಕೂಗಿನೊಂದಿಗೆ ಕೆಂಗಣ್ಣಿಗೆ ಗುರಿಯಾದರು. ತೆಂಕ ಗ್ರಾ. ಪಂ. ನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ […]

 ಪಡುಬಿದ್ರಿ, ಆ. ೨೪: ತೆಂಕ ಗ್ರಾ. ಪಂ. ನ ಎರಡನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸುರೇಖಾ ಹಾಗೂ ಉಪಾಧ್ಯಕ್ಷರಾಗಿ ಕಸ್ತೂರಿ ಪ್ರವೀಣ್ ಗುರುವಾರ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

ಕಳೆದ ಬಾರಿ ಬಿಜೆಪಿ ಬೆಂಬಲಿತರ ಮತಗಳಿಂದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಕಸ್ತೂರಿ ಪ್ರವೀಣ್, ಈ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಧಿಕ್ಕಾರದ ಕೂಗಿನೊಂದಿಗೆ ಕೆಂಗಣ್ಣಿಗೆ ಗುರಿಯಾದರು.

ತೆಂಕ ಗ್ರಾ. ಪಂ. ನಲ್ಲಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ `ಅ’ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಾರ ನಿಗದಿಯಾಗಿತ್ತು.

೧೧ಸದಸ್ಯ ಬಲದ ತೆಂಕ ಗ್ರಾ. ಪಂ. ನಲ್ಲಿ ೬ಕಾಂಗ್ರೆಸ್ ಬೆಂಬಲಿತರು ಹಾಗೂ ೫ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಬಿಜೆಪಿ ಬೆಂಬಲಿತರಾದ ಜಯಶ್ರೀ ಹರೀಶ್ ಕೋಟ್ಯಾನ್ ಅವರನ್ನು ೪-೬ ಮತಗಳಿಂದ ಸೋಲಿಸಿ ಸುರೇಖಾ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಸದಸ್ಯೆ ಅಮಣಿ ಅವರನ್ನು ೫-೬ ಮತಗಳ ಅಂತರದಲ್ಲಿ ಸೋಲಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಕಸ್ತೂರಿ ಪ್ರವೀಣ್ ಆಯ್ಕೆಯಾದರು.

 ಅಧ್ಯಕ್ಷ ಸ್ಥಾನದ ಮತದಾನದ ವೇಳೆ ಓರ್ವರ ಮತವು ಅಸಿಂಧುವಾಗಿತ್ತು.

ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ವರುಣ್ ಕರ್ತವ್ಯ ನಿರ್ವಹಿಸಿದ್ದರು. ಪಿಡಿಒ ರಜನಿ ಸಹಕರಿಸಿದ್ದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡಿಸಿಸಿ ಅಧ್ಯಕ್ಷ ಅಶೋಕ್ ಕೊಡವೂರು, ಕಾಪು ಬ್ಲಾಕ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಸ್ಥಾನೀಯ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್, ದೀಪಕ್ ಕುಮಾರ್ ಎರ್ಮಾಳ್, ಬಾಲಚಂದ್ರ ಎರ್ಮಾಳ್, ಸುನಿಲ್ ಬಂಗೇರ, ಆಶಾ ಕಟಪಾಡಿ, ಅಶ್ವಿನಿ ಕಾಪು ಮತ್ತಿತರು ಅಧ್ಯಕ್ಷ,  ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.