• Home  
  • ಉಡುಪಿಯ ಕೃಷ್ಣರಾಜ ರವರಿಗೆ ಪಿಎಚ್ ಡಿ ಪದವಿ ಪ್ರದಾನ (PhD degree conferred on Krishnaraja of Udupi)
- CONGARTULATIONS - ಶಾಲಾ ಕಾಲೇಜು

ಉಡುಪಿಯ ಕೃಷ್ಣರಾಜ ರವರಿಗೆ ಪಿಎಚ್ ಡಿ ಪದವಿ ಪ್ರದಾನ (PhD degree conferred on Krishnaraja of Udupi)

Share: ಉಡುಪಿಯ ಕೃಷ್ಣರಾಜ ರವರಿಗೆ ಪಿಎಚ್ ಡಿ ಪದವಿ ಪ್ರದಾನ  ಸೂರತ್ ನ ಸರ್ದಾರ್ ವಲ್ಲಭಭಾಯಿ ಎಸ್‌ವಿಎನ್‌ಐಟಿ ಸಂಸ್ಥೆಯಿಂದ ಪಿಎಚ್ ಡಿ    (Udupi) ಉಡುಪಿ: ಉಡುಪಿಯ ಕೃಷ್ಣರಾಜರವರಿಗೆ ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ, ಸೂರತ್ – ಎಸ್‌ವಿಎನ್‌ಐಟಿ, ಗುಜರಾತ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಿಂದ ಪಿಎಚ್.ಡಿ ಲಭಿಸಿದೆ.   ಕೃಷ್ಣರಾಜರವರ ಮಹಾಪ್ರಬಂಧದ ಶೀರ್ಷಿಕೆ “ಅನಾಲಿಸಿಸ್ ಆಂಡ್ ಆಪ್ಟಿಮೈಸೇಶನ್ ಆಫ್ ಅಟಾಕ್-ರೆಸಿಸ್ಟಂಟ್ ಸೀಕ್ರೆಟ್ ಇಮೇಜ್ ಶೇರಿಂಗ್ ಸ್ಕೀಮ್ಸ್” ಆಗಿದ್ದು, ಸೀಕ್ರೆಟ್ ಇಮೇಜ್ ಶೇರಿಂಗ್ ವ್ಯವಸ್ಥೆಗಳ ಭದ್ರತೆ […]

 ಸೂರತ್ ನ ಸರ್ದಾರ್ ವಲ್ಲಭಭಾಯಿ ಎಸ್ವಿಎನ್ಐಟಿ ಸಂಸ್ಥೆಯಿಂದ ಪಿಎಚ್ ಡಿ   

(Udupi) ಉಡುಪಿ: ಉಡುಪಿಯ ಕೃಷ್ಣರಾಜರವರಿಗೆ ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ, ಸೂರತ್ – ಎಸ್‌ವಿಎನ್‌ಐಟಿ, ಗುಜರಾತ್‌ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಿಂದ ಪಿಎಚ್.ಡಿ ಲಭಿಸಿದೆ.

  ಕೃಷ್ಣರಾಜರವರ ಮಹಾಪ್ರಬಂಧದ ಶೀರ್ಷಿಕೆ “ಅನಾಲಿಸಿಸ್ ಆಂಡ್ ಆಪ್ಟಿಮೈಸೇಶನ್ ಆಫ್ ಅಟಾಕ್-ರೆಸಿಸ್ಟಂಟ್ ಸೀಕ್ರೆಟ್ ಇಮೇಜ್ ಶೇರಿಂಗ್ ಸ್ಕೀಮ್ಸ್” ಆಗಿದ್ದು, ಸೀಕ್ರೆಟ್ ಇಮೇಜ್ ಶೇರಿಂಗ್ ವ್ಯವಸ್ಥೆಗಳ ಭದ್ರತೆ ಮತ್ತು ಕಾರ್ಯಕ್ಷಮತೆಯನ್ನು ವೃದ್ಧಿಸುವುದರ ಮೇಲೆ ಕೇಂದ್ರೀಕರಿಸಿದೆ.

   ಅವರ ಸಂಶೋಧನೆಗೆ ಪ್ರೊ. ಡಾ. ದೇವೇಶ್ ಸಿ. ಜಿನ್ವಾಲಾ ಮತ್ತು ಪ್ರೊ. ಡಾ. ಮುಖೇಶ್ ಎ. ಝಾವೇರಿ (ಎಸ್‌ವಿಎನ್‌ಐಟಿ, ಸೂರತ್) ಅವರೊಂದಿಗೆ ಭಾರತೀಯ ತಾಂತ್ರಿಕ ಸಂಸ್ಥೆ, ಜಮ್ಮುನ ಡಾ. ಯಮುನಾ ಪ್ರಸಾದ್ ಮಾರ್ಗದರ್ಶನ ನೀಡಿದ್ದಾರೆ.

ಕೃಷ್ಣರಾಜರವರು ಉಡುಪಿಯ ನಿವೃತ್ತ ಶಿಕ್ಷಕ ಎಂ. ಶ್ರೀನಿವಾಸ ಭಟ್ ಮತ್ತು ಬಿಎಸ್ ಎನ್ ಎಲ್ ಉದ್ಯೋಗಿಯಾಗಿದ್ದ ಶ್ರೀಮತಿ ಗಾಯತ್ರಿ ಎಸ್. ಭಟ್ ಅವರ ಪುತ್ರ ಹಾಗೂ ನಿಧಿ ಕೆ. ಅವರ ಪತಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.