• Home  
  • ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠಾಧೀಶರಿಂದ ಪುರಪ್ರವೇಶ (Prelude to Udupi Paryothsava; Puttige Swamiji Pura Pravesham)
- ಕರಾವಳಿ

ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠಾಧೀಶರಿಂದ ಪುರಪ್ರವೇಶ (Prelude to Udupi Paryothsava; Puttige Swamiji Pura Pravesham)

Share: ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠಾಧೀಶರಿಂದ ಪುರಪ್ರವೇಶ (Udupi) ಉಡುಪಿ: ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ, ಸಂಪ್ರದಾಯದಂತೆ ದೇಶದಾದ್ಯಂತ ತೀರ್ಥಕ್ಷೇತ್ರ ಸಂದರ್ಶನಗೈದು ಹಿಂತಿರುಗಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು(Sugunendra Theertha Swamiji)  ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು(Susheendra Theertha Swamiji) ಸೋಮವಾರ ಸಂಜೆಯ ಉಡುಪಿಯ ಭಕ್ತಾಭಿಮಾನಿಗಳು ವೈಭವದಿಂದ ಉಡುಪಿಗೆ ಬರಮಾಡಿಕೊಂಡರು.   ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ […]

ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಪುತ್ತಿಗೆ ಮಠಾಧೀಶರಿಂದ ಪುರಪ್ರವೇಶ

(Udupi) ಉಡುಪಿ: ಉಡುಪಿ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ, ಸಂಪ್ರದಾಯದಂತೆ ದೇಶದಾದ್ಯಂತ ತೀರ್ಥಕ್ಷೇತ್ರ ಸಂದರ್ಶನಗೈದು ಹಿಂತಿರುಗಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು(Sugunendra Theertha Swamiji)  ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು(Susheendra Theertha Swamiji) ಸೋಮವಾರ ಸಂಜೆಯ ಉಡುಪಿಯ ಭಕ್ತಾಭಿಮಾನಿಗಳು ವೈಭವದಿಂದ ಉಡುಪಿಗೆ ಬರಮಾಡಿಕೊಂಡರು.

  ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ ಪುರಪ್ರವೇಶ ಮಾಡಲಾಯಿತು.

  ಹತ್ತಾರು ಬಗೆಯ ಸ್ಥಬ್ದಚಿತ್ರಗಳು, ಸಮಾಜದ ವಿವಿಧ ಸಮುದಾಯಗಳ ಭಕ್ತರ ತಂಡೋಪತಂಡಗಳು, ವಾದ್ಯಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.

  ಹುಲಿವೇಷ ದಾರಿಗಳು, ಕೇರಳ ವಾದ್ಯ, ಚೆಂಡಬಳಗ, ಭಜನಾ ತಂಡಗಳು, ಇಸ್ಕಾನ್ ನ ಕೃಷ್ಣ ಭಕ್ತರು, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ನಾಗಸ್ವರ ಮಂಗಳವಾದ್ಯಗಳು, ಕುಣಿತದ ಭಜನೆ, ಹರಿದಾಸರು, ಮರಕಾಲುಗಳು ಗಮನ ಸೆಳೆಯುತ್ತಿದ್ದವು.

  ಹಯಗ್ರೀವ ದೇವರು, ಕೃಷ್ಣಸಾರಥಿ, ಪಂಡಾಪುರದ ಪಾಂಡುರಂಗ ದೇವರು, ಚಿನ್ನದ ಪಲ್ಲಕ್ಕಿ, ಗರುಡವಾಹನ ವಿಷ್ಣು ಮತ್ತಿತರ ಸ್ಥಬ್ದಚಿತ್ರಗಳು ಮೆರವಣಿಗೆಗೆ ಮಿನಿ ಪರ್ಯಾಯೋತ್ಸವದ ರೂಪ ನೀಡಿದ್ದವು.

   ಮಠದ ಅಭಿಮಾನಿಗಳ ಜಯಘೋಷಗಳ ನಡುವೆ ಹೂವುಗಳಿಂದ ಭವ್ಯವಾಗಿ ಅಲಂಕರಿಸಲಾಗಿದ್ದ ಹಂಸರಥದಲ್ಲಿ ವಿರಾಜಮಾನರಾಗಿದ್ದ ಉಭಯ ಶ್ರೀಗಳಿಗೆ ಭಕ್ತರು ಕೈಮುಗಿದು ಸ್ವಾಗತಿಸುತ್ತಿದ್ದರು.

  ಜೋಡುಕಟ್ಟೆಯಿಂದ ಹೊರಟ ಮೆರವಣಿಗೆಯು ಕೋರ್ಟ್ ರಸ್ತೆ, ಡಯಾನ ವೃತ್ತ, ಕವಿ ಮುದ್ದಣ ಮಾರ್ಗ, ತ್ರಿವೇಣಿ ಮಾರ್ಗ, ಸಂಸ್ಕೃತ ಕಾಲೇಜು ಮೂಲಕ ರಥಬೀದಿಯನ್ನು ಪ್ರವೇಶಿಸಿತು.

  ಸಂಜೆ 6.15ಕ್ಕೆ ಶ್ರೀಗಳು ಪುತ್ತಿಗೆ ಮಠವನ್ನು ಪ್ರವೇಶಿಸಿದರು. ಅವರನ್ನು ಮಠದ ಅಧಿಕಾರಿಗಳು ವಿದ್ಯುಕ್ತವಾಗಿ ಸ್ವಾಗತಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.