• Home  
  • ಉಡುಪಿ ಜಿಲ್ಲೆಯ ವಕ್ಫ್ ಸಂಸ್ಥೆಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ: ಎಂ‌. ಪಿ.ಮೊಯಿದಿನಬ್ಬ (Solve the problems faced by waqf Institutions of Udupi Dist immediately: MP Moidinabba)
- ಕರಾವಳಿ - ರಾಜಕೀಯ

ಉಡುಪಿ ಜಿಲ್ಲೆಯ ವಕ್ಫ್ ಸಂಸ್ಥೆಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ: ಎಂ‌. ಪಿ.ಮೊಯಿದಿನಬ್ಬ (Solve the problems faced by waqf Institutions of Udupi Dist immediately: MP Moidinabba)

Share: ಉಡುಪಿ ಜಿಲ್ಲೆಯ ವಕ್ಫ್ ಸಂಸ್ಥೆಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ: ಎಂ‌. ಪಿ.ಮೊಯಿದಿನಬ್ಬ  (Udupi) ಉಡುಪಿ ; ಉಡುಪಿ ಜಿಲ್ಲೆಯಲ್ಲಿ ಇರುವ  ಕರ್ನಾಟಕ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ಮಸೀದಿ, ಮದ್ರಸ, ದರ್ಗಾ, ಖಬರಸ್ಥಾನಗಳ ಆಡಳಿತ ಸಮಿತಿಗಳು ತುರ್ತು ದುರಸ್ತಿ, ನವೀಕರಣ  ಕಾಮಗಾರಿ ನಿರ್ವಹಿಸಲು ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಸಮಸ್ಯೆಗಳಿಗೆ ಪರಿಹಾರ  ಒದಗಿಸದೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. […]

ಉಡುಪಿ ಜಿಲ್ಲೆಯ ವಕ್ಫ್ ಸಂಸ್ಥೆಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ: ಎಂ‌. ಪಿ.ಮೊಯಿದಿನಬ್ಬ

 (Udupi) ಉಡುಪಿ ; ಉಡುಪಿ ಜಿಲ್ಲೆಯಲ್ಲಿ ಇರುವ  ಕರ್ನಾಟಕ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ಮಸೀದಿ, ಮದ್ರಸ, ದರ್ಗಾ, ಖಬರಸ್ಥಾನಗಳ ಆಡಳಿತ ಸಮಿತಿಗಳು ತುರ್ತು ದುರಸ್ತಿ, ನವೀಕರಣ  ಕಾಮಗಾರಿ ನಿರ್ವಹಿಸಲು ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಸಮಸ್ಯೆಗಳಿಗೆ ಪರಿಹಾರ  ಒದಗಿಸದೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಇದನ್ನು ತಕ್ಷಣ ಪರಿಹರಿಸುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಎಂ. ಪಿ. ಮೊಯಿದಿನಬ್ಬ (MP Moidinabba) ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮದ್ (Zameer Ahammad) ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರನ್ನು ಆಗ್ರಹಿಸಿದ್ದಾರೆ.

   ಈ ಸಂಬಂಧ ಅವರು ಮನವಿಯನ್ನು ಸಲ್ಲಿಸಿ, ಜಿಲ್ಲೆಯ ಹಲವು ವಕ್ಫ್ ಸಂಸ್ಥೆಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಕೋರಿ ಕಳೆದ ಎರಡು ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸಿ ಕಾಯುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು ಉಡುಪಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ತಕ್ಷಣ ಉಡುಪಿ  ಜಿಲ್ಲೆಗೆ 2.00 ಕೋಟಿ ಅನುದಾನ ಬಿಡುಗಡೆ ಮಾಡಬೇಕು.

 ಜಿಲ್ಲೆಯ ವಕ್ಫ್  ಸಂಸ್ಥೆಗಳ ಆಡಳಿತ ಸಮಿತಿಗಳಿಗೆ ಆಯ್ಕೆ ನಡೆಸಿ  ಅನುಮೋದನೆಗೆ ಪ್ರಸ್ತಾವನೆಯನ್ನು ಬೆಂಗಳೂರಿನಲ್ಲಿ ಇರುವ ವಕ್ಫ್ ಮಂಡಳಿಯ  ಕಛೇರಿಗೆ ಸಲ್ಲಿಸಿದರೆ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಪ್ರಸ್ತಾವನೆ ಸಲ್ಲಿಕೆ ಮಾಡಿ ಕನಿಷ್ಠ  ಎರಡು ತಿಂಗಳೊಳಗೆ ಅನುಮೋದನೆ ನೀಡಬೇಕು‌ .

  ಉಡುಪಿ ಜಿಲ್ಲೆಯಲ್ಲಿ 385 ವಕ್ಫ್ ಆಸ್ತಿಗಳ ಖಾತಾ ಬದಲಾವಣೆ ಪ್ರಕರಣಗಳು  ತಹಶೀಲ್ದಾರ್ ಕಚೇರಿಯ ಹಂತದಲ್ಲಿ ಬಾಕಿ ಇದೆ.  ಕೂಡಲೇ ಕ್ರಮ ಕೈಗೊಂಡು ಅನುಪಾಲನಾ ವರದಿ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರು ಜಿಲ್ಲಾಧಿಕಾರಿಯವರಿಗೆ 2021  ರಲ್ಲಿ ನಿರ್ದೇಶನ ನೀಡಿದ್ದರೂ ಕಡತಗಳು ಇನ್ನೂ  ತಹಶೀಲ್ದಾರ್ ಕಚೇರಿಯಲ್ಲಿ ಕೊಳೆಯುತ್ತಿದೆ.

ಕರ್ನಾಟಕ ವಕ್ಫ್ ಮಂಡಳಿಯು ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಈ ವಿಚಾರದಲ್ಲಿ  ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮೊಯಿದಿನಬ್ಬನವರು  ಸಚಿವರು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರನ್ನು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.