ಉಡುಪಿ ಜಿಲ್ಲಾ ಸಾಸ್ ಮಹಿಳಾ ಘಟಕದ ಪದಗ್ರಹಣ ಸಂಪನ್ನ
ಉಡುಪಿ: ಉಡುಪಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (Shabarimle Ayyappa Seva Samajam) ಇದರ ಜಿಲ್ಲಾ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮವು ಮಲ್ಪೆಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರುಗಿತು.
ಸಂಘಟನೆಯ ರಾಷ್ಟ್ರಾಧ್ಯಕ್ಷ ಟಿ.ಬಿ. ಶೇಖರ್ (National President TB Shekhar)ಅವರು ಜಿಲ್ಲಾ ಸಂಚಾಲಕಿಯಾಗಿ ಆಯ್ಕೆಯಾಗಿರುವ ತಾರಾ ಉಮೇಶ್ ಆಚಾರ್ಯ ಕಲ್ಮಂಜೆ (Thara Umesh acharya kalmanje) ಅವರಿಗೆ ಪದಪ್ರದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ನಾಡೋಜ ಡಾ. ಜಿ. ಶಂಕರ್, ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್ ಮತ್ತಿತತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಗೌರವಾಧ್ಯಕ್ಷರಾಗಿ ಉಷಾ ಸುವರ್ಣ ಮಲ್ಪೆ, ವೇದಾವತಿ ಶೆಟ್ಟಿ ಮಣಿಪಾಲ, ಪೂರ್ಣಿಮಾ ಜನಾರ್ಧನ್ ಕೊಡವೂರು, ಉಪಾಧ್ಯಕ್ಷರಾಗಿ ಕೇಸರಿ ಮೆಂಡನ್ ಕಾಪು, ಪ್ರಿಯಾ ಬೆಸ್ಕೂರ್ ಬೈಂದೂರು, ಸೌರಭಿ ಪೈ ಕುಂದಾಪುರ, ವಿನಯಾ ಕಾರ್ಕಳ, ಸರೋಜಾ ಯಶ್ವಂತ್ ಕಸ್ತೂರ್ಬಾನಗರ, ಶೋಭಾ ಸಿ. ಶೆಟ್ಟಿ ಚಿಟ್ಪಾಡಿ ಮತ್ತು ರಶ್ಮಿತಾ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಕಾರ್ಯಾಧ್ಯಕ್ಷರಾಗಿ ಸರೋಜಾ ಆರ್.ಶೆಣೈ ಕುಕ್ಕಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಆರ್. ಶೆಟ್ಟಿ ಉಡುಪಿ, ಜತೆಕಾರ್ಯದರ್ಶಿಗಳಾಗಿ, ಸುಜಲಾ ಎಸ್ ಸುವರ್ಣ ಇಂದ್ರಾಳಿ ಮತ್ತು ಪ್ರಭಾವತಿ ಅಲೆವೂರ್, ಸಂಘಟನಾ ಕಾರ್ಯದರ್ಶಿಯಾಗಿ ಗೀತಾ ರವಿ ಶೇಟ್ ಒಳಕಾಡು, ಸಹಸಂಘಟನಾ ಕಾರ್ಯದರ್ಶಿಗಳಾಗಿ ರಮಿತಾ ಶೈಲೇಂದ್ರ ಕಾರ್ಕಳ, ಸುಧಾ ಎಸ್.ಪೈ ಉಡುಪಿ, ಮತ್ತು ಮಾಯಾ ಕಾಮತ್ ಈಶ್ವರನಗರ ಮಣಿಪಾಲ, ಕೋಶಾಧಿಕಾರಿಯಾಗಿ ತಾರಾ ಸತೀಶ್ ಮಠದಬೆಟ್ಟು, ಸಹಕೋಶಾಧಿಕಾರಿಯಾಗಿ, ಸುಗುಣಾ ನಾಯಕ್ ಇಂದ್ರಾಳಿ, ಮಾಧ್ಯಮ ಸಲಹೆಗಾರರಾಗಿ ಯಶೋಧಾ ಕೇಶವ್, ಗೌರವ ಸಲಹೆಗಾರರಾಗಿ, ಶ್ರೀಮತಿ ಪದ್ಮಾ ರತ್ನಾಕರ್ ಕುಕ್ಕಿಕಟ್ಟೆ, ವೀಣಾ ಎಸ್. ಶೆಟ್ಟಿ ಉಡುಪಿ, ನಳಿನಿ ಪ್ರದೀಪ್ ಬ್ರಹ್ಮಾವರ ಮತ್ತು ಜ್ಯೋತಿ ಸತೀಶ್ ದೇವಾಡಿಗ ಇಂದಿರಾನಗರ ಹಾಗೂ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳ ಪದಾಧಿಕಾರಿಗಳನ್ನು ಘೋಷಿಸಲಾಯಿತು.

