ಉಡುಪಿ : ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚನೆ, ಸರಕಾರದ ಮಾನ್ಯತೆ
ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಆಯ್ಕೆ
(Bengaluru) ಬೆಂಗಳೂರು : ಕರಾವಳಿಯ ಜಾನಪದ ಕ್ರೀಡೆ ಕಂಬಳವು ಇದೀಗ ರಾಜ್ಯ ಕ್ರೀಡಾ ಸಂಸ್ಥೆಯಿಂದ ಮಾನ್ಯತೆ ಪಡೆದಿದ್ದು, ಕಂಬಳ ಕ್ರೀಡೆ ಎಂದು ಸರಕಾರ ಪರಿಗಣಿಸಿದೆ.
ಅಧ್ಯಕ್ಷರಾಗಿ ಬೆಳಪು ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿಯವರು ಆಯ್ಕೆ ಆಗಿದ್ದಾರೆ.
ಹಲವಾರು ವರ್ಷಗಳಿಂದ ಕಂಬಳವನ್ನು ಕ್ರೀಡೆಯಾಗಿ ಪರಿವರ್ತಿಸಬೇಕೆಂಬ ಆಗ್ರಹವನ್ನು ಕಂಬಳ ಸಂಸ್ಥೆ ಮಾಡಿತ್ತು ಈಗ ಕಾಲ ಕೂಡಿ ಬಂದಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ಬೆಳಪು ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿಯವರನ್ನು ಅಭಿನಂದಿಸಿದ್ದಾರೆ.
ಕಂಬಳ ಸಂಸ್ಥೆಯಲ್ಲಿ ಮೂವರು ಗೌರವ ಸಲಹೆಗಾರರರಿದ್ದು, ಅವರು ಉಪಾಧ್ಯಕ್ಷರು, ಕಾರ್ಯದರ್ಶಿ ಸಮಿತಿ ಸದಸ್ಯರ ಮತ್ತು 13 ಸದಸ್ಯರ ಒಳಗೊಂಡ 21 ಜನರ ಸಮಿತಿ ಆಯ್ಕೆ ಮಾಡಲಿದ್ದಾರೆ.
ಕಂಬಳ ಕ್ರೀಡೆಗೆ ರಾಜ್ಯ ಸರಕಾರದಿಂದ ಪ್ರತಿವರ್ಷ ಅನುದಾನ ಸಿಗಲಿದ್ದು, ಕಂಬಳ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

