• Home  
  • ಸಹಕಾರಿ ಯುಗಕ್ಕೆ ಭಾರತದಲ್ಲಿ ೧೧೯ವರ್ಷಗಳ ಇತಿಹಾಸವಿದೆ : ಡಾ. ಎಂಎನ್‌ ರಾಜೇಂದ್ರ ಕುಮಾರ್ (Dr, MN Rajendra Kumar)
- ಕರಾವಳಿ - ಪ್ರಚಲಿತ

ಸಹಕಾರಿ ಯುಗಕ್ಕೆ ಭಾರತದಲ್ಲಿ ೧೧೯ವರ್ಷಗಳ ಇತಿಹಾಸವಿದೆ : ಡಾ. ಎಂಎನ್‌ ರಾಜೇಂದ್ರ ಕುಮಾರ್ (Dr, MN Rajendra Kumar)

Share: ಸಹಕಾರಿ ಯುಗಕ್ಕೆ ಭಾರತದಲ್ಲಿ ೧೧೯ವರ್ಷಗಳ ಇತಿಹಾಸವಿದೆ : ಡಾ. ಎಂಎನ್‌ ರಾಜೇಂದ್ರ ಕುಮಾರ್ ಪಡುಬಿದ್ರಿಯಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ (Closing ceremony Of 70th India Co-operation week) ಪಡುಬಿದ್ರಿ: ಸಹಕಾರಿ ಯುಗಕ್ಕೆ ಭಾರತದಲ್ಲಿ ೧೧೯ವರ್ಷಗಳ ಇತಿಹಾಸವಿದೆ. ಬ್ಯಾಕಿಂಗ್ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕುಗಳಿಗಿಂತ ಸಹಕಾರಿ ಸಂಘಗಳೇ ರೈತರನ್ನು ಶೀಘ್ರವಾಗಿ ತಲುಪುತ್ತಿದೆ. ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಇತರೆಡೆಗಳಿಗೆ ಮಾದರಿ ಎನಿಸಿದೆ. ಸಮಾಜಮುಖಿ ಕೆಲಸಗಳಿಗೆ ಸಹಕಾರಿ ಕ್ಷೇತ್ರವು ಪ್ರೋತ್ಸಾಹಿಸುತ್ತಿದೆ ಎಂದು ದ. ಕ. […]

ಸಹಕಾರಿ ಯುಗಕ್ಕೆ ಭಾರತದಲ್ಲಿ ೧೧೯ವರ್ಷಗಳ ಇತಿಹಾಸವಿದೆ : ಡಾ. ಎಂಎನ್‌ ರಾಜೇಂದ್ರ ಕುಮಾರ್

ಪಡುಬಿದ್ರಿಯಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ (Closing ceremony Of 70th India Co-operation week)

ಪಡುಬಿದ್ರಿ: ಸಹಕಾರಿ ಯುಗಕ್ಕೆ ಭಾರತದಲ್ಲಿ ೧೧೯ವರ್ಷಗಳ ಇತಿಹಾಸವಿದೆ. ಬ್ಯಾಕಿಂಗ್ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕುಗಳಿಗಿಂತ ಸಹಕಾರಿ ಸಂಘಗಳೇ ರೈತರನ್ನು ಶೀಘ್ರವಾಗಿ ತಲುಪುತ್ತಿದೆ. ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಇತರೆಡೆಗಳಿಗೆ ಮಾದರಿ ಎನಿಸಿದೆ. ಸಮಾಜಮುಖಿ ಕೆಲಸಗಳಿಗೆ ಸಹಕಾರಿ ಕ್ಷೇತ್ರವು ಪ್ರೋತ್ಸಾಹಿಸುತ್ತಿದೆ ಎಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.,ಮಂಗಳೂರು ಇದರ ಅಧ್ಯಕ್ಷರಾದ ಡಾ। ಎಮ್. ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

 ಅವರು ಸೋಮವಾರ ಪಡುಬಿದ್ರಿಯ ಸಹಕಾರ ಸೌಧದ ನವೀಕೃತ ಹವಾನಿಯಂತ್ರಿತ ವೈ. ಲಕ್ಷ್ಮಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಮತ್ತು ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup MLA Gurme Suresh Shetty) ಹವಾನಿಯಂತ್ರಿತ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ,   ಕೈ ಜೋಡಿಸಿ ಮುನ್ನಡೆಯುವುದನ್ನೇ ಸಹಕಾರಿ ತತ್ವವು ಹೇಳಿಕೊಡುತ್ತದೆ. ಕೃಷಿ, ಹೈನುಗಾರಿಕೆಯೊಂದಿಗೆ ನಮ್ಮ ಹಿರಿಯರ ಜೀವನ ಸಾಗಿ ಬಂದಿತ್ತು. ಈ ನಿಟ್ಟಿನಲ್ಲಿ ರೈತರಿಗೆ ಪ್ರೋತ್ಸಾಹ ಶ್ಲಾಘನೀಯವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ) ಅಧ್ಯಕ್ಷರಾದ ವೈ. ಸುಧೀರ್  (Y Sudir Kumar)  ವಹಿಸಿದ್ದರು.

 ಮಾಜಿ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ (Jayakara Shetty Indrali), ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್. ವಿ.ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.   

ಪಡುಬಿದ್ರಿ ಸಹಕಾರಿ ಸಂಘದ ವತಿಯಿಂದ ಸ್ವಸಹಾಯ ಗುಂಪಿಗೆ ೨೫ ಪ್ಲಾಸ್ಟಿಕ್ ಕುರ್ಚಿಗಳನ್ನು ಮತ್ತು ಸುಮಾರು ೨೦೦ ರೈತರಿಗೆ ತಲಾ೩೦೦೦ ರೂ. ನಂತೆ ಸಹಾಯಧನವನ್ನು ವಿತರಿಸಲಾಯಿತು.

ಡಾ| ಎಂ. ಎನ್. ಆರ್., ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ವೈ., ಕಾಪು ತಾ| ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ನಿವೃತ್ತ ಸಹಕಾರಿ ಮೇಲ್ವಿಚಾರಕ ಬಾಲಕೃಷ್ಣ ರಾವ್ ಅವರನ್ನು ಸಮ್ಮಾನಿಸಲಾಯಿತು.

ವೇದಿಕೆಯಲ್ಲಿ ಬೆಳಪು ಸರಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ವೈ, ನಿವೃತ್ತ ಪ್ರಾಂಶುಪಾಲರು, ಜಾನಪದ ವಿದ್ವಾಂಸರಾದ ಗಣನಾಥ್ ಎಕ್ಕಾರ್,  ಅಶೋಕ್ ಕುಮಾರ್ ಬಲ್ಲಾಳ್, ಪಡುಬಿದ್ರಿ ಸಂಘದ ಉಪಾಧ್ಯಕ್ಷ ಗುರುರಾಜ್ ಪೂಜಾರಿ,   ನಿರ್ದೇಶಕರಾದ ಶಿವರಾಮ ಶೆಟ್ಟಿ, ಗಿರೀಶ್ ಪಲಿಮಾರು, ವಾಸುದೇವ ಪಲಿಮಾರು, ರಾಜಾರಾಮ್ ರಾವ್, ವೈ.ಜಿ.ರಸೂಲ್, ಯಶವಂತ್ ಪಡುಬಿದ್ರಿ, ಮಾಧವ ಆಚಾರ್ಯ, ಸ್ಟಾನ್ಲಿ  ಕ್ವಾಡ್ರಸ್, ಸುಚರಿತಾ ಎಲ್. ಅಮೀನ್, ಕಾಂಚನಾ, ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಕಾರಿ ದೀಪಕ್ ಸಾಲ್ಯಾನ್ ಉಪಸ್ಥಿತರಿದ್ದರು.

 ಅಧ್ಯಕ್ಷ ವೈ. ಸುಧೀರ್ ಕುಮಾರ್ ಪ್ರಸ್ತಾವಿಸಿ ಸ್ವಾಗತಿಸಿದರು.

  ಸುಚರಿತಾ ಅಮೀನ್ ಹಾಗೂ ಗಿರೀಶ್ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.