ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಕೃತ್ಯ ನಡೆದ ಮನೆಗೆ ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ Udupi Dist Minister Laxmi Hebbalkar visit Malpe Nejaru
ಉಡುಪಿ: ಉಡುಪಿಯ ನೇಜಾರು ತೃಪ್ತಿನಗರದಲ್ಲಿರುವ ನೂರ್ ಮೊಹಮ್ಮದ್ ರವರ ಮನೆಯಲ್ಲಿ ಅವರ ಹೆಂಡತಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಬೆಳಿಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿ ನೂರ್ ಮೊಹಮ್ಮದ್ ರವರಿಗೆ ಮತ್ತು ಅವರ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳಜೊತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಇದೊಂದು ಬೆಚ್ಚಿ ಬೀಳುವ ಘಟನೆ ಆಗಿದೆ. ಪ್ರವೀಣ್ ಚೌಗುಲೆ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಅಮಾನುಷವಾಗಿ ಕೊಂದು ರಾಕ್ಷಸ ಕೃತ್ಯ ಎಸಗಿದ್ದಾನೆ. ಕೊಲೆಯಾದ ಮನೆಗೆ ಆಗಮಿಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದೇನೆ.
ಪೊಲೀಸ್ ಇಲಾಖೆಯು ಒಳ್ಳೆಯ ಕೆಲಸ ಮಾಡಿ ಅಪರಾಧಿಯನ್ನು ಶೀಘ್ರವಾಗಿ ಬಂಧಿಸಿದ್ದಾರೆ. ಆರೋಪಿಗೆ ಆದಷ್ಟು ಬೇಗ ನ್ಯಾಯ ದೊರಕಿಸಲು ಪ್ರಯತ್ನ ಪಡುತ್ತೇವೆ.
ಉಡುಪಿ ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆ, ಇಂತಹ ಜಿಲ್ಲೆಯಲ್ಲಿ ಹೀಗಾಗಬಾರದಿತ್ತು. ಮುಂಜಾಗ್ರತಾ ಕ್ರಮ ಕೈಗೊಳ್ಖುತ್ತೇನೆ. ಕಾನೂನು ಸುವ್ಯವಸ್ಥಿತೆ ಕಾಪಾಡುತ್ತೇವೆ.
ಆರೋಪಿ ಸೈಕೋ ರೀತಿಯಲ್ಲಿ ವರ್ತಿಸಿದ್ದಾನೆ ಎನ್ನಬಹುದು.
ಪ್ರವೀಣ್ ಮೊದಲೊಂದು ಮದುವೆ ಆಗಿದ್ದಾನೆ. ಎರಡು ಮಕ್ಕಳೂ ಇದೆ. ಕೇವಲಾ 20 ನಿಮಿಷದಲ್ಲಿ ಕೃತ್ಯ ಎಸಗಿದ್ದು ನೋಡಿದರೆ, ಮೆಂಟಲ್ ಸ್ಟೆಟಸ್ ಯಾವ ರೀತಿ ಇರಬಹುದು ಎನ್ನುವುದು ಅರ್ಥವಾಗುತ್ತೆ.
ಫಾಸ್ಟ್ ಟ್ರಾಕ್ ನ್ಯಾಯಾಲಯದ ಮೂಲಕ ತನಿಖೆ ಮಾಡಲಾಗುವುದು ಎಂದೂ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಇದ್ದ ಕಾರಣ ಘಟನಾ ಸ್ಥಳಕ್ಕೆ ಬರಲು ತಡವಾಗಿದೆ. ಅಲ್ಲಿಂದಲೇ ನಾನು ಕುಟುಂಬದ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿಇದ್ದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ಸಂದರ್ಬ ಮಾಜಿ ಶಾಸಕ ಗೋಪಾಲ ಪೂಜಾರಿ (EX MLA Gopala Poojary), ಪ್ರಸಾದ್ ರಾಜ್ ಕಾಂಚನ್ (Prasad Raj Kanchan), ಎಂಎ ಗಫೂರ್ MA Gafoor), ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ತಿತರಿದ್ದರು.
