ಉಡುಪಿ : ಡಿಡಿ ವರದಿಗಾರ ಜಯಕರ ಸುವರ್ಣ ನಿಧನ
(Udupi) ಉಡುಪಿ : ದೂರದರ್ಶನದ ಉಡುಪಿ ಜಿಲ್ಲಾ ವರದಿಗಾರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್ ಕೆಪಿಎ) ಸಂಘಟನೆಯ ಸಕ್ರಿಯ ಸದಸ್ಯ, ಜಯಕರ ಸುವರ್ಣ ಹೃದಯಾಘಾತದಿಂದ ಸೋಮವಾರ ರಾತ್ರಿ ಕೊನೆಯುಸಿಳೆದಿದ್ದಾರೆ.
ಬಿಲ್ಲವ ಸಂಘಟನೆ ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ, ಜಯಕರ ಸುವರ್ಣರವರದ್ದು ಆತ್ಮೀಯ ಸ್ವಭಾವ. ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾಗಿದ್ದ ಜಯಣ್ಣ, ಎಸ್ಕೆಪಿಯ ಉಭಯ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಬಂಧುಗಳನ್ನು ಜಯಕರ ಸುವರ್ಣ ಅಗಲಿದ್ದಾರೆ.
ಸಂತಾಪ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಡುಪಿ ಜಿಲ್ಲಾ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಎಸ್‌ಕೆಪಿಎ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಎಸೆಪಿಎ ಉಡುಪಿ ವಲಯಾಧ್ಯಕ್ಷ ಸುಧೀರ್ ಶೆಟ್ಟಿ, ಕಾಪು ವಲಯಾಧ್ಯಕ್ಷ ಸಚಿನ್ ಉಚ್ಚಿಲ ಸಹಿತ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

