• Home  
  • ಉಡುಪಿ: ಅತಂತ್ರ ಸ್ಥಿತಿಯಲ್ಲಿದ್ದ ಹೊರ ರಾಜ್ಯದ ಯುವತಿಯ ರಕ್ಷಣೆ (Udupi: Rescue of a young woman from another state who was in a precarious situation)
- help

ಉಡುಪಿ: ಅತಂತ್ರ ಸ್ಥಿತಿಯಲ್ಲಿದ್ದ ಹೊರ ರಾಜ್ಯದ ಯುವತಿಯ ರಕ್ಷಣೆ (Udupi: Rescue of a young woman from another state who was in a precarious situation)

Share: ಉಡುಪಿ: ಅತಂತ್ರ ಸ್ಥಿತಿಯಲ್ಲಿದ್ದ ಹೊರ ರಾಜ್ಯದ ಯುವತಿಯ ರಕ್ಷಣೆ ವಿಶು ಶೆಟ್ಟಿಯವರು ಸಮಸ್ಯೆ ಪರಿಹಾರಕ್ಕಾಗಿ  ಇಲಾಖೆಯ ಗಮನ ಸೆಳೆದಿದ್ದಾರೆ. (Udupi) ಉಡುಪಿ: ಅತಂತ್ರ ಸ್ಥಿತಿಯಲ್ಲಿ ಅಸಹಾಯಕಳಾಗಿ ಸಮಸ್ಯೆಯಲ್ಲಿ ಬಿದ್ದ ಯುವತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಧೈರ್ಯ ತುಂಬಿ ಸಾಂತ್ವನ ಕೇಂದ್ರದ ಮೂಲಕ ಸಮಾಲೋಚನೆ ನಡೆಸಿ ತಾತ್ಕಾಲಿಕ ನೆಲೆ ಕಲ್ಪಿಸಿದ ಘಟನೆ ನಡೆದಿದೆ.    ಯುವತಿ ವಿದ್ಯಾವಂತೆಯಾಗಿದ್ದು, ಹೊರ ರಾಜ್ಯದವಳಾಗಿದ್ದಾಳೆ. ಯುವತಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಸಮಸ್ಯೆಯ ಪರಿಹಾರಕ್ಕೆ ದಾರಿ ತೋರಿಸಿ […]

ವಿಶು ಶೆಟ್ಟಿಯವರು ಸಮಸ್ಯೆ ಪರಿಹಾರಕ್ಕಾಗಿ  ಇಲಾಖೆಯ ಗಮನ ಸೆಳೆದಿದ್ದಾರೆ.

(Udupi) ಉಡುಪಿ: ಅತಂತ್ರ ಸ್ಥಿತಿಯಲ್ಲಿ ಅಸಹಾಯಕಳಾಗಿ ಸಮಸ್ಯೆಯಲ್ಲಿ ಬಿದ್ದ ಯುವತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಧೈರ್ಯ ತುಂಬಿ ಸಾಂತ್ವನ ಕೇಂದ್ರದ ಮೂಲಕ ಸಮಾಲೋಚನೆ ನಡೆಸಿ ತಾತ್ಕಾಲಿಕ ನೆಲೆ ಕಲ್ಪಿಸಿದ ಘಟನೆ ನಡೆದಿದೆ.

   ಯುವತಿ ವಿದ್ಯಾವಂತೆಯಾಗಿದ್ದು, ಹೊರ ರಾಜ್ಯದವಳಾಗಿದ್ದಾಳೆ. ಯುವತಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಸಮಸ್ಯೆಯ ಪರಿಹಾರಕ್ಕೆ ದಾರಿ ತೋರಿಸಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದಾರೆ.

   ಯುವತಿಯ ಸಮಸ್ಯೆ ಪರಿಹಾರಕ್ಕೆ ಬೇಕಾಗುವ ಕಾಲಾವಕಾಶಕ್ಕೆ ತಾತ್ಕಾಲಿಕ ನೆಲೆಗಾಗಿ ವಿಶು ಶೆಟ್ಟಿ ವಿನಂತಿಗೆ ಸರಕಾರದ ನೋಂದಣಿ ಸಂಸ್ಥೆಯೊಂದರಲ್ಲಿ ಅನುಮತಿ ದೊರೆತಿದ್ದು, ಸಂಸ್ಥೆಗೆ ವಿಶು ಶೆಟ್ಟಿಯವರು ಸಾಂತ್ವನ ಕೇಂದ್ರದ ಸಿಬ್ಬಂದಿಗಳ ಜೊತೆ ದಾಖಲಿಸಿದ್ದಾರೆ.

  ಯುವತಿಗೆ ಸಂಪೂರ್ಣ ನೆರವು ಹಾಗೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ವಿಶು ಶೆಟ್ಟಿ ಧೈರ್ಯ ತುಂಬಿ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.