ಅದಮಾರು : ಬಾಲ ವಿಕಾಸ ವೇದಿಕೆಯ ವಾರ್ಷಿಕ ಭಜನಾ ಕಾರ್ಯಕ್ರಮ
ಕಾಪು : ಆದರ್ಶ ಯುವಕ ಸಂಘ ಅದಮಾರು ಇಲ್ಲಿ ಮಕ್ಕಳಿಗೋಸ್ಕರ ಸ್ಥಾಪನೆಯಾಗಿ ಕಳೆದ ಹಲವಾರು ವರ್ಷಗಳಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವ ಬಾಲವಿಕಾಸ ವೇದಿಕೆಯ ವಾರ್ಷಿಕ ಭಜನಾ ಕಾರ್ಯಕ್ರಮವು ಯುವಕ ಸಂಘದ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಸ್ಥಳೀಯ ಹಿರಿಯರಾದ ಅದಮಾರು ನಾರಾಯಣ ಶೆಟ್ಟಿ, ಯುವಕ ಸಂಘದ ಮಾಜಿ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ, ನಿವೃತ ಯೋಧ ಬಾಲಕೃಷ್ಣ ಭಂಡಾರಿ, ಭಜನಾ ಸಂಚಾಲಕರಾದ ರಮೇಶ ಆಚಾರ್ಯ, ಆದರ್ಶ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪ ವಾದಿರಾಜ್ ಆಚಾರ್ಯರವರು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶ್ರಿ ದುರ್ಗಾ ಮಹಿಳಾ ಭಜನಾ ಮಂಡಳಿ ವಿದ್ಯಾನಗರ ಮುದರಂಗಡಿ, ಶ್ರಿ ದುರ್ಗಾ ಮಿತ್ರ ಮಹಿಳಾ ಭಜನಾ ಮಂಡಳಿ ಕುಂಜೂರು, ವೈದ್ಯನಾಥ ಭಜನಾ ಮಂಡಳಿ ಅದಮಾರು, ಆದರ್ಶ ಮಹಿಳಾ ಭಜನಾ ಮಂಡಳಿ ಹಾಗೂ ಬಾಲವಿಕಾಸ ವೇದಿಕೆಯ ಮಕ್ಕಳ ಭಜನಾ ಮಂಡಳಿ ಭಾಗವಹಿಸಿ ಕುಣಿತ ಭಜನೆಯ ಕಾರ್ಯಕ್ರಮ ನೀಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಕೆ. ಎಲ್.ಕುಂಡಂತಾಯ, ವೈ.ಎಸ್. ಸುದರ್ಶನ, ಯುವಕ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಬರ್ಪಾಣಿ, ರಮೇಶ್ ರಾವ್ ಅದಮಾರು ಮಕ್ಕಳಿಗೆ ಭಜನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಬಾಲವಿಕಾಸ ವೇದಿಕೆಯ ಅಧ್ಯಕ್ಷ ಶಿವರಂಜನ್ ಆಚಾರ್ಯ, ಆದರ್ಶ ಮಹಿಳಾ ಸಂಘದ ಮಾಜಿ ಅಧ್ಯಕ್ಷರುಗಳಾದ ಶಾಲಿನಿ ಶೆಟ್ಟಿ, ಶಾಮಲಾ ರಾವ್, ಜಯಶ್ರೀ, ರಮೇಶ್ ಭಟ್, ಸುಮತಿ. ಜಿ. ರಾವ್, ಸುಜಾತ ಶೆಟ್ಟಿ, ಅನಿತ ನಾಯಕ್, ಲೀಲಾ ಸೀತಾರಾಮ ಆಚಾರ್ಯ, ಕಸ್ತೂರಿ ರಮೇಶ್ ಆಚಾರ್ಯ ಹಾಗೂ ಯುವಕ ಸಂಘ ಮತ್ತು ಮಹಿಳಾ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.
ಯುವಕ ಸಂಘದ ಕಾರ್ಯದರ್ಶಿ ಗಣೇಶ್ ಸಾಲ್ಯಾನ್ ನಿರ್ವಹಿಸಿ, ವಂದಿಸಿದರು.

