• Home  
  • ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ
- ಕರಾವಳಿ

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ

Share: ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಯಶ್ ಪಾಲ್ ಸುವರ್ಣ ರವರು ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರೊಂದಿಗೆ  ಸಭೆ ನಡೆಸಿದರು.  ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ […]

ಉಡುಪಿ ಶಾಸಕ ಯಶ್ಪಾಲ್‌ ಸುವರ್ಣರೊಂದಿಗೆ ಮೀನುಗಾರಿಕಾ ಇಲಾಖೆ,  ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರ ಸಭೆ

ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಯಶ್ ಪಾಲ್ ಸುವರ್ಣ ರವರು ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರ ಸಂಘಟನೆಯ ಪ್ರಮುಖರೊಂದಿಗೆ  ಸಭೆ ನಡೆಸಿದರು.

 ಸಭೆಯಲ್ಲಿ ಮುಂದಿನ ಮೀನುಗಾರಿಕಾ ಋತುವಿನ ಚಟುವಟಿಕೆಗೆ ಪೂರಕವಾಗಿ ಪಾಸ್ ಬುಕ್ ನವೀಕರಣ, ಬಂದರು ಸ್ವಚ್ಚತೆ, ಭದ್ರತೆ ಹಾಗೂ ಸುವ್ಯಸ್ಥಿತ ನಿರ್ವಹಣೆಗೆ ಸ್ಥಳೀಯ ಮೀನುಗಾರ ಸಂಘಟನೆಗಳಿಗೆ ನೀಡುವ ಬಗ್ಗೆ ಮಾರ್ಗಸೂಚಿ ತಯಾರಿಕೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ಪೂರಕ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದರು

ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ವಿವೇಕ್, ಬಂದರು ಇಲಾಖೆಯ ಅಭಿಯಂತರಾದ ಶ್ರೀನಿವಾಸ ಮೂರ್ತಿ, ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು, ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು, ಮಹಿಳಾ ಮೀನುಗಾರ ಸಂಘದ ಪದಾಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.