ಉಡುಪಿ – ಉಚ್ಚಿಲ ದಸರಾ 2024 : ರಂಜಿಸಿದ ಹೆಣ್ಣು ಹುಲಿ ನೃತ್ಯ
(Uchila) ಉಚ್ಚಿಲ: ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿ – ಉಚ್ಚಿಲ ದಸರಾ ಪ್ರಯುಕ್ತ ಉಡುಪಿಯ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಹೆಣ್ಣು ಹುಲಿ ನೃತ್ಯ ಸ್ಪರ್ಧೆ ಶ್ಯಾಮಿಲಿ ಜಿ ಶಂಕರ ಸಭಾಭವನದಲ್ಲಿ ನಡೆಯಿತು.
ಒಟ್ಟು ೧೪ ತಂಡಗಳು ಹಾಗೂ ವೈಯಕ್ತಿಕ ವಿಭಾಗದಲ್ಲಿ 36 ಮಂದಿ ಪಾಲ್ಗೊಂಡರು.
ತಂಡ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಡಿ.ಡಿ. ಗ್ರೂಪ್ ನಿಟ್ಟೂರು ತಂಡ ಪಡೆದಿದ್ದು, 25ಸಾವಿರ ರೂ. ನಗದು, ದ್ವಿತೀಯ ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡಕ್ಕೆ 20ಸಾವಿರ ರೂ., ಫಂಡರಿನಾಥ ಕೋಟೆ ಕಟಪಾಡಿ ತಂಡ 15ಸಾವಿರ ರೂ. ಹಾಗೂ ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಲಾಯಿತು.
ವೈಯಕ್ತಿಕ ವಿಭಗದಲ್ಲಿ ಪ್ರಥಮ ರಮ್ಯಾ ರೂಪೇಶ್ ದ್ವಿತೀಯ ಸೌಮ್ಯ ಸುರೇಂದ್ರ, ತೃತೀಯ ಕೃತಿ ವಿ. ಅಮೀನ್ ಸ್ಥಾನಿಯಾಗಿದ್ದು, ವಿಜೇತರಿಗೆ ಆರು ಸಾವಿರ ರೂ., ನಾಲ್ಕು ಸಾವಿರ ರೂ. ಹಾಗೂ ಮೂರು ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉಚ್ಚಿಲ ದಸರಾ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ.ಶಂಕರ್, ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿ ಆನಂದ ಸಿ. ಕುಂದರ್, ಸಮಾಜ ಸೇವಕಿ ಮೀನಾಕ್ಷಿ ಅಡ್ಯಂತಾಯ, ಚಲನಚಿತ್ರ ನಟ ಅರ್ಜುನ ಕಾಪಿಕಾಡ್, ಕಲಾವಿದೆ ಸುಶ್ಮಾರಾಜ್, ಬ್ಯಾಂಕ್‌ನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ಆಡಳಿತ ನಿರ್ದೇಶಕ ಶರತ್ ಕುಮಾರ್, ಎಜಿಎಂ ಶಾರಿಕಾ ಕಿರಣ್, ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಮಟ್ಟು, ತೀರ್ಪುಗಾರರಾದ ಕೆ. ಕೆ ಪೇಜಾವರ, ರಮೇಶ್ ಕಿದಿಯೂರು, ಶೇಖರ್, ಕಲಾ, ಪ್ರತಿಭಾ ಉಪಸ್ಥಿತರಿದ್ದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
