• Home  
  • ಉಡುಪಿ ಜಿಲ್ಲೆಯಲ್ಲಿ 14,763 ಪದವೀಧರ, 2937 ಶಿಕ್ಷಕ ಮತದಾರರು: ಡಿಸಿ ಡಾ. ವಿದ್ಯಾಕುಮಾರಿ (14, 763 Graduates, 2937 Teacher voters in Udupi District : Udupi DC Dr. Vidhyakumari)
- ರಾಜಕೀಯ

ಉಡುಪಿ ಜಿಲ್ಲೆಯಲ್ಲಿ 14,763 ಪದವೀಧರ, 2937 ಶಿಕ್ಷಕ ಮತದಾರರು: ಡಿಸಿ ಡಾ. ವಿದ್ಯಾಕುಮಾರಿ (14, 763 Graduates, 2937 Teacher voters in Udupi District : Udupi DC Dr. Vidhyakumari)

Share: ಉಡುಪಿ ಜಿಲ್ಲೆಯಲ್ಲಿ 14,763 ಪದವೀಧರ, 2937 ಶಿಕ್ಷಕ ಮತದಾರರು: ಡಿಸಿ ಡಾ. ವಿದ್ಯಾಕುಮಾರಿ ಜೂನ್ 3ರಂದು ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿದೆ ಚುನಾವಣೆ (Udupi) ಉಡುಪಿ : ಜೂನ್ 3ರಂದು ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಿಂದ ನೈರುತ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 14,763 ಪದವೀಧರರು ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 2937 ಶಿಕ್ಷಕರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ (Udupi DC Dr. Vidhyakumari) ತಿಳಿಸಿದ್ದಾರೆ.  ಮಣಿಪಾಲದ […]

ಉಡುಪಿ ಜಿಲ್ಲೆಯಲ್ಲಿ 14,763 ಪದವೀಧರ, 2937 ಶಿಕ್ಷಕ ಮತದಾರರು: ಡಿಸಿ ಡಾ. ವಿದ್ಯಾಕುಮಾರಿ

ಜೂನ್ 3ರಂದು ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿದೆ ಚುನಾವಣೆ

(Udupi) ಉಡುಪಿ : ಜೂನ್ 3ರಂದು ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಿಂದ ನೈರುತ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 14,763 ಪದವೀಧರರು ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 2937 ಶಿಕ್ಷಕರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ (Udupi DC Dr. Vidhyakumari) ತಿಳಿಸಿದ್ದಾರೆ.

 ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

 ಕಳೆದ ಡಿಸೆಂಬರ್ ತಿಂಗಳವರೆಗೆ 6787 ಪುರುಷರು ಹಾಗೂ 7976 ಮಹಿಳೆಯರು ಸೇರಿದಂತೆ 14,763 ಮಂದಿ ಪದವೀಧರರು ಮತದಾರ ಪಟ್ಟಿಯಲ್ಲಿ ನೊಂದಾವಣೆಗೊಂಡಿದ್ದರೆ, 1292 ಪುರುಷ ಹಾಗೂ 1645 ಮಹಿಳಾ ಶಿಕ್ಷಕರು ಶಿಕ್ಷಕ ಮತ ಕ್ಷೇತ್ರದಲ್ಲಿ ನೊಂದಾವಣೆಗೊಂಡಿದ್ದಾರೆ ಎಂದರು.

  ಭಾರತ ಚುನಾವಣಾ ಆಯೋಗ ಈಗಾಗಲೇ ಚುನಾವಣಾ ವೇಳಾಪಟ್ಟಿ ಯನ್ನು ಪ್ರಕಟಿಸಿದೆ. ಮೇ 9ರಂದು ಚುನಾವಣಾ ಅಧಿಸೂಚನೆ ಹೊರಡಲಿದ್ದು, ಮೇ 9ರಿಂದ 16ರವರೆಗೆ ನಾಮಪತ್ರ ಸಲ್ಲಿಸಬಹುದು. 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 20 ನಾಮಪತ್ರ ಹಿಂದೆಗೆತಕ್ಕೆ ಅಂತಿಮ ದಿನ. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.