• Home  
  • ಜಾಗತಿಕ ಬಂಟರ ಸಂಘಗಳ ಒಕ್ಕೂಟದ (International bunts association) ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ (Udupi Police) ದೂರು ದಾಖಲು
- ಅಪರಾಧ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ (International bunts association) ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ (Udupi Police) ದೂರು ದಾಖಲು

Share:   ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾತೊಂದನ್ನು ಹರಿಯ ಬಿಟ್ಟಿದ್ದು, ಅದರ ವಿರುದ್ಧ ಬುಧವಾರ ಉಡುಪಿ ಪೋಲೀಸ್‌ ಕಛೇರಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ದೂರು ಸಲ್ಲಿಸಿದ್ದಾರೆ. ಮನವಿಯಲ್ಲಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿಮಾನಿ ಬಳಗದ  ಸರ್ವರ ಯೋಗಕ್ಷೇಮಕ್ಕಾಗಿ ಅವಿರತ ದುಡಿಯುವ  ಅಧ್ಯಕ್ಷರು ಮತ್ತು ಪದಾಧಿಕಾರಿಗಳು […]

  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾತೊಂದನ್ನು ಹರಿಯ ಬಿಟ್ಟಿದ್ದು, ಅದರ ವಿರುದ್ಧ ಬುಧವಾರ ಉಡುಪಿ ಪೋಲೀಸ್‌ ಕಛೇರಿಯಲ್ಲಿ ಒಕ್ಕೂಟದ ಪದಾಧಿಕಾರಿಗಳು ದೂರು ಸಲ್ಲಿಸಿದ್ದಾರೆ.

ಮನವಿಯಲ್ಲಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿಮಾನಿ ಬಳಗದ  ಸರ್ವರ ಯೋಗಕ್ಷೇಮಕ್ಕಾಗಿ ಅವಿರತ ದುಡಿಯುವ  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಅವರ ಜೊತೆಯಲ್ಲಿ ಮಹಾದಾನಿಗಳು ದಾನಿಗಳು ಮಹಾನಿರ್ದೇಶಕರುಗಳು ನಿರ್ದೇಶಕರು ಮಹಾಪೋಷಕರು ಪೋಷಕರು ಸರ್ವ ಸದಸ್ಯರು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ತಮ್ಮ ಸ್ವಂತ ಅಭಿವೃದ್ದಿಗಳನ್ನೆಲ್ಲವನ್ನು ಬದಿಗಿರಿಸಿ ನಿರಂತರ ಸಮಾಜಕ್ಕೋಸ್ಕರ ದುಡಿಯುವುದನ್ನು ನಾವು ನೀವೆಲ್ಲ ಕಂಡಿದ್ದೇವೆ ಅಕ್ಟೋಬರ್ 28ಹಾಗೂ 29 ರಂದು ಅಭೂತಪೂರ್ವಾಗಿ ವಿಶ್ವ ಬಂಟರ ಸಮ್ಮೇಳನವು ಯಶಸ್ವಿಯಾಗಿ ಜರಗಿತು.

 ಇಲ್ಲಿ ದುಡಿದವರು ಪ್ರತಿಯೊಬ್ಬರೂ ಕೂಡ ನಿಸ್ವಾರ್ಥಿಗಳೇ ಆಗಿದ್ದು ಸಾವಿರಾರು ಜನರ ರಕ್ತವನ್ನು ಬೆವರಾಗಿ ಹರಿಸಿ ರಾತ್ರಿ ಹಗಲೆನ್ನದೇ ದುಡಿದು ಸಮಾಜಕ್ಕಾಗಿ ಏನಾದರು ಕೊಡಬೇಕು ನಮ್ಮಿಂದಾದ ಸಹಾಯ ಮಾಡಬೇಕು ಎನ್ನುವ ಛಲದಿಂದ ದುಡಿದವರು. ನಾವೆಲ್ಲರೂ ಇಂತಹ ಸಂದರ್ಭದಲ್ಲಿ ಅತ್ಯಂತ ನೋವು ಉಂಟಾಗುವ ರೀತಿಯಲ್ಲಿ ಸಮಾಜಘಾತುಕ ವ್ಯಕ್ತಿ ಜಾಲತಾಣಗಳಲ್ಲಿ ಅಸಭ್ಯವಾಗಿ ವರ್ತಿಸಿರುವುದನ್ನು ನಾವು ಕಂಡಿದ್ದೇವೆ. ಇದು ಸಮಾಜ ಬಾಹಿರ ಕೃತ್ಯವಾಗಿದ್ದು, ಇಂತಹ ಘಾತಕ ವ್ಯಕ್ತಿಯ ವಿರುದ್ಧ ಉಡುಪಿಯ ಠಾಣೆಯಲ್ಲಿ ಮತ್ತು ಪೊಲೀಸ್ ಜಿಲ್ಲಾ ಅಧೀಕ್ಷಕರಲ್ಲಿ ದೂರನ್ನು  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸಲ್ಲಿಸಲಾಯಿತು.

ಈ ಸಂದರ್ಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಇಂದ್ರಾಳಿ ಜಯಕರ  ಶೆಟ್ಟಿ(Indrali Jayakara Shetty) ಉಡುಪಿ ಬಂಟರ ಸಂಘದ ಉಪಾಧ್ಯಕ್ಷ ಮೋಹನ್ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.