• Home  
  • ಅಕಾಲಿಕ ಮಳೆಗೆ ಕಾಪು ಕ್ಷೇತ್ರದಲ್ಲಿ 5.992ಹೆಕ್ಟೆರ್ ಪ್ರದೇಶ ಬೆಳೆ ಹಾನಿ : ಸಚಿವ ಕೃಷ್ಣ ಭೈರೇಗೌಡ (5.992 hectare crop damage in Kapu constituency due to untimely rain: Minister Krishna Bhairegowda)
- ರಾಜಕೀಯ

ಅಕಾಲಿಕ ಮಳೆಗೆ ಕಾಪು ಕ್ಷೇತ್ರದಲ್ಲಿ 5.992ಹೆಕ್ಟೆರ್ ಪ್ರದೇಶ ಬೆಳೆ ಹಾನಿ : ಸಚಿವ ಕೃಷ್ಣ ಭೈರೇಗೌಡ (5.992 hectare crop damage in Kapu constituency due to untimely rain: Minister Krishna Bhairegowda)

Share:   ಅಕಾಲಿಕ ಮಳೆಗೆ ಕಾಪು ಕ್ಷೇತ್ರದಲ್ಲಿ 5.992ಹೆಕ್ಟೆರ್ ಪ್ರದೇಶ ಬೆಳೆ ಹಾನಿ : ಸಚಿವ ಕೃಷ್ಣ ಭೈರೇಗೌಡ ವಿಧಾನ ಸಭೆಯಲ್ಲಿ ಕಾಪು ಗುರ್ಮೆ ಸುರೇಶ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು (Belgaum) ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಲ್ಲಿ ರಾಜ್ಯದಲ್ಲಿ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಎಷ್ಟು ಹೆಕ್ಟೆರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ. […]

(Belgaum) ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಲ್ಲಿ ರಾಜ್ಯದಲ್ಲಿ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಎಷ್ಟು ಹೆಕ್ಟೆರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ಭತ್ತದ ಬೆಳೆ ಹಾನಿಯಾಗಿದ್ದಲ್ಲಿ ಬಾಧಿತ ರೈತರಿಗೆ ಸರಕಾರ ನೀಡಿದ ಪರಿಹಾರವೇನು. ಭತ್ತದ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ಸರಕಾರದ ನಿಲುವೇನು ಎಂಬ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು.

    ಅದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡರವರು, ಉಡುಪಿ ಜಿಲ್ಲೆಯಲ್ಲಿ ಒಟ್ಟು ೩೫.೮೪೧ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಫಸಲು ಹಾನೆಯಾಗಿದೆ. ಕಾಪು ಕ್ಷೇತ್ರದಲ್ಲಿ 5.992 ಹೆಕ್ಟೆರ್ ಪ್ರದೇಶ ಬೆಳೆ ಹಾನಿಯಾಗಿರುತ್ತದೆ. ಭತ್ತದ ಬೆಳೆ ಹಾನಿಗೆ ಎಸ್. ಡಿ. ಆರ್. ಎಫ್- ಎನ್.ಡಿ.ಆರ್.ಎಫ್ ಮಾರ್ಗಸೂಚಿಯ ಅನ್ವಯ ಪರಿಹಾರವನ್ನು ಪಾವತಿಸಲಾಗಿದೆ. ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ ಗೆ ರೂ ೮೫೦೦ ಗಳಂತೆ 2 ಹೆಕ್ಟೇರ್ ಗೆ ಸೀಮಿತಗೊಳಿಸಿ ಪರಿಹಾರವನ್ನು ಪಾವತಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬೆಳೆ ಹಾನಿಯಾದ ಒಟ್ಟು 358 ರೈತರಿದ್ದು, ಈ ಪೈಕಿ ಭತ್ತದ ಬೆಳೆ ಹಾನಿ ಹೊಂದಿದ ರೈತರು ಸೇರ್ಪಡೆಯಾಗಿದ್ದು, ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ರೂ 13.68 ಲಕ್ಷ ಗಳು ಹಾಗೂ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ ರೂ 9.04 ಲಕ್ಷ ಸೇರಿ ಒಟ್ಟು 22.72 ಲಕ್ಷ ರೂ. ಪರಿಹಾರವನ್ನು ಉಡುಪಿ ಜಿಲ್ಲಾಧಿಕಾರಿಯವರ ಮುಖಾಂತರ ಪಾವತಿಸಲಾಗಿದೆ.

   2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯದ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರಕಾರವು 5000 ಮೆಟ್ರಿಕ್ ಟನ್ ಭತ್ತವನ್ನು ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್ ಗೆ ರೂ 2369 ಭತ್ತ ಗ್ರೇಡ್-ಎ ಗೆ ರೂ 2389 ದರಗಳಲ್ಲಿ ಖರೀದಿಸಲು ಅನುಮತಿಯನ್ನು ನೀಡಿದೆ ಎಂದು  ಉತ್ತರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.