• Home  
  • ಉಡುಪಿ ಅಂಬಾಗಿಲು: ವಿಭಾಜಕಕ್ಕೆ ಕಾರು ಡಿಕ್ಕಿ – ಅಪಘಾತದ ರಭಸಕ್ಕೆ ಹಾರಿ ಹೋದ ಇಂಜಿನ್ (Udupi Ambagilu: Car overturned after hitting the divider, Engine flew away due to accident)
- ಅಪಘಾತ

ಉಡುಪಿ ಅಂಬಾಗಿಲು: ವಿಭಾಜಕಕ್ಕೆ ಕಾರು ಡಿಕ್ಕಿ – ಅಪಘಾತದ ರಭಸಕ್ಕೆ ಹಾರಿ ಹೋದ ಇಂಜಿನ್ (Udupi Ambagilu: Car overturned after hitting the divider, Engine flew away due to accident)

Share: ಉಡುಪಿ ಅಂಬಾಗಿಲು: ವಿಭಾಜಕಕ್ಕೆ ಕಾರು ಡಿಕ್ಕಿ – ಅಪಘಾತದ ರಭಸಕ್ಕೆ ಹಾರಿ ಹೋದ ಇಂಜಿನ್ ಉಡುಪಿ: ಕಾರೊಂದು  ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾದ ಘಟನೆ ಉಡುಪಿ ಅಂಬಾಗಿಲುವಿನಲ್ಲಿ ಗುರುವಾರ ರಾತ್ರಿ ಘಟಿಸಿದೆ.  ಭಟ್ಕಳದಿಂದ ಮಂಗಳೂರಿನತ್ತ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ […]

ಉಡುಪಿ ಅಂಬಾಗಿಲು: ವಿಭಾಜಕಕ್ಕೆ ಕಾರು ಡಿಕ್ಕಿ – ಅಪಘಾತದ ರಭಸಕ್ಕೆ ಹಾರಿ ಹೋದ ಇಂಜಿನ್

ಉಡುಪಿ: ಕಾರೊಂದು  ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾದ ಘಟನೆ ಉಡುಪಿ ಅಂಬಾಗಿಲುವಿನಲ್ಲಿ ಗುರುವಾರ ರಾತ್ರಿ ಘಟಿಸಿದೆ.

 ಭಟ್ಕಳದಿಂದ ಮಂಗಳೂರಿನತ್ತ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಭಾಗಗಳೆಲ್ಲಾ ರಸ್ತೆಯೆಲ್ಲಾ ಹರಡಿ ಬಿದ್ದಿದೆ. ಕಾರಿನ ಇಂಜಿನ್ ಮಾರುದ್ದ ಹೋಗಿ ಬಿದ್ದಿದೆ. ಅಪಘಾತಕ್ಕೆ ಚಾಲಕನ ಅತಿವೇಗದ ಚಾಲನೆ ಎನ್ನಲಾಗಿದೆ.

ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.