• Home  
  •  ಮಾ.3 ಶಂಕರಪುರದ ರೋಟರಿ ಟ್ರಸ್ಟ್ : 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಕಾರ‍್ಯಕ್ರಮ (Mar 3rd : Shankarapura Rotary Trust 20th year Free mental health treatment program)
- ಕರಾವಳಿ - ವಿಡಿಯೋ

 ಮಾ.3 ಶಂಕರಪುರದ ರೋಟರಿ ಟ್ರಸ್ಟ್ : 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಕಾರ‍್ಯಕ್ರಮ (Mar 3rd : Shankarapura Rotary Trust 20th year Free mental health treatment program)

Share: ಮಾ.3 ಶಂಕರಪುರದ ರೋಟರಿ ಟ್ರಸ್ಟ್ : 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಕಾರ‍್ಯಕ್ರಮ  ಶಂಕರಪುರ: ರೋಟರಿ ಶಂಕರಪುರದ ರೋಟರಿ ಟ್ರಸ್ಟ್ ವತಿಯಿಂದ 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧಿ ನೀಡುವ ಶಿಬಿರವು ಮಾ.೩ರಂದು ನಡೆಯಲಿದ್ದು, ಅದು 240ನೇ ಶಿಬಿರವಾಗಲಿದೆ ಎಂದು ರೋಟರಿ ಟ್ರಸ್ಟ್ ಕಾರ್ಯದರ್ಶಿ ವಲೇರಿಯನ್ ನೊರೊನ್ಹಾ (Velerian Noronha)ಹೇಳಿದರು. ಅವರು ರವಿವಾರ ಶಂಕರಪುರ ರೋಟರಿ ಭವನದಲ್ಲಿ ೨೩೯ನೇ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ […]

ಮಾ.3 ಶಂಕರಪುರದ ರೋಟರಿ ಟ್ರಸ್ಟ್ : 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಕಾರ‍್ಯಕ್ರಮ

 ಶಂಕರಪುರ: ರೋಟರಿ ಶಂಕರಪುರದ ರೋಟರಿ ಟ್ರಸ್ಟ್ ವತಿಯಿಂದ 20ನೇ ವರ್ಷದ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧಿ ನೀಡುವ ಶಿಬಿರವು ಮಾ.೩ರಂದು ನಡೆಯಲಿದ್ದು, ಅದು 240ನೇ ಶಿಬಿರವಾಗಲಿದೆ ಎಂದು ರೋಟರಿ ಟ್ರಸ್ಟ್ ಕಾರ್ಯದರ್ಶಿ ವಲೇರಿಯನ್ ನೊರೊನ್ಹಾ (Velerian Noronha)ಹೇಳಿದರು.

ಅವರು ರವಿವಾರ ಶಂಕರಪುರ ರೋಟರಿ ಭವನದಲ್ಲಿ ೨೩೯ನೇ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧಿ ನೀಡುವ ಶಿಬಿರದ ಸಂದರ್ಭ ಮಾಹಿತಿಯನ್ನು ನೀಡಿದರು.

1999ರಲ್ಲಿ ರೋಟರಿ ಶಂಕರಪುರ ರೋಟರಿ ಟ್ರಸ್ಟ್ ಸ್ಥಾಪಿಸಿ, ರೋಟರಿಯ ಸದಸ್ಯರು, ಕುಟುಂಬಿಕರು, ದಾನಿಗಳಿಂದ  ಸಂಗ್ರಹಿಸಿ 2003 ರಿಂದ ಪ್ರತೀ ತಿಂಗಳ ಮೊದಲ ಆದಿತ್ಯವಾರ ನಿರಂತರವಾಗಿ ಉಚಿತ ಮಾನಸಿಕ ಚಿಕಿತ್ಸಾ ಶಿಬಿರವನ್ನು ನಡೆಸುತ್ತಾ ಬಂದಿದೆ.  15 ರಿಂದ 20 ರೋಗಿಗಳಿಂದ ಆರಂಭವಾದ ಈ ಶಿಬಿರದಲ್ಲಿ ಪ್ರಸ್ತುತ 160 ರಿಂದ 175 ರೋಗಿಗಳು ಫಲಾನುಭವಿಗಳಾಗಿದ್ದು, ಪ್ರತೀ ಶಿಬಿರದಲ್ಲಿ ಸುಮಾರು 45 ಸಾವಿರಕ್ಕೂ ಅಧಿಕ ವೆಚ್ಚದಾಯಕವಾಗುತ್ತಿದೆ.

 ಬೈಂದೂರು, ಬಜಪೆ, ಶಿರ್ವ, ಬೆಳ್ಮಣ್ಣು, ಮುದರಂಗಡಿ  ಕಾರ್ಕಳದಿಂದಲೂ ಶಿಬಿರಕ್ಕೆ ಫಲಾನುಭವಿಗಳು ಬರುತ್ತಿದ್ದಾರೆ.

 ಉಡುಪಿಯ ಎ. ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ| ಪಿ.ವಿ ಭಂಡಾರಿ (Psychiatrist DR PV Bhandari), ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ದಿ| ಅನಂತರಾಮ ಭಟ್ ದೂರಾಲೋಚನೆಯ ಮೇರೆಗೆ ಆಗಿನ ರೋಟರಿ ಸದಸ್ಯರು ಅದನ್ನು ಕಾರ್ಯರೂಪಕ್ಕೆ ತಂದಿದ್ದರು.

 ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿ ಅವಶ್ಯ: ಡಾ. ಪಿವಿ ಭಂಡಾರಿ

ಮನೋವೈದ್ಯ ಡಾ| ಪಿ.ವಿ ಭಂಡಾರಿ ಮಾತನಾಡಿ, ದೈಹಿಕ ರೋಗದಂತೆಯೇ ಇರುವ ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿ ಅವಶ್ಯಕವಾಗಿದೆ. ಕಡು ಬಡವರು, ವಯೋವೃದ್ಧರ ಮನೆ ಬಾಗಿಲಿಗೆ ಮಾನಸಿಕ ಆರೋಗ್ಯ ಭಾಗ್ಯ ಎಂಬAತೆ ಶಂಕರಪುರ ರೋಟರಿ ಟ್ರಸ್ಟ್  ವತಿಯಿಂದ ಜಾತಿ ಮತ ಭೇದವಿಲ್ಲದೆ ಹಾಗೂ ಕೊರೋನಾದ ಸಂದರ್ಭದಲ್ಲಿ ಕೂಡ ಸಂಬಂಧ ಪಟ್ಟ ಇಲಾಖೆಗಳಿಂದ ಪರವಾನಿಗೆಯನ್ನು ಪಡೆದು ಕ್ಯಾಂಪ್ ನಡೆಸಿದ್ದು ಅನುಕರಣೀಯ ಮತ್ತು ಮಾದರಿಯಾಗಿದೆ.  ಸುಮಾರು ೮೫೦ಕ್ಕೂ ಅಧಿಕ ಶಿಬಿರಾರ್ಥಿಗಳು ಫಲಾನುಭವಿಗಳಾಗಿದ್ದಾರೆ ಎಂದರು.

ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ತಜ್ಞ ಡಾ| ಶ್ರೀನಿವಾಸ್ ಭಟ್ (Psychiatrist DR Srinivas Bhat) ಮಾತನಾಡಿ, ಇಂತಹಾ ಉತ್ತಮ ಕಾರ್ಯ ಮಾಡುವಲ್ಲಿ ಶಂಕರಪುರ ರೋಟರಿ ಸಂಸ್ಥೆ ಶ್ಲಾಘನೀಯವಾಗಿದೆ. ಈ ಸೇವೆಗೆ ಇನ್ನಷ್ಟು ಪ್ರಚಾರದ ಅಗತ್ಯ ಇದೆ ಎಂದರು.

 ಈ ಸಂದರ್ಭ ಎ. ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ| ಪಿ.ವಿ ಭಂಡಾರಿ, ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ತಜ್ಞ ಡಾ|ಶ್ರೀನಿವಾಸ್ ಭಟ್, ಬಾಳಿಗ ಆಸ್ಪತ್ರೆಯ ಕೌನ್ಸಿಲಿಂಗ್ ವಿಭಾಗದ ಮುಖ್ಯಸ್ಥ ಡಾ| ನಾಗರಾಜ, ಡಾ| ವಿದ್ಯಾಶ್ರೀ, ಶಂಕರಪುರ ರೋಟರಿ ಕ್ಲಬ್ ಅಧ್ಯಕ್ಷ ಜಾರ್ಜ್ ಎಡ್ವರ್ಡ್ ಡಿಸಿಲ್ವಾ, ಎಡ್ವರ್ಡ್ ಮೆಂಡೋನ್ಸಾ, ಆ್ಯಂಟನಿ ಡೇಸ, ಚಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.