• Home  
  • ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಸ್ವಾಮಿಜಿಯವರಿಂದ ಶ್ರೀ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ (Udupi: Paryaya Sri Puttige Swamiji launches construction of Parthasarathi golden chariot for Lord Krishna)
- ಧಾರ್ಮಿಕ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಸ್ವಾಮಿಜಿಯವರಿಂದ ಶ್ರೀ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ (Udupi: Paryaya Sri Puttige Swamiji launches construction of Parthasarathi golden chariot for Lord Krishna)

Share: ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಸ್ವಾಮಿಜಿಯವರಿಂದ ಶ್ರೀ ಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಚಾಲನೆ (Udupi) ಉಡುಪಿ: ಉತ್ಸವ ಪ್ರಿಯ ಉಡುಪಿ ಶ್ರೀ ಕೃಷ್ಣನಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ತಮ್ಮ ಚತುರ್ಥ ಪರ್ಯಾಯ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ   ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಇಂದು ಚಾಲನೆ ನೀಡಲಾಯಿತು.  ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರು ರಾಜಾಂಗಣದಲ್ಲಿ ಚಾಲನೆ ನೀಡಿದರು.  ಪುತ್ತಿಗೆ ಮಠದ ಸುಗುಣೇಂದ್ರ […]

(Udupi) ಉಡುಪಿ: ಉತ್ಸವ ಪ್ರಿಯ ಉಡುಪಿ ಶ್ರೀ ಕೃಷ್ಣನಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರು ತಮ್ಮ ಚತುರ್ಥ ಪರ್ಯಾಯ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ   ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಇಂದು ಚಾಲನೆ ನೀಡಲಾಯಿತು.

 ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದರು ರಾಜಾಂಗಣದಲ್ಲಿ ಚಾಲನೆ ನೀಡಿದರು.

 ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಮ್ಮ ಸನ್ಯಾಸದ ಸುವರ್ಣ ಮಹೋತ್ಸವದ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣದೇವರಿಗೆ ಪಾರ್ಥಸಾರಥಿ ಸುವರ್ಣ ರಥ ಅರ್ಪಿಸಲು ಸಂಕಲ್ಪಿಸಿದ್ದಾರೆ. ಮಂತ್ರಾಲಯ ಶ್ರೀಗಳ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಮಂತ್ರಾಲಯ ಶ್ರೀಗಳು, ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಕೈಗೊಂಡರು. ಬಳಿಕ ಪರ್ಯಾಯ ಮಠದ ವತಿಯಿಂದ ಸ್ವಾಮೀಜಿಯನ್ನು ಗೌರವಿಸಲಾಯಿತು.

ವಿಶೇಷ ಮೆರವಣಿಗೆಯಲ್ಲಿ ಕರೆತಂದು ರಾಜಾಂಗಣದಲ್ಲಿ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

 ಈ ಸಂದರ್ಭದಲ್ಲಿ ಉಡುಪಿಶಾಸಕ ಯಶ್ಪಾಲ್‌ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಹಾಜರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.