• Home  
  • ಕುತ್ಯಾರು ಆನೆಗುಂದಿ ಸೂರ್ಯ ಚೈತನ್ಯ ಶಾಲೆಯಲ್ಲಿ ಯಕ್ಷಗಾನ, ಕರಾಟೆ ತರಗತಿಗಳ ಉದ್ಘಾಟನೆ
- ಶಾಲಾ ಕಾಲೇಜು

ಕುತ್ಯಾರು ಆನೆಗುಂದಿ ಸೂರ್ಯ ಚೈತನ್ಯ ಶಾಲೆಯಲ್ಲಿ ಯಕ್ಷಗಾನ, ಕರಾಟೆ ತರಗತಿಗಳ ಉದ್ಘಾಟನೆ

Share: ಕುತ್ಯಾರು ಆನೆಗುಂದಿ ಸೂರ್ಯ ಚೈತನ್ಯ ಶಾಲೆಯಲ್ಲಿ ಯಕ್ಷಗಾನ, ಕರಾಟೆ ತರಗತಿಗಳ ಉದ್ಘಾಟನೆ ಉಡುಪಿ: ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ವತಿಯಿಂದ ಯಕ್ಷಗಾನ ತರಬೇತಿ ಮತ್ತು ಕರಾಟೆ ತರಗತಿಗಳ ಉದ್ಘಾಟನಾ ಸಮಾರಂಭವು ನಡೆಯಿತು.    ಈ ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು. ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರು ಯಕ್ಷಗಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯ ಕೋರಿದರು. ಮುಖ್ಯ […]

ಕುತ್ಯಾರು ಆನೆಗುಂದಿ ಸೂರ್ಯ ಚೈತನ್ಯ ಶಾಲೆಯಲ್ಲಿ ಯಕ್ಷಗಾನ, ಕರಾಟೆ ತರಗತಿಗಳ ಉದ್ಘಾಟನೆ

ಉಡುಪಿ: ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಶಾಲೆಯಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ವತಿಯಿಂದ ಯಕ್ಷಗಾನ ತರಬೇತಿ ಮತ್ತು ಕರಾಟೆ ತರಗತಿಗಳ ಉದ್ಘಾಟನಾ ಸಮಾರಂಭವು ನಡೆಯಿತು.

   ಈ ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು.

ಶಾಸಕ ಸುರೇಶ್ ಶೆಟ್ಟಿ ಗುರ್ಮೆಯವರು ಯಕ್ಷಗಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯ ಕೋರಿದರು.

ಮುಖ್ಯ ಅತಿಥಿಗಳಾಗಿ ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ದನ ಆಚಾರ್ಯ ,ಕಾಪು ಕ್ಷೇತ್ರ ಯಕ್ಷಗಾನ  ತರಬೇತಿಯ ಸಂಯೋಜಕರು ಮತ್ತು ಯಕ್ಷ ಕಲಾ ರಂಗದ ಉಪಾಧ್ಯಕ್ಷರಾದ ವಿ.ಜೆ ಶೆಟ್ಟಿ, ನಿವೃತ್ತ  ಉಪನ್ಯಾಸಕರಾದ ನಾರಾಯಣ ಹೆಗ್ಡೆ, ಅಸೆಟ್ ನ ಅಧ್ಯಕ್ಷರಾದ ಬಿ. ಸೂರ್ಯ ಕುಮಾರ್ ಹಳೆಯಂಗಡಿ, ಅಸೆಟ್ ಕಾರ್ಯದರ್ಶಿಗಳಾದ ಮೋಹನ್ ಬೆಳ್ಳೂರು , ಅಸೆಟ್ ನ ಉಪಾಧ್ಯಕ್ಷರಾದ ವಿವೇಕ್ ಆಚಾರ್ಯ, ಯಕ್ಷ ಶಿಕ್ಷಕರಾದ ರಾಮಕೃಷ್ಣ ಆಚಾರ್ಯ, ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್ , ಆನೆಗುಂದಿ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಬಿ ಲೋಕೇಶ್, ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ, ವಿಶುಕುಮಾರ್ ಪಡುಬಿದ್ರೆ, ಪ್ರಾಂಶುಪಾಲರಾದ ಶ್ರೀಮತಿ ಸಂಗೀತ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  ಪ್ರಾಂಶುಪಾಲೆ ಶ್ರೀಮತಿ ಸಂಗೀತರವರು ಪ್ರಸ್ತಾವಿಕವಾಗಿ ಮಾತನಾಡಿದರು.

ಶ್ರೀಮತಿ ಅಮಿತ ಸ್ವಾಗತಿಸಿದರು. ಶ್ರೀಮತಿ ಅನಿತಾ ನಿರೂಪಿಸಿದರು. ಕಮಲಾಕ್ಷಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.