• Home  
  • ಇನ್ನಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುಷ್ಕರಣಿಯಲ್ಲಿ ಯುವಕನ ಮೃತದೇಹ: ಆತ್ಮಹತ್ಯೆ ಶಂಕೆ (Youth suicide near Innanje Vishnumoorti temple)
- ಅಪರಾಧ

ಇನ್ನಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುಷ್ಕರಣಿಯಲ್ಲಿ ಯುವಕನ ಮೃತದೇಹ: ಆತ್ಮಹತ್ಯೆ ಶಂಕೆ (Youth suicide near Innanje Vishnumoorti temple)

Share: ಇನ್ನಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುಷ್ಕರಣಿಯಲ್ಲಿ ಯುವಕನ ಮೃತದೇಹ: ಆತ್ಮಹತ್ಯೆ ಶಂಕೆ (Kaup)ಕಾಪು : ಕಾಪು ಬಳಿಯ ಇನ್ನಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುಷ್ಕರಣಿಯಲ್ಲಿ ಯುವಕನ ಮೃತದೇಹವೊಂದು ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಯುವಕನನ್ನು ಪಡುಬಿದ್ರಿಯ ನಿವಾಸಿ ವಿನಯ ರಾವ್(27) ಎಂದು ಗುರುತಿಸಲಾಗಿದೆ.   ಈತ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈತ ನಿನ್ನೆ ರಾತ್ರಿ ದೇವಸ್ಥಾನದ ಬಳಿ    ಸುತ್ತಾಡಿಕೊಂಡಿದ್ದನ್ನು ಸ್ಥಳೀಯರು ಕಂಡಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಿಗ್ಗೆ […]

ಇನ್ನಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುಷ್ಕರಣಿಯಲ್ಲಿ ಯುವಕನ ಮೃತದೇಹ: ಆತ್ಮಹತ್ಯೆ ಶಂಕೆ

(Kaup)ಕಾಪು : ಕಾಪು ಬಳಿಯ ಇನ್ನಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುಷ್ಕರಣಿಯಲ್ಲಿ ಯುವಕನ ಮೃತದೇಹವೊಂದು ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಯುವಕನನ್ನು ಪಡುಬಿದ್ರಿಯ ನಿವಾಸಿ ವಿನಯ ರಾವ್(27) ಎಂದು ಗುರುತಿಸಲಾಗಿದೆ.

  ಈತ ಪಾಲಿಟೆಕ್ನಿಕ್ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈತ ನಿನ್ನೆ ರಾತ್ರಿ ದೇವಸ್ಥಾನದ ಬಳಿ    ಸುತ್ತಾಡಿಕೊಂಡಿದ್ದನ್ನು ಸ್ಥಳೀಯರು ಕಂಡಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಬೆಳಿಗ್ಗೆ ಪುಷ್ಕರಣಿಯಲ್ಲಿ ವಿನಯ ರಾವ್ ರವರ ಮೃತದೇಹ  ಪತ್ತೆಯಾಗಿದ್ದು, ದಡದಲ್ಲಿ ಲ್ಯಾಪ್‌ಟಾಪ್ ಸಹಿತ ಕೆಲ ಪರಿಕರಗಳು ಪತ್ತೆಯಾಗಿದೆ.

ದೇವಸ್ಥಾನದ ಸಿಸಿ ಕ್ಯಾಮಾರವನ್ನು ಪರಿಶೀಲನೆ ನಡೆಸಿದಾಗ ಈತ ರಾತ್ರಿ ಹನ್ನೆರಡರ ಬಳಿಕ ದೇವಳದ ಪರಿಸರದಲ್ಲಿ ಸುತ್ತಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿರಬೇಕೆಂಬ ಶಂಕೆ ಸ್ಥಳೀಯವಾಗಿ ವ್ಯಕ್ತವಾಗಿದೆ.

ಘಟನಾಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ನೀರಿನಿಂದ   ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.