ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಸಂಪನ್ನ
ಉಚ್ಚಿಲ : ಮೊಗವೀರ ಮಹಾಜನ ಸಂಘದ ಆಧೀನದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಮಂಗಳವಾರ ರಾತ್ರಿ ಸಂಪನ್ನಗೊಂಡಿತು.
ಮಧ್ಯಾಹ್ನ ರಥಾರೋಹಣ ಹಾಗೂ ರಾತ್ರಿ ರಥಾವರೋಹಣ ನೆರೆದ ಭಕ್ತರ ಮನಸೂರೆಗೊಂಡಿತು.
ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್ (Nadoja DR G Shankar), ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ(Jaya C Kotian), ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್(Gundu B Amin), ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲಿಯಾನ್ (Vasudeva Salian), ಉಪಾಧ್ಯಕ್ಷ ಸುಭಾಷ್ ಚಂದ್ರ ಕಾಂಚನ್, ಕಾರ್ಯದರ್ಶಿ ಸುಧಾಕರ್ ಕುಂದರ್, ಕಾಪು ನಾಲ್ಕು ಪಟ್ಣ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಆನಂದ ಸಿ ಕುಂದರ್, ಗಂಗಾಧರ ಸುವರ್ಣ ಎರ್ಮಾಳು, ದಿನೇಶ್ ಎರ್ಮಾಳು, ಮೊಗವೀರ ಮಹಾಜನ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಉಷಾರಾಣಿ ಬೋಳೂರು, ಕಾಪು ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಶ್ರೀಮತಿ ಸುಗುಣ ಸುಕುಮಾರ್, ದೇವಸ್ಥಾನದ ಪ್ರಧಾನ ಮೆನೇಜರ್ ಸತೀಶ್ ಅಮೀನ್ ಸಹಿತ ಸಮಿತಿಯ ಸದಸ್ಯರು, ಮೊಗವೀರ ಮಹಾಜನ ಸಂಘದ ಸದಸ್ಯರು, ಸಹಿತ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು.
