• Home  
  • ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆಗೆ ಚಾಲನೆ (Ujire: Free dialysis service launched at Dharmasthala Sri Manjunatheshwara Hospital)
- ತಂತ್ರಜ್ಞಾನ - ದೈವ - ದೇವರು

ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆಗೆ ಚಾಲನೆ (Ujire: Free dialysis service launched at Dharmasthala Sri Manjunatheshwara Hospital)

Share: ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆಗೆ ಚಾಲನೆ ಉಜಿರೆ: ಉಜಿರೆಯಲ್ಲಿರುವ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆಗೆ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಹೊಸ ವರ್ಷದ ಶುಭ ದಿನದಂದು ಈ ಶುಭ ಕಾರ್ಯ ಮಾಡಲು ಅವಕಾಶ ಸಿಕ್ಕಿದ್ದು ನನಗೆ ತುಂಬ ಖುಷಿಯಾಗುತ್ತಿದೆ. ಕಿಡ್ನಿಗೆ ಸಂಬಂಧಪಟ್ಟಿರುವ ಕಾಯಿಲೆ ಗುಣಮುಖವಾಗುವುದಿಲ್ಲ. ಅದಕ್ಕೆ ನಿರಂತರ ಚಿಕಿತ್ಸೆ ಮತ್ತು […]

ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆಗೆ ಚಾಲನೆ

ಉಜಿರೆ: ಉಜಿರೆಯಲ್ಲಿರುವ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೇವೆಗೆ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಹೊಸ ವರ್ಷದ ಶುಭ ದಿನದಂದು ಈ ಶುಭ ಕಾರ್ಯ ಮಾಡಲು ಅವಕಾಶ ಸಿಕ್ಕಿದ್ದು ನನಗೆ ತುಂಬ ಖುಷಿಯಾಗುತ್ತಿದೆ. ಕಿಡ್ನಿಗೆ ಸಂಬಂಧಪಟ್ಟಿರುವ ಕಾಯಿಲೆ ಗುಣಮುಖವಾಗುವುದಿಲ್ಲ. ಅದಕ್ಕೆ ನಿರಂತರ ಚಿಕಿತ್ಸೆ ಮತ್ತು ಆರೈಕೆ ಬೇಕು. ಹಣ ಕೂಡ ಹೆಚ್ಚು ಬೇಕಿರುವ ಕಾರಣ ರೋಗಿಗಳು ಇದರಿಂದ ನೊಂದು ಹೋಗುತ್ತಾರೆ. ಈ ಒಂದು ಹೊರೆಯಿಂದ ಅವರನ್ನು ತಪ್ಪಿಸಲು ಮತ್ತು ಇಲ್ಲಿ ಉಳಿಕೆಯಾದ ಹಣವನ್ನು ಯಕೃತ್ತು ಕಸಿಗೆ ಬಳಸಿಕೊಳ್ಳಬಹುದು. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಈ ಸೇವೆ ಆರಂಭವಾಗಿರುವುದು ಖುಷಿ ತಂದಿದೆ ಎಂದರು.

 ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಡಯಾಲಿಸಿಸ್ ಗೆ ಒಳಪಟ್ಟಿದ್ದರು. ಅವರು ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗಿ ಬರುತ್ತಿದ್ದರು. ಅಲ್ಲದೇ ಅದರಿಂದ ಸುಧಾರಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಅಲ್ಲದೇ ಜೊತೆ ಇರುವವರಿಗೂ ಇದರಿಂದ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ನೆನೆಸಿಕೊಳ್ಳೋದೆ ಕಷ್ಟ. ಅವರು ಈಗ ಇಲ್ಲ, ಆದರೆ ಅವರಂತಹ ಅನೇಕರಿಗೆ ಇದರಿಂದ ಸಹಾಯವಾಗಿದೆ ಅಂದುಕೊಂಡಿದ್ದೇನೆ.

 ಉಚಿತ ಅನ್ನುವ ಭಾವನೆ ಬೇಡ. ಉಚಿತ ಅನ್ನುವ  ಭಾವನೆ ಕೊಡುವವರಲ್ಲೂ ಇರಬಾರದು. ಅದನ್ನು ಸ್ವೀಕರಿಸುವರಲ್ಲೂ ಇರಬಾರದು. ಆ ರೀತಿಯ ಮನೋಧರ್ಮವನ್ನು ನಮ್ಮ ನರ್ಸ್ ಗಳು, ಸಿಬ್ಬಂದಿಗಳು ಬೆಳೆಸಿಕೊಳ್ಳಬೇಕು ಎಂದೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಹೇಳಿದರು.

 ರೋಗಿಗಳನ್ನು ಭೇಟಿ ಮಾಡಿದ ಮಾತೃಶ್ರೀ ಹೇಮಾವತಿ ಹೆಗ್ಗಡೆ

 ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಡಯಾಲಿಸಿಸ್‌ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ಭೇಟಿ ಮಾಡಿದ ಹೇಮಾವತಿ ಹೆಗ್ಗಡೆ, ರೋಗಿಗಳ ಜೊತೆ ಮಾತುಕತೆ ನಡೆಸಿದರು. ಅವರ ನೋವಿಗೆ ಸ್ಪಂದಿಸಿ, ಈ ಸೇವೆ  ಉಚಿತವಾಗಿರಲಿದೆ. ಧೃತಿಗೆಡಬೇಡಿ ಎಂದು ಧೈರ್ಯ ತುಂಬಿದರು.

ಈ ಸಂದರ್ಭ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ಎಂ. ಜನಾರ್ಧನ್, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.