ಅಪರಾಧ
ಬಂಟ್ವಾಳ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ಹಂತಕನ ಗುರುತು ಪತ್ತೆ (Young woman brutally murdered at Bantwal bus stand: Murderer’s identity revealed)
ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ: ಹಂತಕನ ಗುರುತು ಪತ್ತೆ ಬಂಟ್ವಾಳ ತಾಲೂಕು ಕಕ್ಕಪದವಿನ ಮೈರಾ ಮಹಮ್ಮಾಯಿ ನಿವಾಸಿ ಲಾವಣ್ಯ ಕೊಲೆಯಾದ ದುರ್ದೈವಿ (Bantwala) ಬಂಟ್ವಾಳ: ಜನನಿಬಿಡ ಪ್ರದೇಶದಲ್ಲೇ ಯುವತಿಯೋರ್ವಳನ್ನು ದುಷ್ಕರ್ಮಿಯೋರ್ವ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಬಿ.ಸಿ. ರೋಡಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿದೆ. ಹಾಡಹಗಲೇ ಎಲ್ಲರ ಕಣ್ಣೆದುರೇ ಯುವತಿಯನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಹತ್ಯಗೈದ ಕೃತ್ಯ ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮತ್ತು ತೀವ್ರ ಆಘಾತವನ್ನುಂಟು ಮಾಡಿದೆ. […]

