ಉಚ್ಚಿಲ : ಸರಸ್ವತಿ ಮಂದಿರ ಶಾಲಾ ಶತಮಾನೋತ್ಸವ ಸಂಭ್ರಮಾಚರಣೆ
(Uchila) ಉಚ್ಚಿಲ : ಸರಸ್ವತಿ ಮಂದಿರ ಶಾಲಾ ಶತಮಾನೋತ್ಸವ ಸಂಭ್ರಮಾಚರಣೆಯು ಭಾನುವಾರ ಶಾಲಾ ರಂಗಮಂದಿರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಶಾಸಕರು ಮಾತನಾಡಿ, ಆಂಗ್ಲ ಮಾದ್ಯಮ ಶಾಲೆಯ ಭರಾಟೆಯಲ್ಲಿ ಕನ್ನಡ ಮಾದ್ಯಮ ಶಾಲೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಮಾತಾಗಿದೆ. ಅಂತಹಾ ಸಂಕೀರ್ಣ ಪರಿಸ್ಥಿತಿಯಲ್ಲಿ ಒಂದು ಶಾಲೆ ನೂರು ವರ್ಷ ಪೂರೈಸುತ್ತಿರುವುದು ಸವಾಲಾಗಿದೆ ಎಂದರು.
ವಾಗ್ಮಿ ಪ್ರಕಾಶ್ ಮಲ್ಪೆಯವರು ಕನ್ನಡ ಶಾಲೆ ಉಳಿಸಿ ಬೆಸುವ ಬಗ್ಗೆ ಮಾಹಿತಿ ನೀಡಿದರು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಳೆ ವಿದ್ಯಾರ್ಥಿ ಸಂಘದಿಂದ ವಿದ್ಯಾನಿಧಿ ಯೋಜನೆಗೆ ಚಾಲನೆ ದೊರೆಯಿತು.
ಕಾಪು ತಾಲೂಕು ಪಂಚಾಯತ್ ಮಾಜಿ ಸದಸ್ಯ ಯು.ಸಿ. ಶೇಖಬ್ಬ, ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಅರ್ಚಕರಾದ ವಿಷ್ಣುಮೂರ್ತಿ ಉಪಾಧ್ಯಾಯ, ಉದ್ಯಮಿ ಧೀರಜ್ ಹುಸೇನ್, ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ, ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಗೀತಾ ವೈ., ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷೆ ಲಕ್ಷ್ಮೀ ಟೀಚರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಧ್ಯುಮಣಿ ಆರ್.ಭಟ್, ಕಾರ್ಯದರ್ಶಿ ಸತೀಶ್ ಕುಲಾಲ್, ಜೊತೆ ಕಾರ್ಯದರ್ಶಿ ಸುರೇಖ ಅಮೀನ್, ಕೋಶಾಧಿಕಾರಿ ಅನಿತ್ ಸಾಲ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕರುಣಾಕರ ಕೋಟ್ಯಾನ್, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಜೊತೆ ಕಾರ್ಯದರ್ಶಿ ಮಜೀದ್, ಕೋಶಾಧಿಕಾರಿ ರಾಕೇಶ್ ಕುಂಜೂರು ಉಪಸ್ಥಿತರಿದ್ದರು.
ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಸತೀಶ್ ಗುಡ್ಡೆಚ್ಚಿ ನಿರೂಪಿಸಿ, ರಾಕೇಶ್ ಕುಂಜೂರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ, ಪಿಂಗಾರ ಕಲಾವಿದೆರ್ ಬೆದ್ರ ತಂಡದಿಂದ “ಕದಂಬ” ತುಳು ನಾಟಕ ಪ್ರದರ್ಶನಗೊಂಡಿತು.

