• Home  
  • ಉಡುಪಿ : ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ (Udupi: Eid Milad celebration by Muslim relatives across the district)
- ಧಾರ್ಮಿಕ

ಉಡುಪಿ : ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ (Udupi: Eid Milad celebration by Muslim relatives across the district)

Share: ಉಡುಪಿ : ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ ಮದರಸ ಮಕ್ಕಳಿಂದ ಆಕರ್ಷಕ ದಫ್ ಕುಣಿತ ಗಮನ ಸೆಳೆಯಿತು (Udupi) ಉಡುಪಿ: ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಅಂಗವಾಗಿ ಈದ್ ಮಿಲಾದ್ (ಮಿಲಾದುನ್ನಬಿ)ಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಆಚರಿಸಲಾಯಿತು.  ಶುಕ್ರವಾರ ಮುಂಜಾನೆ ಹೆಚ್ಚಿನ ಮಸೀದಿಗಳಲ್ಲಿ ಮೌಲೂದ್ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು. ಬೆಳಿಗ್ಗೆ ಮಸೀದಿ, ಮದ್ರಸಾಗಳಲ್ಲಿ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ […]

(Udupi) ಉಡುಪಿ: ಪ್ರವಾದಿ ಮುಹಮ್ಮದ್ ಅವರ ಜನ್ಮದಿನ ಅಂಗವಾಗಿ ಈದ್ ಮಿಲಾದ್ (ಮಿಲಾದುನ್ನಬಿ)ಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಆಚರಿಸಲಾಯಿತು.

 ಶುಕ್ರವಾರ ಮುಂಜಾನೆ ಹೆಚ್ಚಿನ ಮಸೀದಿಗಳಲ್ಲಿ ಮೌಲೂದ್ ಪಾರಾಯಣ, ಪ್ರವಚನಗಳ ಮೂಲಕ ಪ್ರವಾದಿಯವರ ಸಂದೇಶ ವನ್ನು ನೀಡಲಾಯಿತು. ಬೆಳಿಗ್ಗೆ ಮಸೀದಿ, ಮದ್ರಸಾಗಳಲ್ಲಿ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

 ಸಿಹಿ ತಿಂಡಿ ಹಂಚಿ, ಪಾನೀಯ ವಿತರಿಸಲಾಯಿತು. ಮಸೀದಿ, ಮದ್ರ ಸಾಗಳಲ್ಲಿ ತುಪ್ಪದೂಟ, ರೊಟ್ಟಿಯೊಂದಿಗೆ ಮಾಂಸದ ಪದಾರ್ಥ ತಯಾರಿಸಿ ಹಂಚಲಾಯಿತು. ಕೆಲವೆಡೆ ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮಗಳೂ ನಡೆದವು.

 ಕೆಲವೆಡೆಗಳಲ್ಲಿ ಮದರಸಾ ವಿದ್ಯಾರ್ಥಿಗಳಿಂದ ಮೆರವಣಿಗೆ, ಆಕರ್ಷಕ ದಫ್ ಗಮನ ಸೆಳೆಯಿತು.‌

 ಮಿಲಾದುನ್ನಬಿ ಇಂದು ಆಚರಿಸುತ್ತಿದ್ದರೂ, ಕೆಲವು ಮಸೀದಿ ವ್ಯಾಪ್ತಿಗಳಲ್ಲಿ ಕಾರ್ಯಕ್ರಮ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಶನಿವಾರ ಮತ್ತು ಭಾನುವಾರಗಳಂದೂ ನಡೆಯಲಿದೆ.

  ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕುಂದಾಪುರ, ಕಾಪು ತಾಲ್ಲುಕಿನಾದ್ಯಂತ ಮುಸ್ಲಿಮ್ ಬಾಂಧವರು ಮೀಲಾದ್ ಪ್ರಯುಕ್ತ ರ‍್ಯಾಲಿ ನಡೆಯಿತು.

ಕಾಪು ತಾಲ್ಲೂಕಿನ ಕಾಪು, ಪೊಲಿಪು, ಮೂಳೂರು, ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಹೆಜಮಾಡಿಯಲ್ಲಿ ರ‍್ಯಾಲಿಯಲ್ಲಿ ಪ್ರವಾದಿ ಮುಹಮ್ಮದ್ ಅವರ ಸಂದೇಶಗಳು, ಹಾಡುಗಳನ್ನು ಹಾಡಲಾಯಿತು. ಜಾಥಾದ ಬಳಿಕ ಅನ್ನದಾನದ ವ್ಯವಸ್ಥೆಯಲ್ಲಿ ಆಯಾಯ ಮಸೀದಿಗಳನ್ನು ಏರ್ಪಡಿಸಲಾಯಿತು.

ಕಾಪುವಿನ ಪೊಲಿಪು ಮಸೀದಿಯಿಂದ ಹೊರಟ ಜಾಥಾವು ರಾಷ್ಟ್ರೀಯ ಹೆದ್ದಾರಿ ಮೂಲಕ ತಲುಪಿತು.

 ಮಜೂರಿನಿಂದ ಹೊರಟ ಮೀಲಾದ್ ರ‍್ಯಾಲಿಯು ರಾಷ್ಟ್ರೀಯ ಹೆದ್ದಾರಿ ತಲುಪಿ ಅಲ್ಲಿಂದ ಪೊಲಿಪು ಮಸೀದಿಗೆ ತಲುಪಿತು. ಮದರಸ ಮಕ್ಕಳ ದಫ್ ಗಮನಸೆಳೆಯಿತು.

ಕುಂಜೂರು, ಪೊಲ್ಯ, ಭಾಸ್ಕರ್ ನಗರ ಮದರಸದ ಮಕ್ಕಳು ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಮೂಲಕ ಮೂಳೂರು ಜುಮಾ ಮಸೀದಿಗೆ ತಲುಪಿತು. ಮೆರೆವಣಿಗೆಯ ಉದ್ದಕ್ಕೂ ಸಿಹಿ ತಿಂಡಿ, ತಂಪು ಪಾನೀಯಗಳನ್ನು ನೀಡಲಾಯಿತು. ಪ್ರವಾದಿ ಮುಹಮ್ಮದ್ ಸಂದೇಶ ಗೀತೆಗಳನ್ನು ಹಾಡಲಾಯಿತು.

 ಪಡುಬಿದ್ರಿ ಜಮಾಅತ್ ವತಿಯಿಂದ ನಡೆದ ಮೀಲಾದ್ ರ‍್ಯಾಲಿ ಕಂಚಿನಡ್ಕ ಜುಮ್ಮಾ ಮಸೀದಿಯಿಂದ ಹೊರಟಿತು. ರಾಜ್ಯ ಹೆದ್ದಾರಿ-ಪಡುಬಿದ್ರಿ ಪೇಟೆ- ಮಾರ್ಕೆಟ್ ರಸ್ತೆಯ ಮೂಲಕ ಪಡುಬಿದ್ರಿ ಜುಮ್ಮಾ ಮಸೀದಿಗೆ ಜಾಥಾ ತಲುಪಿತು. ಜಾಥಾದಲ್ಲಿ ಮದರಸ ಮಕ್ಕಳ ಸ್ಕೌಟ್ ಗಮನಸೆಳೆಯಿತು.

 ಕನ್ನಂಗಾರ್ ಜುಮ್ಮಾ ಮಸೀದಿಯ ವತಿಯಿಂದಲೂ ಹೆಜಮಾಡಿಯಾದ್ಯಂತ ಜಾಥಾ ಸಂಚರಿಸಿತು.

 ಭಾರೀ ಸಂಖ್ಯೆಯಲ್ಲಿ ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಮದರಸ ಮಕ್ಕಳ ದಫ್ ಆಕರ್ಷಕವಾಗಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.