• Home  
  • ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಮಾ.30ರಿಂದ ವರ್ಷಾವಧಿ ಉತ್ಸವಕ್ಕೆ ಚಾಲನೆ (Uchila Shree Mahalakshmi Temple: festival starts from March 30)
- ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಮಾ.30ರಿಂದ ವರ್ಷಾವಧಿ ಉತ್ಸವಕ್ಕೆ ಚಾಲನೆ (Uchila Shree Mahalakshmi Temple: festival starts from March 30)

Share: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಮಾ.30ರಿಂದ ವರ್ಷಾವಧಿ ಉತ್ಸವಕ್ಕೆ ಚಾಲನೆ ದ.ಕ. ಮೊಗವೀರ ಮಹಾಜನ ಸಂಘ, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯಿಂದ ಪ್ರಕಟಣೆ   (Uchila)ಉಚ್ಚಿಲ:  ದಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷೀ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವಾಧಿ ಕಾರ್ಯಕ್ರಮ ಮಾರ್ಚ್‌ 30ರಿಂದ ಏಪ್ರಿಲ್‌ 5ರ ವರೆಗೆ ನಡೆಯಲಿದೆ.    ಮಾ. 30ರಂದು ಬೆಳಗ್ಗೆ 6ರಿಂದ ಪ್ರಾತಃ ಕಾಲ ಪೂಜೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಂಜೆ 4 ಗಂಟೆಗೆ ಉಚ್ಚಿಲ […]

(Uchila)ಉಚ್ಚಿಲ:  ದಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷೀ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವಾಧಿ ಕಾರ್ಯಕ್ರಮ ಮಾರ್ಚ್‌ 30ರಿಂದ ಏಪ್ರಿಲ್‌ 5ರ ವರೆಗೆ ನಡೆಯಲಿದೆ.

   ಮಾ. 30ರಂದು ಬೆಳಗ್ಗೆ 6ರಿಂದ ಪ್ರಾತಃ ಕಾಲ ಪೂಜೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಸಂಜೆ 4 ಗಂಟೆಗೆ ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಾಪು ನಾಲ್ಕುಪಟ್ಟ ಮೊಗವೀರ ಮಹಿಳಾ ಮಂಡಳಿಗಳ ವತಿಯಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ದ.ಕ. ಮತ್ತು ಉಡುಪಿ ಮೊಗವೀರ ಮಹಿಳಾ ಮಹಾಜನ ಸಂಘ ಉಚ್ಚಿಲ ವತಿಯಿಂದ ನಿರ್ಮಿಸಲ್ಪಟ್ಟ ನೂತನ ಚಂದ್ರಮಂಡಲ ರಥ ಸಮರ್ಪಣಾ ಮೆರವಣಿಗೆ ನಡೆಯಲಿದೆ.

   31ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಏ. 1ರಂದು ಬೆಳಗ್ಗೆ ಧ್ವಜಾರೋಹಣ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

  2ರಂದು ಧಾರ್ಮಿಕ ಕಾರ್ಯಕ್ರಮ, 3ರಂದು ಮಧ್ಯಾಹ್ನ 12ಕ್ಕೆ ರಥಾರೋಹಣ, ರಾತ್ರಿ 7.30ಕ್ಕೆ ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಭದ್ರಕಾಳಿ ಅಮ್ಮನವರ ದರ್ಶನ ಸೇವೆ ನೆರವೇರಲಿದೆ.

    4ರಂದು ಬೆಳಗ್ಗೆ 9.30ರಿಂದ ತುಲಾಭಾರಾಧಿ ಸೇವೆಗಳು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7.30ರಿಂದ ಕೆರೆ ದೀಪೋತ್ಸವ, ಧ್ವಜಾವರೋಹಣ, 5ಕ್ಕೆ ಬೆಳಗ್ಗೆ ಮಹಾ ಸಂಪ್ರೋಕ್ಷಣೆ, ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ರಾತ್ರಿ ಭದ್ರಕಾಳಿ ಕುರುಜಿ ತರ್ಪಣ ನಡೆಯಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.