ಇನ್ನಾ ಪಲಿಮಾರು ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಮ್ ಮದ್ರಸ ವಠಾರದಲ್ಲಿ 100 ನೇ ಸ್ಥಾಪನಾ ದಿನಾಚರಣೆ
ಸಮಸ್ತದೊಂದಿಗೆ ಕೈ ಜೋಡಿಸಿ ಇಹ ಪರ ವಿಜಯಿಗಳಾಗೋಣ : ಮೌಲನಾ ಇಬ್ರಾಹಿಂ ದಾರಿಮಿ.
(Palimaru) ಪಲಿಮಾರು: ಇನ್ನಾ ಪಲಿಮಾರು ಜುಮಾ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಮ್ ಮದ್ರಸ ವಠಾರದಲ್ಲಿ ಸಮಸ್ತ 100 ನೇ ಸ್ಥಾಪನಾ ದಿನಾಚರಣೆ ನೆರವೇರಿತು.
ಇನ್ನಾ, ಪಲಿಮಾರು ಜುಮಾ ಮಸೀದಿಯ ಖತೀಬ್ ಮೌಲಾನ ಇಬ್ರಾಹಿಂ ದಾರಿಮಿಯವರು ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಇಸ್ಲಾಮಿನ ಸಂದೇಶ, ತತ್ವಾದರ್ಶಗಳನ್ನು ವಿವಿಧ ಮಜಲುಗಳಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಮಸ್ತದೊಂದಿಗೆ ಪ್ರತಿಯೊಬ್ಬ ಮುಸಲ್ಮಾನನು ಕೈಜೋಡಿಸ ಬೇಕಿದೆ. ಮುಸ್ಲಿಂ ಸಮುದಾಯ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಾಗಿ ಪ್ರಗತಿ ಹೊಂದುವ ಮೂಲಕ ಇಹ ಪರ ವಿಜಯಿಗಳಾಗೋಣ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಎಂ. ಪಿ. ಮೊಯಿದಿನಬ್ಬ, ಉಡುಪಿ ರೇಂಜ್ ಜಂ ಇಯ್ಯತುಲ್ ಮು ಅ ಲ್ಲಿಮೀನ್ ಖಜಾಂಚಿ ಎಂ. ಪಿ. ಶೇಖಬ್ಬ, ಮದ್ರಸದ ಮುಖ್ಯೋಪಾಧ್ಯಾಯ ಅಬೂಬಕ್ಕರ್ ಸಿದ್ದೀಕ್ ಫೈಝಿ, ಅಧ್ಯಾಪಕ ಉಸ್ಮಾನ್ ಮೌಲವಿ, ಜಮಾತ್ ಕಾರ್ಯದರ್ಶಿ ಅಬ್ದುಲ್ ರಹೀಮ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ದಾದ ಪೀರ್, ಎಸ್ ಕೆ ಎಸ್ ಬಿ ವಿ ಕಾರ್ಯದರ್ಶಿ ತಸ್ಲೇಮಾ, ಮದ್ರಸ ಮೇಲುಸ್ತುವಾರಿ ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಅನಿವಾಸಿ ಭಾರತೀಯ ಅಬ್ದುಲ್ ಮುತಲಿಬ್ ಮೊದಲಾದವರು ಉಪಸ್ಥಿತರಿದ್ದರು.

