• Home  
  • ಉಡುಪಿಯ ಮಲಬಾರ್ ಗೋಲ್ಡ್‌ನಲ್ಲಿ ‘ಸಿಲ್ವರ್ ಫೆಸ್ಟ್’ಗೆ ಚಾಲನೆ (‘Silver Fest’ kicks off at Malabar Gold in Udupi)
- ಫ್ಯಾಷನ್

ಉಡುಪಿಯ ಮಲಬಾರ್ ಗೋಲ್ಡ್‌ನಲ್ಲಿ ‘ಸಿಲ್ವರ್ ಫೆಸ್ಟ್’ಗೆ ಚಾಲನೆ (‘Silver Fest’ kicks off at Malabar Gold in Udupi)

Share: ಉಡುಪಿಯ ಮಲಬಾರ್ ಗೋಲ್ಡ್‌ನಲ್ಲಿ ‘ಸಿಲ್ವರ್ ಫೆಸ್ಟ್’ಗೆ ಚಾಲನೆ  ಬೆಳ್ಳಿ ಆಭರಣಗಳ ಅನಾವರಣ ಗೊಳಿಸಿದ ರೂಪದರ್ಶಿಗಳಾದ ಡಾ. ಆ್ಯನ್ಸಿ ಡಿಸೋಜಾ, ಭಾರತಿ ಸುರೇಶ್ (Udupi) ಉಡುಪಿ, ಜೂ. 7: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಜೂನ್ 14ರವರೆಗೆ ನಡೆಯಲಿರುವ ವೈವಿಧ್ಯಮಯ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವಾದ  ‘ಸಿಲ್ವರ್ ಫೆಸ್ಟ್’ಗೆ ಶನಿವಾರ ಚಾಲನೆ ನೀಡಲಾಯಿತು.   ರೂಪದರ್ಶಿಗಳಾದ ಡಾ. ಆ್ಯನ್ಸಿ ಡಿಸೋಜಾ ಹಾಗೂ ಭಾರತಿ ಸುರೇಶ್ ಅವರು ಬೆಳ್ಳಿ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸುವ […]

(Udupi) ಉಡುಪಿ, ಜೂ. 7: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಜೂನ್ 14ರವರೆಗೆ ನಡೆಯಲಿರುವ ವೈವಿಧ್ಯಮಯ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವಾದ  ‘ಸಿಲ್ವರ್ ಫೆಸ್ಟ್’ಗೆ ಶನಿವಾರ ಚಾಲನೆ ನೀಡಲಾಯಿತು.

  ರೂಪದರ್ಶಿಗಳಾದ ಡಾ. ಆ್ಯನ್ಸಿ ಡಿಸೋಜಾ ಹಾಗೂ ಭಾರತಿ ಸುರೇಶ್ ಅವರು ಬೆಳ್ಳಿ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆ್ಯನ್ಸಿ ಡಿಸೋಜಾ, ಮಲಬಾರ್ ಗೋಲ್ಡ್‌ನಲ್ಲಿ ಚಿನ್ನ, ವಜ್ರ, ಬೆಳ್ಳಿ ಹಾಗೂ ಪ್ಲಾಟಿನಂ ಆಭರಣಗಳ ಆಕರ್ಷಕ ಮತ್ತು ವೈವಿಧ್ಯಮಯ ಸಂಗ್ರಹ ಲಭ್ಯವಿದೆ. ಮಹಿಳೆಯರ ಅಭಿರುಚಿಗೆ ತಕ್ಕಂತಹ ವಿನ್ಯಾಸಗಳ ಆಭರಣಗಳು ಇಲ್ಲಿ ದೊರೆಯುತ್ತವೆ. ಬೆಳ್ಳಿ ಆಭರಣಗಳಲ್ಲಿಯೂ ವಿಶಿಷ್ಟ ವೈವಿಧ್ಯತೆ ಹಾಗೂ ಆಕರ್ಷಕ ವಿನ್ಯಾಸಗಳಿದ್ದು, ಸಿಬ್ಬಂದಿಯ ಸೇವೆಯೂ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸಿಲ್ವರ್ ಫೆಸ್ಟ್ ಯಶಸ್ವಿಯಾಗಲಿ ಎಂದು ಹಾರೈಸಿದರು.

   ಭಾರತಿ ಸುರೇಶ್ ಮಾತನಾಡಿ, ಹಲವು ವರ್ಷಗಳಿಂದ ತಾವು ಮಲಬಾರ್ ಗೋಲ್ಡ್‌ನಲ್ಲಿ ಆಭರಣಗಳನ್ನು ಖರೀದಿಸುತ್ತಿದ್ದು, ಇಲ್ಲಿನ ಉತ್ಪನ್ನಗಳ ಗುಣಮಟ್ಟ ಮತ್ತು ಸಿಬ್ಬಂದಿಯ ಗ್ರಾಹಕ ಸ್ನೇಹಿ ಸೇವೆ ಮೆಚ್ಚುವಂತಿದೆ ಎಂದು ಹೇಳಿದರು. ಸಂಸ್ಥೆ ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

   ಮಲಬಾರ್ ಗೋಲ್ಡ್‌ನ ಸೇಲ್ಸ್ ಅಸಿಸ್ಟೆಂಟ್ ಮ್ಯಾನೇಜರ್ ಸಂದೀಪ್ ಸಪಲ್ಯ ಮಾತನಾಡಿ, ಈ ಸಿಲ್ವರ್ ಫೆಸ್ಟ್‌ನಲ್ಲಿ ವಿಶೇಷ ಶೈಲಿಯ ಬೆಳ್ಳಿ ಆಭರಣಗಳ ವಿಶಾಲ ಸಂಗ್ರಹವನ್ನು ಗ್ರಾಹಕರಿಗಾಗಿ ಒದಗಿಸಲಾಗಿದೆ. ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೈಗಾರಿಕಾ ಕೌಶಲ್ಯದ ಆಭರಣಗಳು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ. ಉತ್ಸವದ ಅಂಗವಾಗಿ ಬೆಳ್ಳಿ ಆಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಶೇ.30 ರವರೆಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 ಕಾರ್ಯಕ್ರಮದಲ್ಲಿ ಉಡುಪಿ ಶಾಖೆಯ ಮುಖ್ಯಸ್ಥ ವಿಜಯ್ ಕುಮಾರ್ ಡಿ., ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಫಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಮತ್ತಿತರರು ಉಪಸ್ಥಿತರಿದ್ದರು.

ವಿಘ್ನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.