Tag: dr. m mohan alva

ಶಾಲಾ ಕಾಲೇಜು

‘ಆ್ಯಗಾನ್ -೨೦೨೩’ಮ್ಯಾನೇಜ್ಮೆಂಟ್ ಫೆಸ್ಟ್

ಮೂಡಬಿದ್ರೆ ಆಳ್ವಾಸ್‌ ನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಮ್ಯಾನೇಜ್ಮೆಂಟ್ ಫೆಸ್ಟ್‌ ಮೂಡುಬಿದಿರೆ: ನಿರ್ವಹಣೆಯು ಸರಿಯಾದ ಯೋಜನೆಯಿಂದ ಪ್ರಾರಂಭವಾಗಿ ನಿಯಂತ್ರಣದಿAದ ಕೊನೆಗೂಳ್ಳುವಂತಹದ್ದು. ಅದೇ ರೀತಿ ವಿದ್ಯಾರ್ಥಿಗಳಿಗೆ  ಭವಿಷ್ಯದ  ಕುರಿತು ಸರಿಯಾದ ಯೋಜನೆ ಹಾಗು ದೂರದೃಷ್ಟಿ ಇದ್ದರೆ ಬದುಕಿನಲ್ಲಿ ಸಫಲತೆ ಸಿಗುತ್ತದೆ ಎಂದು ಮುಂಬೈನ ಅಲೆಂಬಿಕ್  ಫಾರ್ಮಸ್ವಿಟಿಕಲ್ಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ಮತ್ತು ಬಿಸಿನೆಸ್ ಸಪೋರ್ಟ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಹೇಳಿದರು. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿAಗ್ ಹಾಗೂ ತಂತ್ರಜ್ಞಾನ ಕಾಲೇಜಿನ ಸ್ನಾತಕೋತ್ತರ ಎಂ.ಬಿ.ಎ ವಿಭಾಗದ ವತಿಯಿಂದ ಎರಡು […]

ಶಾಲಾ ಕಾಲೇಜು

ಕಸಾಪ ತಾಲೂಕು ಕಚೇರಿ ಉದ್ಘಾಟನೆ ಮತ್ತು  ‘ರಂಗಸ್ಥಳದ ರಾಜ ಅರುವ’ಕೃತಿ ಬಿಡುಗಡೆ

ಓದುವ ಆಸಕ್ತಿ ಬೆಳೆಸಲು ಕ್ರಮ: ಡಾ ಶ್ರೀನಾಥ್ ಮೂಡುಬಿದಿರೆ:  ಜನರಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿ  ಸಾಹಿತ್ಯದ ಆಸಕ್ತಿ ಬೆಳಸುವ ಜವಾಬ್ದಾರಿಯನ್ನು ‘ಕಸಾಪ’ಹೊತ್ತುಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ನಡೆದ ‘ಕಚೇರಿ ಉದ್ಘಾಟನೆ’ ಮತ್ತು ಕೊರಗಪ್ಪ ಶೆಟ್ಟಿ ಅವರ ಅಭಿನಂದನಾ ಗ್ರಂಥ ‘ರಂಗಸ್ಥಳದ ರಾಜ ಅರುವʼ […]

ಶಾಲಾ ಕಾಲೇಜು

ಆಳ್ವಾಸ್‌ನಲ್ಲಿ ‘ಭಿಷಕ್ – ೨೦೨೩’  ರಾಷ್ಟ್ರೀಯ ವೈದ್ಯರ ದಿನ ಆಚರಣೆ

ವೈದ್ಯನೂ ಮಾನವನೇ: ಡಾ.ರಾಜೇಶ್ ಬಲ್ಲಾಳ ಮೂಡಬಿದ್ರೆ,ವಿದ್ಯಾಗಿರಿ: ಪರಿಪೂರ್ಣ ಅಭ್ಯಾಸದಿಂದ ಮಾತ್ರ ಯಶಸ್ವಿ ವೈದ್ಯನಾಗಲು ಸಾಧ್ಯ ಎಂದು ಮಂಗಳೂರಿನ ಕೆ.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜೇಶ್ ಬಲ್ಲಾಳ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಶನಿವಾರ ವಿ.ಎಸ್ ಆಚಾರ್ಯ ಸಂಭಾಗಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವೈದರ ದಿನಾಚರಣೆ ‘ಭಿಷಕ್ -೨೦೨೩’ರಲ್ಲಿ ಅವರು ಮಾತನಾಡಿದರು. ವೈದ್ಯ ವೃತ್ತಿ ಕುರಿತು ಅರಿವು ಮೂಡಿಸಲು ಭಾರತರತ್ನ ಡಾ.ಬಿಧನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ ೧ರಂದು ‘ರಾಷ್ಟ್ರೀಯ ವೈದರ ದಿನ’ ಆಚರಿಸಲಾಗುತ್ತದೆ. ‘ವೈದ್ಯೋ […]

ಶಾಲಾ ಕಾಲೇಜು

ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಆಳ್ವಾಸ್ ಕಾಲೇಜಿನ ಬಿ.ಬಿ.ಎ. ವಿದ್ಯಾರ್ಥಿಗಳ ಸನ್ಮಾನ

‘ಗುರಿಯ ಜೊತೆ ದಾರಿಯನ್ನೂ ಸಂಭ್ರಮಿಸಿ’: ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ವಿದ್ಯಾಗಿರಿ:‘ಬದುಕಿನಲ್ಲಿ ಸಾಧನೆಯ ಗುರಿಯ ಜೊತೆ ದಾರಿಯನ್ನೂ ಸಂಭ್ರಮಿಸಬೇಕು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಕುವೆಂಪು ಸಭಾಂಗಣದಲ್ಲಿ ನಡೆದ ‘ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಆಳ್ವಾಸ್ ಕಾಲೇಜಿನ ಬಿ.ಬಿ.ಎ. ವಿದ್ಯಾರ್ಥಿಗಳ ಸನ್ಮಾನ’ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು. ಬದುಕಿನಲ್ಲಿ ಗುರಿ ಮುಖ್ಯ ಆದರೆ, ಪ್ರಯಾಣವನ್ನೂ ಸಂಭ್ರಮಿಸಿದಾಗ ನೆಮ್ಮದಿ ದೊರಕುತ್ತದೆ ಎಂದ ಅವರು,  ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ದೊರೆತ ಯಶಸ್ಸು […]

ಶಾಲಾ ಕಾಲೇಜು

ಪತ್ರಿಕಾ ದಿನಾಚರಣೆಯಲ್ಲಿ ನಿವೃತ್ತ ಪತ್ರಗಾರ ಸಹಾಯಕ, ಸಾಹಿತಿ ಬೆನೆಟ್ ಜಿ. ಅಮ್ಮನ್ನ

‘ಸುದ್ದಿಯ ಮೂಲ ಶೋಧಿಸಿ, ಸತ್ಯಾಸತ್ಯತೆ ಪರಿಶೀಲಿಸಿ’ ವಿದ್ಯಾಗಿರಿ: ‘ಮೂಲವನ್ನು ಶೋಧಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಿಖರತೆಯನ್ನು ದೃಢಪಡಿಸಿಕೊಂಡ ಬಳಿಕ ಸುದ್ದಿ ಮಾಡಬೇಕು. ಎಂದು ನಿವೃತ್ತ ಪತ್ರಗಾರ ಸಹಾಯಕ, ಸಾಹಿತಿ ಬೆನೆಟ್ ಜಿ. ಅಮ್ಮನ್ನ  ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ನಡೆದ ‘ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸುದ್ದಿಯ ಮೂಲವನ್ನು ಶೋಧಿಸುವ ಪ್ರವೃತ್ತಿ ಕಡಿಮೆಯಾದ ಕಾರಣ, ಸುಳ್ಳು ಸುದ್ದಿಗಳು ಮೇಳೈಸುತ್ತವೆ. ಅದಕ್ಕಾಗಿ ಸುದ್ದಿಯ ಕಾಲಮಾನ, ಸತ್ಯಾಸತ್ಯತೆ ಹಾಗೂ ಅಧಿಕೃತ ಮೂಲವನ್ನು ಪರಿಶೀಲಿಸಬೇಕು […]

ಕರಾವಳಿ

ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ವೇಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್

‘ಕ್ರೀಡೆಯಲ್ಲಿ ಪರಿಶ್ರಮ, ಬದ್ದತೆ ಮುಖ್ಯ’ ವಿದ್ಯಾಗಿರಿ: ಆಸಕ್ತಿ, ಪರಿಶ್ರಮ, ಬದ್ಧತೆಯು ಪ್ರತಿಯೊಬ್ಬ ಕ್ರೀಡಾಪಟುಗಳಲ್ಲಿ ಇರಬೇಕು ಎಂದು ಮಾಜಿ ಸೈನಿಕ, ರಾಷ್ಟç ಮಟ್ಟದ ವೇಟ್‌ಲಿಫ್ಟರ್ ರಮೇಶ್ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಆಳ್ವಾಸ್ ಕಾಲೇಜು ಕೃಷಿಸಿರಿ ವೇದಿಕೆಯಲ್ಲಿ ಹಮ್ಮಿಕೊಂಡ ‘ಮಂಗಳೂರು  ವಿಶ್ವವಿದ್ಯಾಲಯ ಅಂತರ ಕಾಲೇಜು ವೇಟ್‌ಲಿಫ್ಟಿಂಗ್ ಚಾಂಪಿಯನ್ ಶಿಪ್ ೨೦೨೨-೨೩’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ ಕ್ರೀಡಾ ಕ್ಷೇತ್ರವು ಇತರ ಕ್ಷೇತ್ರಗಳಂತೆ ಅಭಿವೃದ್ಧಿ ಹೊಂದುತ್ತಿದೆ. ಕ್ರೀಡೆಯಲ್ಲಿ ಸ್ಪೂರ್ತಿಯಲ್ಲಿ ಭಾಗವಿಸಬೇಕು. ಗೆಲ್ಲಲು ಬೇರೆ ಮಾರ್ಗಗಳನ್ನು […]

ಕರಾವಳಿ ಶಾಲಾ ಕಾಲೇಜು

ಆಳ್ವಾಸ್  ಮೂಡಬಿದ್ರಿಯಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನ

ವಿದ್ಯಾಗಿರಿ: ವಿದ್ಯಾರ್ಥಿ ಜೀವನ ಎಂದರೆ ಸ್ವರ್ಗ ಇದ್ದಂತೆ. ಇಲ್ಲಿ ಹಲವಾರು ಆಕರ್ಷಣೆಗಳಿದ್ದರೂ, ನೀವು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಆಳ್ವಾಸ್ ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ಆಳ್ವಾಸ್ ಪುನರ್ಜನ್ಮದ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಅಪಾರ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, […]

ಕರಾವಳಿ

ಆಳ್ವಾಸ್ ಕೇಂದ್ರೀಯ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

ನಾಯಕತ್ವ ಇದ್ದಲ್ಲಿ ಗುರಿ ಸ್ಪಷ್ಟ: ವಿವೇಕ್ ಆಳ್ವ ವಿದ್ಯಾಗಿರಿ(ಮೂಡುಬಿದಿರೆ): ‘ನಾಯಕತ್ವ ಗುಣ ಇದ್ದವರಲ್ಲಿ ಗುರಿ ಸ್ಪಷ್ಟವಾಗಿರುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕೇಂದ್ರೀಯ ಶಾಲೆಯ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು. ನಾಯಕತ್ವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆ ಆಗಬಹುದು. ಶಾಲಾ ಹಂತದಲ್ಲೇ ನಾಯಕತ್ವ ವಹಿಸಿ ಜವಾಬ್ದಾರಿಯನ್ನು ನಿಭಾಯಿಸಿ ಎಂದು ಕಿವಿಮಾತು ಹೇಳಿದರು.  ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವ ಗುಣವನ್ನು […]

ಪ್ರಚಲಿತ

  ಆಳ್ವಾಸ್‌ನಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ವಿದ್ಯಾಗಿರಿ: ವಿಶ್ವ ಯೋಗ ದಿನವಾದ ಬುಧವಾರ ಬೆಳಿಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಹಾಗೂ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ ಸಭಾಂಗಣದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು. ಯೋಗಾಭ್ಯಾಸಕ್ಕೆ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಪುರಸಭಾ ಸದಸ್ಯ ಪ್ರಸಾದ್ ಕುಮಾರ್ ಇದ್ದರು. ಆಳ್ವಾಸ್ ಶಿಕ್ಷಣ […]

eMedia Kannada  @2025. All Rights Reserved.