• Home  
  • ಉಡುಪಿ: ಇಂದಿನಿಂದ ಶರತ್ಕಾಲದ ಸೂಪರ್ ಮೂನ್ ನೋಡಿ ಆನಂದಿಸಿ (Udupi: Enjoy the autumn supermoon from today
- science

ಉಡುಪಿ: ಇಂದಿನಿಂದ ಶರತ್ಕಾಲದ ಸೂಪರ್ ಮೂನ್ ನೋಡಿ ಆನಂದಿಸಿ (Udupi: Enjoy the autumn supermoon from today

Share: ಉಡುಪಿ: ಇಂದಿನಿಂದ ಶರತ್ಕಾಲದ ಸೂಪರ್ ಮೂನ್ ನೋಡಿ ಆನಂದಿಸಿ ಉಡುಪಿಯ ಖಗೋಳ ಶಾಸ್ತ್ರಜ್ಞ ಡಾ. ಎ. ಪಿ ಭಟ್ ಹೇಳಿಕೆ (Udupi) ಉಡುಪಿ: ಈ ವರ್ಷದ ಸೂಪರ್ ಮೂನ್ ಗಳ ಸರದಿ ಇಂದಿನಿಂದ ಪ್ರಾರಂಭಗೊಳ್ಳುತ್ತಿದೆ.    ಈ ವರ್ಷಾಂತ್ಯದ ಅಕ್ಟೋಬರ್ 7 ನವಂಬರ್ 5 ,ಹಾಗೂ ಡಿಸೆಂಬರ್  4 ರ ಹುಣ್ಣಿಮೆಗಳೆಲ್ಲ ಸೂಪರ್‌ ಮೂನ್‌ ಗಳೇ.     ಭೂಮಿ ಹಾಗೂ ಚಂದ್ರನ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಮೀ. ಇಂದು ಸುಮಾರು 3 […]

(Udupi) ಉಡುಪಿ: ಈ ವರ್ಷದ ಸೂಪರ್ ಮೂನ್ ಗಳ ಸರದಿ ಇಂದಿನಿಂದ ಪ್ರಾರಂಭಗೊಳ್ಳುತ್ತಿದೆ.

   ಈ ವರ್ಷಾಂತ್ಯದ ಅಕ್ಟೋಬರ್ 7 ನವಂಬರ್ 5 ,ಹಾಗೂ ಡಿಸೆಂಬರ್  4 ರ ಹುಣ್ಣಿಮೆಗಳೆಲ್ಲ ಸೂಪರ್‌ ಮೂನ್‌ ಗಳೇ.

    ಭೂಮಿ ಹಾಗೂ ಚಂದ್ರನ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಮೀ. ಇಂದು ಸುಮಾರು 3 ಲಕ್ಷದ 61 ಸಾವಿರ ಕಿ.ಮೀ ಗೆ ಬರುವ ಚಂದ್ರ ಸುಮಾರು 23 ಸಾವಿರ ಕಿ.ಮೀ ಸಮೀಪ ಬಂದು ಸುಮಾರು 18 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಳದಿಂಗಳೂ ಹೆಚ್ಚು.

    ಹುಣ್ಣಿಮೆಯೇ ಚೆಂದ. ಶರತ್ಕಾಲದ ಆಶ್ವಯುಜ ಆಕಾಶ ಭವ್ಯ. ತಿಳಿ ಬಿಳಿ ತೇಲುವ ಮೋಡಗಳ ಮಧ್ಯೆ ಬೆಳ್ಳಂಬೆಳದಿಂಗಳ ಚಂದ್ರಮ ಇನ್ನೂ ಚೆಂದ. ಅದರಲ್ಲೂ ಈಗ ಬಂದಿರುವ ಶರತ್ಕಾಲದ ಸೂಪರ್ ಮೂನ್ ನ  ಬೆಳದಿಂಗಳನ್ನು ಸವಿಯಬೇಕು.

    ಅಲ್ಲಲ್ಲಿ  ತೇಲುವ ಮಂಜುಗಡ್ಡೆಗಳ ಬಿಳಿ ಹಳದಿ ವರ್ತುಲದ ಹ್ಯಾಲೋ ಕೂಡಾ ಕಾಣ ಸಿಗಬಹುದು. ಪ್ರಕೃತಿಯ ವೈಭವವನ್ನು ಆರಾಧಿಸಿ, ಆಸ್ವಾದಿಸಿ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ ಡಾ ಎ ಪಿ ಭಟ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.