Tag: manipura

ಅಪರಾಧ

ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ವಿಡಿಯೋ ವೈರಲ್  

ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ವಿಡಿಯೋ ವೈರಲ್,  ಸಾಮೂಹಿಕ ಅತ್ಯಾಚಾರದ ಶಂಕೆ ಇಂಫಾಲ : ಮಣಿಪುರದಲ್ಲಿ ಪುರುಷರ ಗುಂಪೊಂದು  ಇಬ್ಬರು ಮಹಿಳೆಯರನ್ನು ರಸ್ತೆಯ ಮೇಲೆ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭಯಾನಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಭಾರೀ ಖಂಡನೆ ಮತ್ತು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. ಗದ್ದೆಯೊಂದರಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬುಡಕಟ್ಟು ಸಂಘಟನೆಯೊಂದು ಆರೋಪಿಸಿದೆ. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಹೇಳಿಕೆಯ ಪ್ರಕಾರ, ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು […]

ದೇಶ-ವಿದೇಶ

ಮಣಿಪುರ: ಗುಂಡಿನ ಚಕಮಕಿಯಲ್ಲಿ ಇಬ್ಬರ ಸಾವು

ಮಣಿಪುರ: ಗುರುವಾರ ಮಣಿಪುರದ ಕಾಂಗ್ಕೋಪಿಯಲ್ಲಿ ಸಶಸ್ತ್ರ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೆಟೈ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕುಕಿ ಬಹುಸಂಖ್ಯಾತ ಗುಂಪೊಂದು ಹರಾಥೆಲ್ ಗ್ರಾಮದಲ್ಲಿ ದಾಳಿ ನಡೆಸಿದ ಬಳಿಕ ಈ ಘಟನೆ ನಡೆದಿದೆ. ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯಲು ಪ್ರದೇಶದಲ್ಲಿ ನಿಯೋಜಿಸಲಾದ ಪಡೆಗಳನ್ನು ತಕ್ಷಣವೇ ಸಜ್ಜುಗೊಳಿಸಲಾಯಿತು ಆದರೆ ದಾರಿಯಲ್ಲಿ ಜನಸಮೂಹವು ಅವರ ಮೇಲೆ ದಾಳಿ ನಡೆಸಿತು ಎಂದು ಸೇನೆ ಹೇಳಿದೆ. ಮಣಿಪುರವು ಮೇ 3ರಿಂದ ಮೈತಿ ಮತ್ತು […]

ಪ್ರಚಲಿತ

ಮಣಿಪುರಕ್ಕೆ ಹೊರಟಿದ್ದ ರಾಹುಲ್‌ ಗಾಂಧಿಯನ್ನು ತಡೆದ ಪೊಲೀಸರು

ಹಿಂಸಾಪೀಡಿತ ಮಣಿಪುರಕ್ಕೆ ರಾಹುಲ್ ಭೇಟಿ:​ ಬೆಂಗಾವಲು ವಾಹನಕ್ಕೆ ತಡೆ, ಭದ್ರತೆಯ ಆತಂಕ ಎಂದ ಪೊಲೀಸರು ಮಣಿಪುರ: ಕಳೆದ ಎರಡು ತಿಂಗಳುಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ಚುರಾಚಂದ್‌ಪುರಕ್ಕೆ ಭೇಟಿ ನೀಡಲು ಮುಂದಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪೊಲೀಸರು ತಡೆದಿದ್ದಾರೆ. ರಾಹುಲ್ ಗಾಂದಿ ಇಂದು ಮುಂಜಾನೆ ಇಂಫಾಲ್‌ಗೆ ಬಂದಿಳಿದ ನಂತರ ಕಾರಿನಲ್ಲಿ ಚುರಾಚಂದ್‌ಪುರಕ್ಕೆ ತೆರಳುತ್ತಿದ್ದರು. ಅಲ್ಲಿ ಅವರು ಜನಾಂಗೀಯ ಕಲಹದಿಂದ ಸ್ಥಳಾಂತರಗೊಂಡ ಜನರನ್ನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲು ಉದ್ದೇಶಿಸಿದ್ದರು. ರಾಹುಲ್ […]

ದೇಶ-ವಿದೇಶ

ನಾಳೆ ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಹುಲ್ ಭೇಟಿ; ವಿವಿಧ ಸಮುದಾಯಗಳೊಂದಿಗೆ ಸಂವಾದ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜೂನ್ 29 ಮತ್ತು 30ರಂದು ಹಿಂಸಾಚಾರದಿಂದ ಕೂಡಿರುವ ಮಣಿಪುರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಮಂಗಳವಾರ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ”ರಾಹುಲ್ ಗಾಂಧಿ ಅವರು ಮಣಿಪುರ ಭೇಟಿಯ ಸಮಯದಲ್ಲಿ ಅವರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಇಂಫಾಲ್ ಮತ್ತು ಚುರಾಚಂದಪುರದಲ್ಲಿ ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ” ಎಂದು ಟ್ವೀಟ್‌ ಮಾಡಿದ್ದಾರೆ. ”ಮಣಿಪುರವು ಸುಮಾರು ಎರಡು ತಿಂಗಳುಗಳಿಂದ […]

ದೇಶ-ವಿದೇಶ

ಮಣಿಪುರ ಹಿಂಸಾಚಾರ: ಸಿಎಂ ಸಿಂಗ್‌ರನ್ನು ಪದಚ್ಯುತಗೊಳಿಸಲು ಸರ್ವಪಕ್ಷ ಸಭೆಯಲ್ಲಿ ಒತ್ತಾಯ

ಮಣಿಪುರ: ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಪದಚ್ಯುತಗೊಳಿಸಬೇಕು. ಏಕೆಂದರೆ ರಾಜ್ಯದ ಜನರು ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಎಂದು ಪ್ರತಿಪಕ್ಷ ನಾಯಕರು ಶನಿವಾರ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮಾತನಾಡಿದ ಆರ್‌ಜೆಡಿ ಸಂಸದ ಮನೋಜ್ ಝಾ ಅವರು. ”ಮಣಿಪುರದಲ್ಲಿ ಆಡಳಿತದ ನೇತೃತ್ವ ವಹಿಸುವ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲ ಎಂದು ಹೇಳುವ ಮಟ್ಟಕ್ಕೆ ಇಡೀ ಪ್ರತಿಪಕ್ಷಗಳು ಬಂದಿವೆ. ಆ ವ್ಯಕ್ತಿ ಉಸ್ತುವಾರಿಯಾಗುವವರೆಗೂ ನೀವು ಶಾಂತಿಯನ್ನು ಹೊಂದಲು ಸಾಧ್ಯವಿಲ್ಲ” ಎಂದು ಹೇಳಿದರು. […]

ಅಪರಾಧ ದೇಶ-ವಿದೇಶ

ಮಣಿಪುರ ಹಿಂಸಾಚಾರವು ಭಾರತದ ಆತ್ಮಸಾಕ್ಷಿಗಾದ ಆಳವಾದ ಗಾಯ: ಸೋನಿಯಾಗಾಂಧಿ

ಮಣಿಪುರ ಹಿಂಸಾಚಾರವು ಭಾರತದ ಆತ್ಮಸಾಕ್ಷಿಗಾದ ಆಳವಾದ ಗಾಯ: ಸೋನಿಯಾ ಗಾಂಧಿ  ನವದೆಹಲಿ: ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಮಣಿಪುರದ ಜನರು ನಂಬಿಕೆಯನ್ನು ಮರಳಿ ಪಡೆದು ಪುಟಿದೇಳಬೇಕು ಎಂದು ಮಣಿಪುರದ ಜನತೆಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 2.5 ನಿಮಿಷಗಳ ವಿಡಿಯೊ ಸಂದೇಶದಲ್ಲಿ ”ಒಬ್ಬ ತಾಯಿಯಾಗಿ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದು, ಶಾಂತಿ ಸೌಹಾರ್ದತೆಗೆ ದಾರಿ ಮಾಡಿಕೊಡುವಂತೆ ಮನವಿ ಮಾಡುತ್ತೇನೆ” […]

ದೇಶ-ವಿದೇಶ ರಾಜಕೀಯ

 ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಗೃಹ ಸಚಿವ ಅಮಿತ್ ಶಾ ಮನೆ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ

ನವದೆಹಲಿ:   ಮಣಿಪುರದ ಕುಕಿ ಬುಡಕಟ್ಟಿನ ಮಹಿಳೆಯರು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಯುವಂತೆ ಮನವಿಯ ಫಲಕಗಳನ್ನು ಹಿಡಿದು ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.  ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರರು, ”ಶಾಂತಿ ಮರುಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಆದರೆ ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿಗಳು ಮುಂದುವರೆಯುತ್ತಲೇ ಇವೆ. ನಮ್ಮವರ ಜೀವಗಳು ಅಪಾಯದಲ್ಲಿದೆ. ಗೃಹ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತ್ರ ನಮಗೆ ಸಹಾಯ […]

eMedia Kannada  @2025. All Rights Reserved.