ಬೈಕ್ ರ್ಯಾಲಿ, ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ, ಬೃಹತ್ ಸಮಾವೇಶ
(Uchila) ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ 30 ಅಡಿ ಎತ್ತರದ ಮೊಗವೀರ ಸಮಾಜದ ಕುಲಗುರುಗಳಾದ ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಪ್ರಯುಕ್ತ ಭಾನುವಾರ ಬೈಕ್ ರ್ಯಾಲಿ, ಸಾಮೂಹಿಕ ಗುರು ಪಾದಕಾಣಿಕೆ ಸಮರ್ಪಣೆ, ಬೃಹತ್ ಸಮಾವೇಶ ಜರಗಿತು.
ಕಾರ್ಯಕ್ರಮದ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಬೈಕ್ ರ್ಯಾಲಿಯನ್ನು ಸ್ವಾಗತಿಸಿ, ಪುತ್ಥಳಿ ಸ್ಥಳದಲ್ಲೇ ಗುರುಗಳ ಸ್ವರ್ಣ ಲೇಪಿತ ಪಾದುಕೆಗೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಜರಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಜೀರ್ಣೋದ್ದಾರದ ವೇಳೆ ನಡೆದ ಅಷ್ಟಮಂಗಳ ಪ್ರಶ್ನೆಯ ಸೂಚನೆಯ ಮೇರೆಗೆ ಗುರುಗಳ ಕಂಚಿನ ಪುತ್ಥಳಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸರ್ವರ ಸಹಕಾರದಿಂದ ಗುರು ಪರಂಪರೆಯನ್ನು ಸಮಾಜದ ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆಯಿದೆ. ಸಮಾಜಕ್ಕಾಗಿ ದುಡಿಯುವ ಜೊತೆಗೆ ಸಮಾಜದ ಜನರ ಕಷ್ಟಕ್ಕೆ ಸ್ಪಂದಿಸೋಣ ಎಂದರು.
ದ್ವಿ ಚಕ್ರ ವಾಹನ ಜಾಥಾವು ಉತ್ತರ ಭಾಗದವರು ಪಾಂಗಾಳ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆವರಣದಿಂದ ಹಾಗೂ ಉಪ್ಪಳದಿಂದ ಹೆಜಮಾಡಿಯವರೆಗಿನ ಮೊಗವೀರ ಬಾಂಧವರು ದಕ್ಷಿಣ ಭಾಗದ ಹೆಜಮಾಡಿ ಟೋಲ್ ಪ್ಲಾಜಾದಿಂದ ರಾ.ಹೆ. 66 ರ ಮೂಲಕ ಉಚ್ಚಿಲದ ದೇವಸ್ಥಾನವರೆಗೆ ಸಾಗಿ ಬಂದಿದೆ. ಸಹಸ್ರಾರು ಸಂಖ್ಯೆಯಲ್ಲಿ ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಸಮಾಜದವರು ಉಪಸ್ಥಿತರಿದ್ದರು.
ಪಾದಕಾಣಿಕೆಗೆ ಮೊಗವೀರರ ಬಾರ್ಕೂರು ವಲಯದಿಂದ 35 ಲಕ್ಷ, ಮಂಗಳೂರು ವಲಯದಿಂದ 25 ಲಕ್ಷ, ಮಧ್ಯ ವಲಯದಿಂದ 25 ಲಕ್ಷ, ಉಡುಪಿ ವಲಯದಿಮದ 25 ಲಕ್ಷ, ಬಗ್ವಾಡಿ ವಲಯದಿಂದ 25 ಲಕ್ಷ, ವೇದ ಪ್ರಕಾಶ್ 10 ಲಕ್ಷ, ಪ್ರಸಾದ್ ರಾಜ್ ಕಾಂಚನ್ 5 ಲಕ್ಷ, ಮಸ್ಕತ್ ಸಂಘಟನೆಯಿಂದ 3 ಲಕ್ಷ, ಮೀನು ಮಾರಾಟ ಪೆಡರೇಷನ್ 2 ಲಕ್ಷ, ಮೋಹನ್ ಬೇಂಗ್ರೆ 2ಲಕ್ಷ, ಅನಿಲ್ ಕುಮಾರ್ 2 ಲಕ್ಷ, ಸಂಧ್ಯಾ ಸುನಿಲ್ 2 ಲಕ್ಷ, ಮೆಂಡನ್ ಮೂಲಸ್ಥಾನ 1 ಲಕ್ಷ, ದಿನೇಶ್ ಎರ್ಮಾಳು 1 ಲಕ್ಷ, ಪವನ್ ಆನಂದ್ 1 ಲಕ್ಷ, ಯಜ್ಞೇಶ್ 1 ಲಕ್ಷ, ಶಶಿ ಕುಂದರ್ 25 ಸಾವಿರ ಮತ್ತಿತರರು ದೇಣಿಗೆ ಹಸ್ತಾಂತರಿಸಿದರು.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ ಬೆಂಗ್ರೆ, ಉಚ್ಚಿಲ ಕ್ಷೇತ್ರಾಧ್ಯಕ್ಷ ಗಿರಿಧರ ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಯುವರಾಜ್ ಸಾಲ್ಯಾನ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ವೇದಪ್ರಕಾಶ್ ಶ್ರೀಯಾನ್, ರವಿ ಕರ್ಕೇರ, ಸದಾನಂದ ಬಂಗೇರ, ಉದಯ ಕುಮಾರ್ ಹಟ್ಟಿಂಗಡಿ, ಅನಿಲ್ ಕುಮಾರ್ ಬೊಕ್ಕಪಟ್ಣ, ಚೇತನ್ ಬೇಂಗ್ರೆ, ನಾಗರಾಜ್, ದಿನೇಶ್ ಎರ್ಮಾಳು, ಸತೀಶ್ ಅಮೀನ್ ಬಾರ್ಕೂರು, ಭಾಸ್ಕರ ಸಾಲ್ಯಾನ್, ಶ್ರೀನಿವಾಸ್ ತೀರ್ಥಹಳ್ಳಿ, ಸಂಧ್ಯಾ ಸುನಿಲ್, ಕವಿತಾ ಶರತ್, ಸುಗುಣಾ ಮೂಳೂರು, ರಾಜೇಶ್ ಪುತ್ರನ್, ಸತೀಶ್ ಅಮೀನ್ ಬೆಣ್ಣೆಕುದ್ರು, ಪವನ್ ಆನಂದ್, ಸದಾನಂದ ಬಳ್ಕೂರು, ಮನೋಜ್ ಕಾಂಚನ್, ದಯಾಕರ ಸುವರ್ಣ, ಶಶಿ ಕುಮಾರ್ ಬೇಂಗ್ರೆ, ಬೇಬಿ ಸಾಲ್ಯಾನ್, ಲಕ್ಷ್ಮಣ್ ಕೋಡಿಕಲ್, ರವೀಶ್ ಕೊರವಡಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ಶರಣ್ ಕುಮಾರ್ ಮಟ್ಟು ನಿರೂಪಿಸಿದರು.

