ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ 27ನೇ ಮಹಾಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಉತ್ತಮ ಸಾಧನೆ ಮಾಡಿದ 42ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
(Udupi) ಉಡುಪಿ :ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ 27ನೇ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶ್ರೀ ಕಡಿಯಾಳಿ ಮಹಿಷ ಮರ್ದಿನಿ ದೇವಾಲಯದ ಶರ್ವಾಣಿ ಸಭಾಂಗಣದಲ್ಲಿ
ಶ್ರೀಕಾಂತ್ ಉಪಾಧ್ಯಾರವರು ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಪೂರ್ಣಪ್ರಜ್ಞಾ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಟಿ. ಎಸ್ ರಮೇಶ್, ಉಡುಪಿ ಗಾಂಧಿ ಆಸ್ಪತ್ರೆಯ ಮುಖ್ಯಸ್ಥ ಡಾ. ಹರಿಶ್ಚಂದ್ರ, ನೃತ್ಯ ವಿದುಷಿ ಹಾಗೂ ಆಯುರ್ವೇದ ತಜ್ಞೆ ಡಾ. ರಶ್ಮಿ ಗುರುಮೂರ್ತಿ, ನಿಕಟಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ವಿಜಯ ರಾಘವ ರಾವ್, ಮಂಜುನಾಥ ಉಪಾಧ್ಯಾಯ, ಮಹಿಳಾ ಅಧ್ಯಕ್ಷೆ ಶೋಭಾ ಉಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ 42ಕ್ಕೂ ಹೆಚ್ಚು ಪ್ರತಿಭಾವಂತ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಅಶಕ್ತ ವಿಪ್ರರಿಗೆ ಧನಸಹಾಯ ನೆರವನ್ನು ನೀಡಲಾಯಿತು.
ವಿವಿಧ ಬ್ರಾಹ್ಮಣ ವಲಯಗಳ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೋಶಾಧಿಕಾರಿ ಹಯವದನ ಭಟ್ ಲೆಕ್ಕ ಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಕೆ ದುರ್ಗಾ ಪ್ರಸಾದ್ ಭಾರ್ಗವ್ ರವರು ವಾರ್ಷಿಕ ವರದಿ ವಾಚಿಸಿ, ಮತ್ತು ವಂದನಾರ್ಪಣೆ ಗೈದರು. ಶ್ರೀನಿವಾಸ್ ಬಲ್ಲಾಳ್ ಹಾಗೂ ಸೌಧಾಮಿನಿ ರಾವ್ ರವರು ಕಾರ್ಯಕ್ರಮ ನಿರೂಪಿಸಿದರು.

