• Home  
  • ಅಂಪೈರ್ ಮೇಲಿನ ಸಿಟ್ಟು :  ಹರ್ಮನ್ ಪ್ರೀತ್ ಕೌರ್ ಗೆ ಭಾರೀ‌ ದಂಡ ವಿಧಿಸಿದ ಐಸಿಸಿ
- ಅಪರಾಧ - ಕ್ರೀಡೆ

ಅಂಪೈರ್ ಮೇಲಿನ ಸಿಟ್ಟು :  ಹರ್ಮನ್ ಪ್ರೀತ್ ಕೌರ್ ಗೆ ಭಾರೀ‌ ದಂಡ ವಿಧಿಸಿದ ಐಸಿಸಿ

Share: ಅಂಪೈರ್ ಮೇಲಿನ ಸಿಟ್ಟು :  ಹರ್ಮನ್ ಪ್ರೀತ್ ಕೌರ್ ಗೆ ಭಾರೀ‌ ದಂಡ ವಿಧಿಸಿದ ಐಸಿಸಿ  ಐಸಿಸಿ ಇದೀಗ ಮಹಿಳಾ ಕ್ರಿಕೆಟ್ ತಂಡದ ಮೇಲೂ ಭಾರೀ ಮೊತ್ತದ ದಂಡ ವಿಧಿಸಿದೆ. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂಪೈರ್ ನಿಡಿದ್ದ ನಿರ್ಣಯದ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಪಂದ್ಯದ ಶುಲ್ಕದಲ್ಲಿ ಶೇ. 75ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ.  ಮೂರನೇ ಏಕದಿನ ಪಂದ್ಯದ ವೇಳೆ ಹರ್ಮನ್ ಪ್ರೀತ್ […]

ಅಂಪೈರ್ ಮೇಲಿನ ಸಿಟ್ಟು :  ಹರ್ಮನ್ ಪ್ರೀತ್ ಕೌರ್ ಗೆ ಭಾರೀ‌ ದಂಡ ವಿಧಿಸಿದ ಐಸಿಸಿ

 ಐಸಿಸಿ ಇದೀಗ ಮಹಿಳಾ ಕ್ರಿಕೆಟ್ ತಂಡದ ಮೇಲೂ ಭಾರೀ ಮೊತ್ತದ ದಂಡ ವಿಧಿಸಿದೆ. ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂಪೈರ್ ನಿಡಿದ್ದ ನಿರ್ಣಯದ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಪಂದ್ಯದ ಶುಲ್ಕದಲ್ಲಿ ಶೇ. 75ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ.

 ಮೂರನೇ ಏಕದಿನ ಪಂದ್ಯದ ವೇಳೆ ಹರ್ಮನ್ ಪ್ರೀತ್ ಮೈದಾನದಲ್ಲಿ ತೀರ್ಪುಗಾರರ ನಿರ್ಣಯ ಪ್ರಶ್ನಿಸಿದ್ದಲ್ಲದೆ ಬ್ಯಾಟ್ ನಿಂದ ವಿಕೆಟ್ ಗೆ ಹೊಡೆದು ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ನಲ್ಲಿ ಅಂಪೈರಿಂಗ್ ವಿರುದ್ದ ಕಿಡಿ ಕಾರಿದ್ದರು. ಹೀಗಾಗಿ ಐಸಿಸಿ ದಂಡ ವಿಧಿಸಿದೆ.

 ಭಾರತ ಮತ್ತು ಬಾಂಗ್ಲಾ ದೇಶ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಜುಲೈ 22ರಂದು ಬಾಂಗ್ಲಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಇದು ಟೈ ಆಗಿದ್ದು, ಎರಡೂ ತಂಡವನ್ನು ಜಂಟಿಯಾಗಿ ಸರಣಿ ವಿಜೇತರೆಂದು ಘೋಷಿಸಲಾಗಿತ್ತು.

 ಪಂದ್ಯದ ವೇಳೆ ಹರ್ಮನ್ ಪ್ರೀತ್ ಕೌರ್ ವಿರುದ್ದ ಬಾಂಗ್ಲಾ ತಂಡ ಕ್ಯಾಚ್ ಔಟ್ ಗೆ ಮನವಿ ಮಾಡಿತ್ತು. ಇದನ್ನು ಅಂಪೈರ್ ಪುರಸ್ಕರಿಸಿ ಔಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಕೋಪಗೊಂಡ ಹರ್ಮನ್ ಬ್ಯಾಟ್ ನಿಂದ ವಿಕೆಟ್ ಗೆ ಹೊಡೆದರಲ್ಲದೆ, ಅಂಪೈರ್ ಜೊತೆ ವಾದಕ್ಕಿಳಿದರು. ಪಂದ್ಯದ ನಂತರವೂ ತೀರ್ಪಿನ ವಿರುದ್ಧ ಮಾತನಾಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.