ಉಡುಪಿ ಕಾಲೇಜು ವಿಡಿಯೋ ಖಂಡಿಸಿ ಎಬಿವಿಪಿಯಿಂದ ಪುತ್ತೂರು ನೆಹರು ನಗರ ಜಂಕ್ಷನ್ ನಲ್ಲಿ ಪ್ರತಿಭಟನೆ
ರಾಜ್ಯ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ, ಪೊಲೀಸ್ ಇಲಾಖೆಗೆ ಧಿಕ್ಕಾರ ಕೂಗಿದ ಎ ವಿ ವಿ ಪಿ ವಿದ್ಯಾರ್ಥಿಗಳು
ಮಹಿಳಾ ಶಕ್ತಿಗೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ, ಹೆಂಗಸರ ಸಮ್ಮಾನಕ್ಕೆ ಎಬಿವಿವಿಪಿ ಇಳಿದಿದೆ ಮೈದಾನಕ್ಕೆ, ವಿ ವಾಂಟ್ ಜಸ್ಟೀಸ್ ಸಹಿತ ವಿದ್ಯಾರ್ಥಿಗಳಿಂದ ಮೊಳಗಿದ ಹಲವು ಘೋಷಣೆಗಳು
ಪುತ್ತೂರು: ಉಡುಪಿಯ ಕಾಲೇಜು ವಿದ್ಯಾರ್ಥಿನಿಯ ಖಾಸಗಿ ದೃಶ್ಯವನ್ನು ಸೆರೆ ಹಿಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಕೇಸು ದಾಖಲಿಸಲು ವಿಳಂಬ ಧೋರಣೆ ತೋರುವ ಜತೆ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರದ ಯುತ್ನಿಸುತ್ತಿದೆ ಎಂದು ಆರೋಪಿಸಿ ಎಬಿವಿಪಿಯಿಂದ ಪುತ್ತೂರು ನೆಹರುನಗರ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.
