ಫೆ18 : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ– ಹೆಜಮಾಡಿ ಶಾಖೆ ಉದ್ಘಾಟನೆ : ವೈ ಸುಧೀರ್ ಕುಮಾರ್
(Padubidri) ಪಡುಬಿದ್ರಿ:ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ನೂತನ ನವೀಕೃತ ಹವಾನಿಯಂತ್ರಿತ ಹೆಜಮಾಡಿ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ18 ಭಾನುವಾರ ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ವೈ ಸುಧೀರ್ ಕುಮಾರ್ (Padubidri Sahakari society’s President Y Sudheer Kumar) ತಿಳಿಸಿದರು.
ಅವರು ಪಡುಬಿದ್ರಿಯ ಸಿಎ ಬ್ಯಾಂಕಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬ್ಯಾಂಕಿಂಗ್ ಕಟ್ಟಡ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ನೆರೆವೇರಿಸಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದಾರೆ.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ ಸುವರ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿ. ಬೆಂಗಳೂರು ಇದರ ನಿರ್ದೇಶಕರಾದ ಬಿ ಜಯಕರ ಶೆಟ್ಟಿ ಇಂದ್ರಾಳಿ, ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು.
ಪಡುಬಿದ್ರಿ ಸೊಸೈಟಿ ಸುಮಾರು 124 ಕೋಟಿಯ ಠೇವಣಿ ಹೊಂದಿದ್ದು, 85 ಕೋಟಿ ರೂಪಾಯಿಗಳನ್ನು ಸಾಲ ನೀಡಲಾಗಿದೆ. ಶೇಕಡಾ 96% ಸಾಲ ಮರುಪಾವತಿಯಾಗಿದೆ. ಸಾಮಾಜಿಕ ಚಟುವಟಿಕೆಗಳಿಗೆ ಸುಮಾರು ಹತ್ತು ಕೋಟಿಯಷ್ಟು ವಿನಿಯೋಗ ಮಾಡಲಾಗಿದೆ ಎಂದು ವೈ ಸುಧೀರ್ ಕುಮಾರ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀಮತಿ ನಿಶ್ಮಿತಾ ಪಿ.ಎಚ್ (GM SMT Nishmitha PH) , ಬ್ಯಾಂಕಿನ ಉಪಾಧ್ಯಕ್ಷ ಗುರುರಾಜ್ ಪೂಜಾರಿ(Gururaj Poojary), ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಬಾಲಗೋಪಾಲ್ ಬಲ್ಲಾಳ್, ನಿರ್ದೇಶಕರುಗಳಾದ ಕೆ ರಸೂಲ್ ವೈ.ಜಿ, ಶ್ರೀ ಗಿರೀಶ್ ಪಲಿಮಾರ್, ಶಿವರಾಮ ಎನ್. ಶೆಟ್ಟ, ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ್ ಪಿ.ಬಿ., ಮಾಧವ ಆಚಾರ್ಯ, ಸ್ಪ್ಯಾನಿ ಕ್ವಾಡ್ರಸ್, ಶ್ರೀಮತಿ ಸುಚರಿತ ಎಲ್. ಅಮೀನ್, ಶ್ರೀಮತಿ ಕುಸುಮಾ ಎಮ್. ಕರ್ಕೇರ, ಶ್ರೀಮತಿ ಕಾಂಚನ ಉಪಸ್ಥಿತರಿದ್ದರು.
