• Home  
  • ಉಡುಪಿ ಜಯಲಕ್ಷ್ಮೀ ಬಟ್ಟೆಯಂಗಡಿ (Udupi Jayalxmi Store) ಮಳಿಗೆಯ ಸಿಬ್ಬಂದಿಗಳಿಂದ ಅಟೋ ಚಾಲಕನ ಮೇಲೆ ಹಲ್ಲೆಗೆ ಯತ್ನ: ಮಾತಿನ ಚಕಮಕಿ
- ಅಪರಾಧ - ವಿಡಿಯೋ

ಉಡುಪಿ ಜಯಲಕ್ಷ್ಮೀ ಬಟ್ಟೆಯಂಗಡಿ (Udupi Jayalxmi Store) ಮಳಿಗೆಯ ಸಿಬ್ಬಂದಿಗಳಿಂದ ಅಟೋ ಚಾಲಕನ ಮೇಲೆ ಹಲ್ಲೆಗೆ ಯತ್ನ: ಮಾತಿನ ಚಕಮಕಿ

Share: ಉಡುಪಿ: ಹೊಟ್ಟೆ ಪಾಡಿಗಾಗಿ ದುಡಿಯುವ ಬಡ ಅಟೋ ಚಾಲಕರಿಗೆ  ಬನ್ನಂಜೆಯಲ್ಲಿ ನೂತನವಾಗಿ  ಅರಂಭವಾಗಿರುವ ಜಯಲಕ್ಷ್ಮೀ ಬಟ್ಟೆ ಮಳಿಗೆ ಸಿಬಂದಿಗಳಿಂದ  ನಿರಂತರ ದಬ್ಬಾಳಿಕೆ ಹಲ್ಲೆಗಳು  ನಡೆಯುತ್ತಿದೆ ಎನ್ನುವ ಅರೋಪಗಳು  ಹಲವು ದಿನಗಳಿಂದ ಕೇಳಿ ಬರುತ್ತಿರುವ ಬೆನ್ನಲ್ಲೆ, ಮತ್ತೆ ಬಟ್ಟೆ ಮಳಿಗೆ ಸಿಬ್ಬಂದಿಗಳಿಂದ ಅಟೋ ಚಾಲಕನ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಜಯಲಕ್ಷ್ಮೀ ಬಟ್ಟೆ ಮಳಿಗೆ ಎದುರು ನಿಂತಿದ್ದ ಅಟೋ ಚಾಲಕನಿಗೆ ನಿಂದಿಸಿ ಹಲ್ಲೆಗೆ ಯತ್ನ ನಡೆಸಿರುವುದಲ್ಲದೇ, ಅಟೋ ಚಾಲಕನ ಕೈಯಲ್ಲಿದ್ದ ಕೀ ಕಸಿದು, ಅಟೋದ ಹಿಂದೆ ಮತ್ತು ಮುಂದೆ ವಾಹನ […]

udupi bannaje jayalaxi silks owner dadagiri

ಉಡುಪಿ: ಹೊಟ್ಟೆ ಪಾಡಿಗಾಗಿ ದುಡಿಯುವ ಬಡ ಅಟೋ ಚಾಲಕರಿಗೆ  ಬನ್ನಂಜೆಯಲ್ಲಿ ನೂತನವಾಗಿ  ಅರಂಭವಾಗಿರುವ ಜಯಲಕ್ಷ್ಮೀ ಬಟ್ಟೆ ಮಳಿಗೆ ಸಿಬಂದಿಗಳಿಂದ  ನಿರಂತರ ದಬ್ಬಾಳಿಕೆ ಹಲ್ಲೆಗಳು  ನಡೆಯುತ್ತಿದೆ ಎನ್ನುವ ಅರೋಪಗಳು  ಹಲವು ದಿನಗಳಿಂದ ಕೇಳಿ ಬರುತ್ತಿರುವ ಬೆನ್ನಲ್ಲೆ, ಮತ್ತೆ ಬಟ್ಟೆ ಮಳಿಗೆ ಸಿಬ್ಬಂದಿಗಳಿಂದ ಅಟೋ ಚಾಲಕನ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

ಜಯಲಕ್ಷ್ಮೀ ಬಟ್ಟೆ ಮಳಿಗೆ ಎದುರು ನಿಂತಿದ್ದ ಅಟೋ ಚಾಲಕನಿಗೆ ನಿಂದಿಸಿ ಹಲ್ಲೆಗೆ ಯತ್ನ ನಡೆಸಿರುವುದಲ್ಲದೇ, ಅಟೋ ಚಾಲಕನ ಕೈಯಲ್ಲಿದ್ದ ಕೀ ಕಸಿದು, ಅಟೋದ ಹಿಂದೆ ಮತ್ತು ಮುಂದೆ ವಾಹನ ಇಟ್ಟು ಎಲ್ಲಿಯೂ ಹೋಗದಂತೆ ತಡೆದು ದೌರ್ಜನ್ಯ ನಡೆಸಿರುವ ಘಟನೆ ನಡೆದಿದೆ.

 ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉಳಿದ ಅಟೋ ಚಾಲಕರು ಬಟ್ಟೆ ಮಳಿಗೆ ಎದುರು ಪ್ರತಿಭಟನೆ ನಡೆಸಿದರು.

 ಈ ಸಂಧರ್ಭ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಯೊಬ್ಬರು ಅಟೋ ಕೀ ಕೊಡಿಸುವ ಬದಲು ಅಟೋ ಚಾಲಕರನ್ನೇ ದಾಬಾಯಿಸುತ್ತಿರುವುದು ಕಂಡು ಬಂದಿದೆ.

ಪೊಲೀಸ್ ಅಧಿಕಾರಿಯ ವರ್ತನೆ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರ  ಅಕ್ರೋಶಕ್ಕೆ ಕಾರಣವಾಯ್ತು. ಸ್ಥಳಕ್ಕೆ ಅಗಮಿಸಿದ ಬಟ್ಟೆ ಮಳಿಗೆ ಮಾಲೀಕ ಅಟೋ ಕೀ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯ್ತು. ಮಾಲೀಕನ‌ ವರ್ತನೆ ಅಟೋ ಚಾಲಕರ ತಾಳ್ಮೆ ಕಡೆಸಿತ್ತು.

ಸ್ಥಳದಲ್ಲಿದ್ದ ಅಟೋ ಚಾಲಕರು ಹಾಗೂ ಸ್ಥಳೀಯರು ಬಟ್ಟೆ ಮಳಿಗೆ ಮಾಲೀಕನನ್ನ ತರಾಟೆಗೆ ತೆಗೆದುಕೊಂಡರು. ಅಟೋ ಚಾಲಕರು ಈ ಬಗ್ಗೆ ಎಸ್ ಪಿ ಗೆ ಮಾಹಿತಿ ನೀಡಿದ ಹಿನ್ನಲೆ ಯಲ್ಲಿ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಅಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

 ಬನ್ನಂಜೆಯಲ್ಲಿ ನೂತನವಾಗಿ ಅರಂಭವಾಗಿರುವ ಈ‌ಬ ಟ್ಟೆ ಮಳಿಗೆಯಿಂದ ತೀವ್ರ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ನಿಯಮದಂತೆ ಹೆದ್ದಾರಿ ಅಗಲೀಕರಣಕ್ಕೆ ನೀಡಬೇಕಾದ ಭೂಮಿಯನ್ನು ಬಿಟ್ಟುಕೊಡದೇ ಇರುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿ, ಈ ಸಮಸ್ಯೆ ತಲೆದೋರಿದೆ‌ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

 ನಗರ ಸಭೆ ಹಾಗೂ ಪೊಲೀಸ್ ವರಿಷ್ಟಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.

 ಹೆದ್ದಾರಿಗೆ ಅಗಲೀಕರಣದ ಜಾಗ ಬಿಟ್ಟು ಕೊಡಲಿ ಟ್ರಾಫಿಕ್ ಸಮಸ್ಯೆ ಪರಿಹಾರ

ನಗರಸಭೆ ನಿಯಮದಂತೆ ಕಟ್ಟಡಗಳು ನಿರ್ಮಿಸುವಾಗ ನಿಯಮದಂತೆ ಮಾಲೀಕರು ರಸ್ತೆ ಅಗಲೀಕರಣಕ್ಕೆ ಭೂಮಿ ದಾನ ಮಾಡಬೇಕು. ವಿಶೇಷವಾಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸುಮಾರು 25 ಮೀಟರ್ ಸೆಟ್ ಬ್ಯಾಕ್ ನೀಡಿ ಕಟ್ಟಬೇಕು. ಅದರೆ ಇಲ್ಲಿ ಆ ಜಾಗವನ್ನು ಬಿಟ್ಟು ಕೊಡದೇ ಅಂಗಡಿ ಮಾಲೀಕ ನಿಯಮ‌ ಉಲ್ಲಂಘಿಸಿದ್ದಾರೆ. ಅಗಲೀಕರಣದ ಭೂಮಿ ನಗರ ಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ವಾಧೀನಕ್ಕೆ ಪಡೆದು ಅಗಲಗೊಳಿಸಿದರೆ ಟ್ರಾಫಿಕ್ ಸಮಸ್ಯೆ ಪರಿಹಾರ ಅಗುತ್ತೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.