• Home  
  •   ಉಡುಪಿ – ಉಚ್ಚಿಲ ದಸರಾ 2025 : ಗುರುಕಿರಣ್ ಹಾಡಿನ ಮೋಡಿ, ಮೆಚ್ಚಿದ ಸಂಗೀತ ಪ್ರಿಯರು  (Udupi – Uchchila Dasara 2025: The charm of Gurukiran’s song, appreciated by music lovers)
- ಧಾರ್ಮಿಕ - ಮನೋರಂಜನೆ

  ಉಡುಪಿ – ಉಚ್ಚಿಲ ದಸರಾ 2025 : ಗುರುಕಿರಣ್ ಹಾಡಿನ ಮೋಡಿ, ಮೆಚ್ಚಿದ ಸಂಗೀತ ಪ್ರಿಯರು  (Udupi – Uchchila Dasara 2025: The charm of Gurukiran’s song, appreciated by music lovers)

Share: ಉಡುಪಿ – ಉಚ್ಚಿಲ ದಸರಾ 2025 : ಗುರುಕಿರಣ್ ಹಾಡಿನ ಮೋಡಿ, ಮೆಚ್ಚಿದ ಸಂಗೀತ ಪ್ರಿಯರು   ಗುರುಕಿರಣ್ ತಂಡದವರಿಂದ ಗುರುಕಿರಣ್ ಲೈವ್ ಸಂಗೀತ ಕಾರ್ಯಕ್ರಮ (‌Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿ – ಉಚ್ಚಿಲ ದಸರಾ 2025 ಇದರ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತಂಡದವರಿಂದ ಗುರುಕಿರಣ್ ಲೈವ್ ಸಂಗೀತ ಕಾರ್ಯಕ್ರಮ ಜರಗಿತು. ಸುಮಾರು ಮೂರು ತಾಸುಗಳ ಸಂಗೀತ ಕಾರ್ಯಕ್ರಮದಲ್ಲಿ ಗುರುಕಿರಣ್‌ […]

(‌Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿ – ಉಚ್ಚಿಲ ದಸರಾ 2025 ಇದರ ಅಂಗವಾಗಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ತಂಡದವರಿಂದ ಗುರುಕಿರಣ್ ಲೈವ್ ಸಂಗೀತ ಕಾರ್ಯಕ್ರಮ ಜರಗಿತು.

ಸುಮಾರು ಮೂರು ತಾಸುಗಳ ಸಂಗೀತ ಕಾರ್ಯಕ್ರಮದಲ್ಲಿ ಗುರುಕಿರಣ್‌ ಸೇರಿದಂತೆ ಖ್ಯಾತ ಗಾಯಕರಿಂದ ಕನ್ನಡ, ತುಳು, ಹಿಂದಿ ಭಾಷೆಯ ಹಾಡುಗಳು ಜನಮನ ಸೂರೆಗೊಂಡವು.

   ಈ ಸಂದರ್ಭ ಗುರುಕಿರಣ್ ತನ್ನ ಮಾತೃ ಭಾಷೆ ತುಳುವಿನಲ್ಲಿ ಮಾತನಾಡುವುದರ ಜೊತೆಗೆ ಹಳೆಯ ದಿನಗಳು ಹಾಗೂ ಪುನೀತ್ ರಾಜ್ ಕುಮಾ‌ರ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.

  ಕಿರಿಯರು ಹಿರಿಯರೆನ್ನದೇ ಎಲ್ಲರೂ ಇವರ ಹಾಡಿನ ಮೋಡಿಗೆ ತಲೆದೂಗಿದರು.

ವೇದಿಕೆಯಲ್ಲಿ ಗುರುಕಿರಣ್ ಮತ್ತು ಅವರ ಪತ್ನಿ ಪಲ್ಲವಿಯವರನ್ನು ಸನ್ಮಾನಿಸಲಾಯಿತು.

   ಈ ಸಂದರ್ಭ ದ.ಕ.ಮೊಗವೀರ ಮಹಾಜನ ಸಂಘದ ಸಲಹೆಗಾರ ನಾಡೋಜ ಡಾ. ಜಿ.ಶಂಕರ್,  ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ  ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ನಾರಾಯಣ ಜೆ ಕರ್ಕೇರ, ರಾಘವೇಂದ್ರ ಬೈಕಾಡಿ, ಗುಂಡು ಬಿ.ಅಮೀನ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿ ಸಾಧು ಸಾಲ್ಯಾನ್, ಶ್ರೀಪತಿ ಭಟ್, ಉಷಾ ರಾಣಿ ಬೋಳೂರು, ಮನೋಜ್ ಕಾಂಚನ್, ಸತೀಶ್ ಅಮೀನ್ ಬೆಣ್ಣೆಕುದ್ರು, ಸುಕುಮಾರ್ ಶ್ರೀಯಾನ್,    ಸುಗುಣ ಕರ್ಕೇರ ಮತ್ತು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.